ಕಾರ್ಕಳ: ಚಿಕ್ಕಮಗಳೂರಿನ ದತ್ತಪೀಠದಲ್ಲಿ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು, ಮೈಸೂರಿನ ಹಿಂದುತ್ವವಾದಿಗಳ ಸರಣಿ ಹಂತಕ ಅಬಿದ್ ಪಾಷಾನನ್ನು ಬಂಧಿಸಬೇಕು ಎಂದು ಆಗ್ರಹಿಸಿ ಹಿಂದೂ ಆಂದೋಲನ ಕಾರ್ಕಳದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿತು.
ಸನಾತನ ಸಂಸ್ಥೆ ಹಾಗೂ ಜನಜಾಗೃತಿ ಸಮಿತಿ ಸಹಿತ ಇತರ ಹಿಂದುತ್ವವಾದಿ ಸಂಘಟನೆಗಳನ್ನು ಸಿಲುಕಿಸುವ ಷಡ್ಯಂತ್ರ ಮಾಡಲಾಗುತ್ತಿದೆ. ನಾಲಾಸೋಪಾರ ಪ್ರಕರಣ ಮತ್ತು ಗೌರಿ ಲಂಕೇಶ್ ಹತ್ಯೆಯ ಪ್ರಕರಣದಲ್ಲಿ ಬಂಧಿಸಿರುವವರ ಪೈಕಿ ಒಬ್ಬರು ಕೂಡ ಸನಾತನ ಸಂಸ್ಥೆಯ ಅಥವಾ ಹಿಂದೂ ಜಾಗೃತಿ ಸಮಿತಿಯ ಪದಾಧಿಕಾರಿಗಳಲ್ಲ. ಉದ್ದೇಶವಿಟ್ಟು ಅವರನ್ನು ಗುರಿಯಾಗಿಸುವುದು ಖಂಡನೀಯ ಎಂದು ಪ್ರತಿಭಟನಾಕಾರರು ಹೇಳಿದರು.
ದತ್ತಪೀಠದಲ್ಲಿ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು. ಮೈಸೂರಿನ ಹಿಂದುತ್ವವಾದಿಗಳ ಸರಣಿ ಹತ್ಯೆಯ ಆರೋಪಿ ಅಬಿದ್ ಪಾಷಾನಿಗೆ ನೀಡಿರುವ ಜಾಮೀನು ರದ್ದುಗೊಳಿಸಿ, ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪ್ರತಿ`ಟನಾಕಾರರು ಒತ್ತಾಯಿಸಿದರು.