ಶಬರಿಮಲೆಗೆ ಮಹಿಳಾ ಪ್ರವೇಶ ಖಂಡಿಸಿ ಪ್ರತಿಭಟನೆ

ಕಾರ್ಕಳ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ‌ ಪ್ರವೇಶವನ್ನು ಖಂಡಿಸಿ‌ ಕಾರ್ಕಳದಲ್ಲಿ ಮೊಂಬತ್ತಿ ಹಿಡಿದು ಮೆರವಣಿಗೆಯ‌ ಮೂಲಕ‌ ವಿಭಿನ್ನವಾಗಿ ಪ್ರತಿಭಟಿ ಸಲಾಯಿತು. ವಿಶ್ವ ಹಿಂದೂ ಪರಿಷತ್ ಕಾರ್ಕಳ, ಬಜರಂಗ ದಳ, ಅಯ್ಯಪ್ಪ ಸ್ವಾಮಿ‌ ಸೇವಾ ಸಮಿತಿಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ನಗರದ ಅನಂತಶಯನದಿಂದ ಮುಖ್ಯರಸ್ತೆಯ ಮೂಲಕ ವೆಂಕಟರಮಣ ದೇವಸ್ಥಾನದವರೆಗೆ ಮೊಂಬತ್ತಿ ಹಿಡಿದು‌ ಮೆರವಣಿಗೆ ಸಾಗಿತು. ಬಜರಂಗ ದಳ‌ ರಾಜ್ಯ ಸಂಚಾಲಕ ಸುನಿಲ್‌ ಕೆ.ಆರ್., ಪ್ರಮುಖರಾದ ಮಹೇಶ್ ಬೈಲೂರು, ಗುರುಪ್ರಸಾದ್, ರತ್ನಾಕರ ಅಮೀನ್ ಸೇರಿದಂತೆ ನೂರಾರು ಮಂದಿ […]

ಜೀಪಿಗೊಂದು ಮಹಾಮಜ್ಜನ:ಸಮೀರ್ ಜೈನ್ ಕ್ಲಿಕ್ಕಿಸಿದ ಚಿತ್ರ

ಸಮೀರ್ ಜೈನ್ ಕಾರ್ಕಳದವರು, ಸುತ್ತಾಟಕ್ಕೆ ಹೋದಾಗಲೆಲ್ಲಾ ಕೆಮರದಲ್ಲಿ ಚೆಂದದ ಚಿತ್ರಗಳನ್ನು ಕ್ಲಿಕ್ಕಿಸೋದಂದ್ರೆ ಇವರಿಗೆ ಪಂಚಪ್ರಾಣ, ಇವರ ಚಿತ್ರಗಳಲ್ಲಿ ಬದುಕಿನ ನೈಜತೆ ಆಕರ್ಷಿಸುತ್ತದೆ. 

ಹಿರಿಯಡ್ಕ ಪ್ರ.ದರ್ಜೆ ಕಾಲೇಜು: ಜ.27 ರಂದು ಕ್ರೀಡಾಕೂಟ

ಉಡುಪಿ: ಹಿರಿಯಡ್ಕ ಪ್ರ.ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ದಶಮಾನೋತ್ಸವದ ಪ್ರಯುಕ್ತ ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಜ. 27 ರಂದು  ನಡೆಯಲಿದೆ. ಪೂರ್ವಾಹ್ನ 9.30ಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾl ನಿಕೇತನ ಇವರು  ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಕಾಲೇಜಿನ ಕ್ರೀಡಾಂಗಣದಲ್ಲಿ ಕೂಟ ನಡೆಯಲಿದೆ. ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಕ್ರಿಕೆಟ್, ವಾಲಿಬಾಲ್, ತ್ರೋಬಾಲ್, 100ಮೀ ಓಟ, ರಿಲೆ ಹಾಗೂ ಇನ್ನಿತರ ಸ್ಪರ್ಧೆಗಳು ನಡೆಯಲಿದೆ, ಹಿರಿಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಪ್ರಕಟನೆ ತಿಳಿಸಿದೆ.

ಜ.20; ಬ್ರಹ್ಮಾವರದಲ್ಲಿ ರಾಷ್ಟ್ರ ಮಟ್ಟದ ಮ್ಯಾರಥಾನ್ ಸ್ಪರ್ಧೆ

ಬ್ರಹ್ಮಾವರ: ಎಕ್ತಾ ಇವೆಂಟ್ ಮ್ಯಾನೇಜ್ಮೆಂಟ್ ಹಾಗೂ ಕಲ್ಯಾಣಿ ಸ್ಪೋಟ್ಸ್  ಸಂಯುಕ್ತ ಆಶ್ರಯದಲ್ಲಿ ಜ.20ರಂದು ಆರೋಗ್ಯದ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಬ್ರಹ್ಮಾವರದಲ್ಲಿ ರಾಷ್ಟ್ರ ಮಟ್ಟದ ಮ್ಯಾರಥಾನ್ ಕಾರ್ಯಕ್ರಮ ನಡೆಯಲಿದೆ. ಈ ಮ್ಯಾರಥಾನ್  ಕಮಿಟಿಯ ಗೌರವಾಧ್ಯಕ್ಷರು ಆಗಿರುವ  ಅಮೃತ್ ಶೆಣೈಯವರು  ಸಂಪೂರ್ಣ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಖಲೀಲ್ ಕೆರಾಡಿ ಬ್ರಹ್ಮಾವರದಲ್ಲಿ ನಡೆದ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಮ್ಯಾರಥಾನ್‍ನಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶವಿದ್ದು, ಸ್ಥಳದಲ್ಲೇ ನೋಂದಣಿಗೆ ಅವಕಾಶವಿದೆ ಹಾಗೂ ಸ್ಪರ್ಧೆಗೆ ಯಾವುದೇ ವಯೋಮಿತಿ ಇರುವುದಿಲ್ಲ. […]

ರಾಷ್ಟ್ರಮಟ್ಟದ ಡ್ರಾಯಿಂಗ್ ಸ್ಪರ್ಧೆ;ಟಾಪ್ ನೂರರಲ್ಲಿ ವಿಜೇತ ನಾಗಿ ಕಟಪಾಡಿಯ ಪ್ರಥಮ ಕಾಮತ್

ಉಡುಪಿ; ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆ ಸಕ್ಷಮ್ ವತಿಯಿಂದ ಹೊಸದಿಲ್ಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಡ್ರಾಯಿಂಗ್ ಸ್ಪರ್ಧೆಯಲ್ಲಿ ಕಟಪಾಡಿ ಎಸ್ ವಿ ಕೆ ಆಂಗ್ಲ ಮಾಧ್ಯಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ  ಕೆ. ಪ್ರಥಮ ಕಾಮತ್ ಟಾಪ್ 100ರಲ್ಲಿ ವಿಜೇತ ನಾಗಿ ಸಮಾಧಾನಕರ ಬಹುಮಾನ ಲೆನೋವ ಟ್ಯಾಬ್ ಅನ್ನು ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಲೋಕ್  ತ್ರಿಪಾಠಿ ಅವರಿಂದ ಸ್ವೀಕರಿಸಿದನು . ಉಡುಪಿಯ ದೃಶ್ಯ ಸ್ಕೂಲ್ ಆಫ್ ಆರ್ಟ್ಸ್ ನ  ವಿದ್ಯಾರ್ಥಿಯಾದ ಈತ ಕಟಪಾಡಿಯ ನಾಗೇಶ್ ಕಾಮತ್, ಕೆ. ಸುಜಾತಾ ಕಾಮತ್ […]