ಘನತ್ಯಾಜ್ಯ ನಿರ್ವಹಣೆಗೆ 2.67 ಕೋ.ರೂ. ಬಿಡುಗಡೆ: ಸುನಿಲ್ ಕುಮಾರ್

ಕಾರ್ಕಳ: ನಗರದ ಕಾಬೆಟ್ಟು ಪರಿಸರದಲ್ಲಿ ಶೇಖರಣೆಯಾಗುವ ಘನತ್ಯಾಜ್ಯ ಸಂಸ್ಕರಣೆ ಮತ್ತು ನಿರ್ವಹಣೆಗೆ ೨.೬೭ ಕೋ.ರೂ. ಸರಕಾರ ಮಂಜೂರಾತಿ ಮಾಡಿದ್ದು, ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ಮಂಗಳವಾರ  ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಕಾಬೆಟ್ಟು ಭಾಗದಲ್ಲಿ ಕಲ್ಮಶಗಳು ಶೇಖರಣೆಯಾಗಿ ಆ ಭಾಗದಲ್ಲಿ ಬಾವಿಗಳ ಕುಡಿಯುವ ನೀರು ಮಲೀನವಾಗುತ್ತಿದೆ. ಅನೇಕ ವರ್ಷಗಳ ಸಮಸ್ಯೆ ಇದಾಗಿದ್ದು, ಮುಂದೆ ಅದನ್ನು ಎರಡು ರೀತಿಯಲ್ಲಿ ಈ ನಿರ್ವಹಣೆ ಮಾಡಲಾಗತ್ತದೆ. ಕಲ್ಮಶ ತುಂಬುವ ಜಾಗದಿಂದ ವಾಹನದಲ್ಲಿ ತೆಗೆದು ಮಾಡಿ ತರಲಾಗುತ್ತದೆ. ಹಾಗೂ ಟ್ರೀಟ್‌ಮೆಂಟ್ ಪ್ಲ್ಯಾಂಟ್‌ನಲ್ಲಿ ತ್ಯಾಜ್ಯದ ನೀರನ್ನು ಸಂಸ್ಕರಿಸುವ ಸೌಲಭ್ಯವನ್ನು ಮಾಡಲಾಗಿದೆ. ಅನಂತರ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಮಿಶ್ರಗೊಬ್ಬರವನ್ನಾಗಿ ಮಾಡಲಾಗುತ್ತದೆ. ಪ್ರಾಯೋಗಿಕವಾಗಿ ಈ ಯೋಜನೆಯನ್ನು ಬೆಂಗಳೂರಿನ ದೇವನಹಳ್ಳಿಯಲ್ಲಿ ಮಾಡಲಾಗಿದ್ದು, ಯಶಸ್ವಿಯಾಗಿದೆ ಎಂದರು.

ಪಾಲಿಟೆಕ್ನಿಕ್ ಕಾಲೇಜಿನ ಹಾಸ್ಟೆಲ್ ನಿರ್ಮಾಣಕ್ಕಾಗಿ ಸರಕಾರದಿಂದ ೧.೫೦ ಕೋ.ರೂ.:

ಕಾರ್ಕಳದ ಪಾಲಿಟೆಕ್ನಿಕ್ ಕಾಲೇಜಿನ ಹಾಸ್ಟೆಲ್ ನಿರ್ಮಾಣಕ್ಕಾಗಿ ಸರಕಾರ ೧.೫೦ ಕೋ.ರೂ. ಮಂಜೂರಾತಿ ಮಾಡಿದೆ. ಹೊಸ್ಮಾರು ಸರಕಾರಿ ಪ್ರೌಢಶಾಲೆಯ ಹೆಚ್ಚುವರಿ ಕಟ್ಟಡಕ್ಕೆ ೨೧ ಲಕ್ಷ ರೂ., ಹೆರ್ಮುಂಡೆ ಶಾಲೆಗೆ ೧೦ ಲಕ್ಷ ರೂ., ಬೋಳ ಬ್ರಹ್ಮಬೈದರ್ಕ ಗರಡಿಗೆ ೩ ಲಕ್ಷ, ಈದು ಮೂಜುಳ್ನಾಯ ದೇವಸ್ಥಾನಕ್ಕೆ ೫ ಲಕ್ಷ, ತೆಳ್ಳಾರು ಕೊಡಮಣಿತ್ತಾಯ ಗರಡಿ ೬ ಲಕ್ಷ ರೂ. ಸರಕಾರ ಬಿಡುಗಡೆ ಮಾಡಿದೆ ಎಂದರು