ಶಬರಿಮಲೆಗೆ ಮಹಿಳಾ ಪ್ರವೇಶ ಖಂಡಿಸಿ ಪ್ರತಿಭಟನೆ

ಕಾರ್ಕಳ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ‌ ಪ್ರವೇಶವನ್ನು ಖಂಡಿಸಿ‌ ಕಾರ್ಕಳದಲ್ಲಿ ಮೊಂಬತ್ತಿ ಹಿಡಿದು ಮೆರವಣಿಗೆಯ‌ ಮೂಲಕ‌ ವಿಭಿನ್ನವಾಗಿ ಪ್ರತಿಭಟಿ ಸಲಾಯಿತು. ವಿಶ್ವ ಹಿಂದೂ ಪರಿಷತ್ ಕಾರ್ಕಳ, ಬಜರಂಗ ದಳ, ಅಯ್ಯಪ್ಪ ಸ್ವಾಮಿ‌ ಸೇವಾ ಸಮಿತಿಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ನಗರದ ಅನಂತಶಯನದಿಂದ ಮುಖ್ಯರಸ್ತೆಯ ಮೂಲಕ ವೆಂಕಟರಮಣ ದೇವಸ್ಥಾನದವರೆಗೆ ಮೊಂಬತ್ತಿ ಹಿಡಿದು‌ ಮೆರವಣಿಗೆ ಸಾಗಿತು.
ಬಜರಂಗ ದಳ‌ ರಾಜ್ಯ ಸಂಚಾಲಕ ಸುನಿಲ್‌ ಕೆ.ಆರ್., ಪ್ರಮುಖರಾದ ಮಹೇಶ್ ಬೈಲೂರು, ಗುರುಪ್ರಸಾದ್, ರತ್ನಾಕರ ಅಮೀನ್ ಸೇರಿದಂತೆ ನೂರಾರು ಮಂದಿ ಅಯ್ಯಪ್ಪ ಸ್ವಾಮಿ‌ ವೃತ ದಾರಿಗಳು, ಭಕ್ತರು, ಹಿಂದೂ ಸಂಘಟನೆ ಮುಖಂಡರು ಭಾಗವಹಿಸಿದ್ದರು.