ಸೌಕೂರು ಮೇಳ ಸ್ತ್ರೀ ಪಾತ್ರಧಾರಿ ದಿನೇಶ್ ಹೆನ್ನಾಬೈಲ್ ಹಾಗೂ ಪುಂಡು ವೇಷಧಾರಿ ಪ್ರಸನ್ನ ಆಚಾರ್ಯ;ರಸ್ತೆ ಅಪಘಾತದಲ್ಲಿ ನಿಧನ
ಕುಂದಾಪುರ: ಸೌಕೂರು ಮೇಳದ ಸ್ತ್ರೀ ಪಾತ್ರಧಾರಿ ದಿನೇಶ್ ಹೆನ್ನಾಬೈಲ್ ಹಾಗೂ ಪುಂಡು ವೇಷಧಾರಿ ಪ್ರಸನ್ನ ಆಚಾರ್ಯ – ಇಬ್ಬರೂ ರಾತ್ರಿಯ ಪ್ರದರ್ಶನಕ್ಕೆ ತೆರಳುತ್ತಿದ್ದಾಗ ಗುಣವಂತೆ ಎಂಬಲ್ಲಿ ಅಪಘಾತ ಸಂಭವಿಸಿ ನಿಧನರಾಗಿದ್ದಾರೆ . ಇಂದು ಸೌಕೂರು ಮೇಳದ ಪ್ರದರ್ಶನ ಮುರ್ಡೇಶ್ವರದಲ್ಲಿತ್ತು . ಪ್ರಸನ್ನರು ತಮ್ಮ ಊರಾದ ಹೊನ್ನಾವರಕ್ಕೆ ಇಂದು ಬೆಳಿಗ್ಗೆ ಬೈಕ್ ನಲ್ಲಿ ಸಹ ಕಲಾವಿದರಾದ ದಿನೇಶ್ ಹೆನ್ನಾಬೈಲರೊಂದಿಗೆ ತೆರಳುತಿದ್ದ ಸಂದರ್ಭ ಈ ಅಪಘಾತ ಸಂಭವಿಸಿದೆ .
ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣ ಜ.6ರಂದು ಮೀನುಗಾರರಿಂದ ಕರಾವಳಿಯಾದ್ಯಂತ ಪ್ರತಿಭಟನೆ
ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ‘ಸುವರ್ಣ ತ್ರಿಭುಜ’ ಬೋಟ್ ಹಾಗೂ 7 ಮೀನುಗಾರರು ಕಣ್ಮರೆಯಾಗಿ 19 ದಿನಗಳು ಕಳೆದರೂ ಬೋಟ್ ಮತ್ತು ಮೀನುಗಾರರನ್ನು ಪತ್ತೆ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ವೈಫಲ್ಯತೆಯನ್ನು ಖಂಡಿಸಿ ಹಾಗೂ ಪ್ರಕರಣವನ್ನು ಶೀಘ್ರವಾಗಿ ಪತ್ತೆ ಮಾಡುವಂತೆ ಒತ್ತಾಯಿಸಿ ಜ.6ರಂದು ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮೀನುಗಾರಿಕೆ ಸ್ಥಗಿತಗೊಳಿಸಿ ರಾಷ್ಟ್ರೀಯ ಹೆದ್ದಾರಿ 66 ಅನ್ನು ತಡೆದು ಪ್ರತಿಭಟನೆ ಮಾಡಲು ಮೀನುಗಾರರು ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಿದ್ದಾರೆ. ಮಲ್ಪೆ ಮೀನುಗಾರರ ಸಂಘ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ […]
ಶಬರಿಮಲೆಗೆ ಮಹಿಳೆಯರು ಪ್ರವೇಶ ಮಾಡಿರುವುದು ಸರಿಯಲ್ಲ: ಸಾಲುಮರದ ತಿಮ್ಮಕ್ಕ
ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶ ಮಾಡಿರುವುದು ಸರಿಯಲ್ಲ ಅಂತ ಸಾಲುಮರದ ತಿಮ್ಮಕ್ಕ ಹೇಳಿದ್ದಾರೆ. ದೇವಸ್ಥಾನಕ್ಕೆ ಸೂತಕವಾಗುವ ಹೆಂಗಸರು ಹೋಗಬಾರದೆಂದು ಅನೇಕ ವರ್ಷಗಳಿಂದ ಬಂದತಂತಹ ಸಂಪ್ರದಾಯವಿದೆ. ನನ್ನಷ್ಟು ವಯಸ್ಸಾದ ಮೇಲೆ ಅಲ್ಲಿಗೆ ಹೋಗಿ ದೇವರ ದರ್ಶನ ಪಡೆಯಬಹುದು. ನಾನು ವಯಸ್ಸಾದ ಮೇಲೆ ಹೋಗಿದ್ದೇನೆ ಎಂದು ಹೇಳಿದರು. ಕಾಲೇಜು ಉಪನ್ಯಾಸಕಿಯಾದ ಬಿಂದು(44) ಹಾಗೂ ನಾಗರಿಕ ಸರಬರಾಜು ಇಲಾಖೆಯ ಸಿಬ್ಬಂದಿ ಕನಕದುರ್ಗ(42) ಎಂಬಿಬ್ಬರು ಮಹಿಳೆಯರು ಮಾನ-ಮರ್ಯಾದೆ ಇಲ್ಲದೇ ದೇವರ ದರ್ಶನ ಪಡೆಯಲು ಹೋಗಿದ್ದಾರೆ. ಇಬ್ಬರು ಮಧ್ಯರಾತ್ರಿ ಬೆಟ್ಟವನ್ನು ಹತ್ತಿ ಇಂದು ಬೆಳಗ್ಗೆ 3.45ಕ್ಕೆ ದೇವಾಲಯವನ್ನು […]
ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರ, ಧಾರ್ಮಿಕ ಸಂವಿಧಾನ ಮುರಿಯುವುದು ಸರಿಯಲ್ಲ: ಪಲಿಮಾರು ಶ್ರೀ
ಉಡುಪಿ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ಧಾರ್ಮಿಕ ಸಂವಿಧಾನವನ್ನು ಮುರಿಯುವುದು ಸರಿಯಲ್ಲ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು. ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಸಂಪೂರ್ಣವಾಗಿ ನಿಷೇಧಿಸಲಾಗಿಲ್ಲ. ನಿರ್ದಿಷ್ಟ ವಯೋಮಾನದ ಮಹಿಳೆಯರು ಪ್ರವೇಶ ಮಾಡಬಾರದು ಎಂಬ ನಿಯಮಗಳಿವೆ. ಭಕ್ತಿಯಿಂದ ದೇವಸ್ಥಾನ ಪ್ರವೇಶಿಸಿದರೆ ತಪ್ಪಲ್ಲ, ಬಲಾತ್ಕಾರದಿಂದ ದೇವಸ್ಥಾನ ಪ್ರವೇಶಿಸಬಾರದು ಎಂದರು. ಸರ್ಕಾರದ ಮಟ್ಟದಲ್ಲಿ ಕೆಲವೊಂದು ಶಿಷ್ಟಾಚಾರಗಳಿದ್ದು, ಅದನ್ನು ಕಡ್ಡಾಯವಾಗಿ ಪಾಲಿಸಲಾಗುತ್ತದೆ. ಹಾಗೆಯೇ ಧರ್ಮಕ್ಷೇತ್ರಗಳಲ್ಲಿ ಧಾರ್ಮಿಕ ಸಂವಿಧಾನ ಅಸ್ತಿತ್ವದಲ್ಲಿದೆ. […]