ಸುವರ್ಣ ತ್ರಿಭುಜ ಬೋಟ್ ಕಣ್ಮರೆ ವಿಚಾರ ನನ್ನ ಗಮನಕ್ಕೆ ಬಂದೇ ಇಲ್ಲ: ಪೇಜಾವರ ಶ್ರೀ

ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ‘ಸುವರ್ಣ ತ್ರಿಭುಜ’ ಬೋಟ್ ಸಹಿತ ಏಳು ಮೀನುಗಾರರ ಕಣ್ಮರೆಯಾಗಿರುವ ಘಟನೆ ನಡೆದು 18 ದಿನಗಳಾಗಿದ್ದರೂ ಈ ವಿಚಾರ ನನ್ನ ಗಮನಕ್ಕೆ ಬಂದೇ ಇರಲಿಲ್ಲ. ಇವತ್ತು ವಿಷಯ ಗೊತ್ತಾಗಿದೆ. ಇದರಿಂದ ಮನಸ್ಸಿಗೆ ಅತ್ಯಂತ ಆತಂಕ ಆಗಿದೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ. ಇಂದು ವಿಡಿಯೋ ತುಣುಕೊಂದನ್ನು ಬಿಡುಗಡೆ ಮಾಡಿ ಅದರಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಬೋಟ್ ನಾಪತ್ತೆಯಾಗಿರುವ ವಿಷಯ ಪತ್ರಿಕೆಗಳಲ್ಲಿ ಬಂದಿರಬಹುದು. ಆದರೆ ಇದು ನನ್ನ […]

ಜ. 5: ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ

ಕಾರ್ಕಳ :ಕಾರ್ಕಳದ ಪ್ರಸಿದ್ಧ  ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ ಜ. ೫ರಂದು ನಡೆಯಲಿದೆ ಎಂದು  ಶಾಸಕ, ಮಿಯ್ಯಾರು ಕಂಬಳ ಸಮಿತಿಯ ಅಧ್ಯಕ್ಷ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ. ಅವರು ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಜ.೫ ರ  ಬೆಳಿಗ್ಗೆ ೮ ಗಂಟೆಗೆ ಕಂಬಳ ಮಹೋತ್ಸವದ ಉದ್ಘಾಟನೆ ನಡೆಯಲಿದೆ, ಅಂದು ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲ, ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯಿಲಿ, ವಿದಾನ ಪರಿಷತ್ ವಿರೋಧ ಪಕ್ಷದ ಸದಸ್ಯ ಕೋಟ ಶ್ರೀನಿವಾಸ […]

ದೇಶದ ರಾಜಕಾರಣಕ್ಕೆ ಕಾಂಗ್ರೆಸ್ ಅನಿವಾರ್ಯ: ಗೋಪಾಲ ಭಂಡಾರಿ

ಕಾರ್ಕಳ: ದೇಶದ ರಾಜಕಾರಣಕ್ಕೆ ಕಾಂಗ್ರೆಸ್ ಅನಿವಾರ್ಯ. ಭಾರತದ ೭೦ ವರ್ಷಗಳ ಇತಿಹಾಸದಲ್ಲಿ ಕಾಂಗ್ರೆಸ್ ಹೊರತುಪಡಿಸಿ, ಅನ್ಯಪಕ್ಷಗಳ ಯಾವ ಸರಕಾರಗಳು ಅವಧಿ ಪೂರ್ಣಗೊಳಿಸಿಲ್ಲ, ಅವಧಿಪೂರ್ಣಗೊಳಿಸಿದ ವಾಜಪೇಯಿ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದಿಲ್ಲ ಎಂದು ಶಾಸಕ ಎಚ್. ಗೋಪಾಲ ಭಂಡಾರಿ ಹೇಳಿದರು.ಪುರಸಭೆ ವ್ಯಾಪ್ತಿಯ ಕಾಳಿಕಾಂಬಾ ಪರಿಸರದಲ್ಲಿ ನಗರ ಕಾಂಗ್ರೆಸ್ ಆಯೋಜಿಸಿದ್ದ ಸುಭದ್ರ ಭಾರತಕ್ಕಾಗಿ ಶಕ್ತಿ ಸಂಘಟನೆ’ ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು. ನಗರಾಧ್ಯಕ್ಷ ಮಧು ರಾಜ್ ಶೆಟ್ಟಿ ಮಾತನಾಡಿ, ರಾಹುಲ್ ಗಾಂಧಿ ಅವರ ಶಕ್ತಿ ಕಾರ್ಯಕ್ರಮ ಪಕ್ಷಕ್ಕೆ ಯಾಥಾರ್ಥದಲ್ಲಿ ಶಕ್ತಿ ತುಂಬುವ […]

ಕಾರ್ಕಳ :ಹಿಂದೂ ಆಂದೋಲನದ ವತಿಯಿಂದ ಪ್ರತಿಭಟನೆ

ಕಾರ್ಕಳ: ಚಿಕ್ಕಮಗಳೂರಿನ ದತ್ತಪೀಠದಲ್ಲಿ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು, ಮೈಸೂರಿನ ಹಿಂದುತ್ವವಾದಿಗಳ ಸರಣಿ ಹಂತಕ ಅಬಿದ್ ಪಾಷಾನನ್ನು ಬಂಧಿಸಬೇಕು ಎಂದು ಆಗ್ರಹಿಸಿ ಹಿಂದೂ ಆಂದೋಲನ ಕಾರ್ಕಳದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿತು. ಸನಾತನ ಸಂಸ್ಥೆ ಹಾಗೂ ಜನಜಾಗೃತಿ ಸಮಿತಿ ಸಹಿತ ಇತರ ಹಿಂದುತ್ವವಾದಿ ಸಂಘಟನೆಗಳನ್ನು ಸಿಲುಕಿಸುವ ಷಡ್ಯಂತ್ರ ಮಾಡಲಾಗುತ್ತಿದೆ. ನಾಲಾಸೋಪಾರ ಪ್ರಕರಣ ಮತ್ತು ಗೌರಿ ಲಂಕೇಶ್ ಹತ್ಯೆಯ ಪ್ರಕರಣದಲ್ಲಿ ಬಂಧಿಸಿರುವವರ ಪೈಕಿ ಒಬ್ಬರು ಕೂಡ ಸನಾತನ ಸಂಸ್ಥೆಯ  ಅಥವಾ ಹಿಂದೂ ಜಾಗೃತಿ ಸಮಿತಿಯ ಪದಾಧಿಕಾರಿಗಳಲ್ಲ. ಉದ್ದೇಶವಿಟ್ಟು ಅವರನ್ನು […]

ಘನತ್ಯಾಜ್ಯ ನಿರ್ವಹಣೆಗೆ 2.67 ಕೋ.ರೂ. ಬಿಡುಗಡೆ: ಸುನಿಲ್ ಕುಮಾರ್

ಕಾರ್ಕಳ: ನಗರದ ಕಾಬೆಟ್ಟು ಪರಿಸರದಲ್ಲಿ ಶೇಖರಣೆಯಾಗುವ ಘನತ್ಯಾಜ್ಯ ಸಂಸ್ಕರಣೆ ಮತ್ತು ನಿರ್ವಹಣೆಗೆ ೨.೬೭ ಕೋ.ರೂ. ಸರಕಾರ ಮಂಜೂರಾತಿ ಮಾಡಿದ್ದು, ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ. ಮಂಗಳವಾರ  ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಕಾಬೆಟ್ಟು ಭಾಗದಲ್ಲಿ ಕಲ್ಮಶಗಳು ಶೇಖರಣೆಯಾಗಿ ಆ ಭಾಗದಲ್ಲಿ ಬಾವಿಗಳ ಕುಡಿಯುವ ನೀರು ಮಲೀನವಾಗುತ್ತಿದೆ. ಅನೇಕ ವರ್ಷಗಳ ಸಮಸ್ಯೆ ಇದಾಗಿದ್ದು, ಮುಂದೆ ಅದನ್ನು ಎರಡು ರೀತಿಯಲ್ಲಿ ಈ ನಿರ್ವಹಣೆ ಮಾಡಲಾಗತ್ತದೆ. ಕಲ್ಮಶ ತುಂಬುವ ಜಾಗದಿಂದ ವಾಹನದಲ್ಲಿ ತೆಗೆದು ಮಾಡಿ ತರಲಾಗುತ್ತದೆ. […]