ಮಣಿಪಾಲ:ಅಧಿಕಾರಿಯ ನಿವಾಸದ ಮೇಲೆ ಎಸಿಬಿ ದಾಳಿ

ಉಡುಪಿ: ಈ ಹಿಂದೆ ಉಡುಪಿ ನಗರಸಭೆ ಪೌರಾಯುಕ್ತರಾಗಿದ್ದ ಮಂಜುನಾಥಯ್ಯ ಅವರ ಮಣಿಪಾಲ ನಿವಾಸದ ಫ್ಲ್ಯಾಟ್ ಮೇಲೆ ಎಸಿಬಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಮೂಲ ಶಿಕ್ಷಣ ಇಲಾಖೆ ಅಧಿಕಾರಿಯಾಗಿದ್ದ ಮಂಜುನಾಥಯ್ಯ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ರಾಜಕೀಯ ಪ್ರಭಾವ ಬಳಸಿ ಉಡುಪಿ ನಗರಸಭೆ ಪೌರಾಯುಕ್ತ ಸ್ಥಾನದಲ್ಲಿ ಖಾಯಂ ಟಿಕಾಣಿ ಹೂಡಿದ್ದರು. ವಿಧಾನಸಭೆ ಚುನಾವಣೆ ಬಳಿಕ ಇತ್ತೀಚಿಗೆ ಶಿಕ್ಷಣ ಇಲಾಖೆ ನಿಯುಕ್ತಿಗೊಳಿಸಲಾಗಿತ್ತು. ಮಂಗಳೂರು ಶಿಕ್ಷಣ ಇಲಾಖೆಯೊಂದರ ಅಧಿಕಾರಿಯಾಗಿ ಪ್ರಸ್ತುತ ಕಾರ್ಯನಿರ್ವಹಿಸುತಿದ್ದಾರೆ.

ಸ್ವಲ್ಪ ಖಾರ, ಸವಿಯೋಣ ಬಾರಾ: ಒಂದ್ ಪ್ಲೇಟ್ ಬಜ್ಜಿ with ಖಾರ ಜಾಮೂನ್

ಒಂದ್ ಪ್ಲೇಟ್ ಬಜ್ಜಿ ವಿಥ್ ಖಾರ ಜಾಮೂನ್ ತಿನ್ನೋ ಸ್ವರ್ಗ ಸುಖದ ಗಮ್ಮತ್ತೇ ಬೇರೆ, ಇಲ್ಲಿದೆ ನೋಡಿ, ಬಜ್ಜಿ ಹಾಗೂ ಖಾರ ಜಾಮೂನು ಮಾಡುವ ವಿಧಾನ. ಫ್ರೀ ಇದ್ದಾಗ ಮಾಡಿ ತಿನ್ನಿ ಆಮೇಲೆ ನೋಡಿ ಅದ್ರ ಸುಖ ಅಕ್ಕಿ ಹುರಿಗಡಲೆ ಬಜ್ಜಿ ತಿಂದಿದ್ದೀರಾ? ಬೇಕಾಗುವ ಸಾಮಗ್ರಿಗಳು:  ಅಕ್ಕಿ ಹಿಟ್ಟು 1 ಪಾವು, ಹುರಿಗಡಲೆ ಅಥವಾ ಪುಟಾಣಿ ಪುಡಿ ಅರ್ಧ ಪಾವು, ಬೆಣ್ಣೆ ಒಂದು ಮುದ್ದೆ, ನಾಲ್ಕು ಟೀ ಚಮಚ ಎಣ್ಣೆ, ಇಂಗು ಹಸಿಮೆಣಸಿನಕಾಯಿ 2, ಕರಿಬೇವಿನ ಸೊಪ್ಪು, […]

ಡಿ.29:ತೆಂಕು-ಬಡಗಿನ ಅಪರೂಪದ ಯಕ್ಷಚಿತ್ತಾರಕ್ಕೆ ಸಾಕ್ಷಿಯಾಗಲಿದೆ ಯಕ್ಷಕಾಶಿ ಕುಂದಾಪುರ

ಕುಂದಾಪುರ: ಇಂದಿನ ಕಾಲಘಟ್ಟದಲ್ಲಿ ಡೇರೆ ಮೇಳಗಳ ಪೌರಾಣಿಕ ಕಥಾ ಹಂದರ ಪ್ರದರ್ಶನಗೊಳ್ಳುವುದೇ ಅಪರೂಪವಾಗಿರುವಾಗ ,ತೆಂಕು-ಬಡಗು ಎರಡು ಮೇಳಗಳ ಗಜಗಟ್ಟಿಕಲಾವಿದರು ಒಂದೇ ವೇದಿಕೆಯಲ್ಲಿ ಒಟ್ಟು ಸೇರಿ ಹಳೆಯ ಪ್ರಸಂಗವೊಂದಕ್ಕೆ ಹೆಜ್ಜೆ ಹಾಕಿ, ಮಾತಿನ ಮಂಟಪ ಕಟ್ಟಿದರೆ ಹೇಗಾಗಬಹುದು.ಬಹುಷಃ ಪೌರಾಣಿಕ ಪ್ರಿಯರ ಪಾಲಿಗೆ ಅದೊಂದು ಹಬ್ಬವಾಗಬಹುದು.ಅಂತಹ ಒಂದು ಕೂಡಾಟದ ಯಕ್ಷ ಜಾತ್ರೆಗೆ ಡಿಸೆಂಬರ್ 29ರಂದು ಶನಿವಾರ ಕುಂದಾಪುರ ಗಾಂಧಿ ಮೈದಾನದಲ್ಲಿ ಸಾಕ್ಷಿಯಾಗಲಿದೆ. ತೆಂಕಿನ ಗತ್ತು- ಬಡಗಿನ ಗೈರತ್ತುಗಳು ಯಕ್ಷ ಕಾಶಿಯಲ್ಲಿ ಅಂದು ನಡೆಯಲಿದೆ . ಸುಂದರ ಪರಿಕಲ್ಪನೆಗಳ ಯಕ್ಷಸಂಘಟಕ ವೈ.ಕು.ಸುಂದರ್ ಸಂಯೋಜನೆಯಲ್ಲಿ ಸಂಘಟಿತವಾಗುವ ಈ ಕೂಡಾಟದಲ್ಲಿ […]

ದಿನೇಶ್ ಅಮೀನ್ ಮಟ್ಟು ಯಾತಕ್ಕಾಗಿ ಅರಳು-ಮರಳು ಹೇಳಿದ್ದರೋ ಗೊತ್ತಿಲ್ಲ: ಪೇಜಾವರ ಶ್ರೀ

ಉಡುಪಿ: ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಯಾವ ಉದ್ದೇಶವಿಟ್ಟುಕೊಂಡು ‘ಅರಳು ಮರಳು’ ಹೇಳಿಕೆ ನೀಡಿದರೋ ಗೊತ್ತಿಲ್ಲ. ಎದುರಿಗೆ ಸಿಕ್ಕಾಗ ಗೌರವಯುತವಾಗಿ ಮಾತನಾಡುತ್ತಾರೆ. ಆದರೆ, ಹಿಂದಿನಿಂದ ಮಾತ್ರ ಟೀಕೆ ಮಾಡುತ್ತಲೇ ಇರುತ್ತಾರೆ. ಇಂತಹ ನಡವಳಿಕೆ ಸರಿಯಲ್ಲ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ತಿರುಗೇಟು ನೀಡಿದರು. ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು ದಲಿತರು ಪ್ರವೇಶ ಮಾಡಿದ್ದಕ್ಕೆ ಉಡುಪಿಯನ್ನು ಸ್ವಚ್ಛಗೊಳಿಸಲು ಮುಂದಾಗಲಿಲ್ಲ. ಎಡಬಿಡಂಗಿ ಹೋರಾಟಗಾರರು ಪ್ರತಿಭಟನೆ ಮಾಡಿದ್ದಕ್ಕೆ ಶಿಷ್ಯರು ಶುದ್ಧಿಗೊಳಿಸಲು ಮುಂದಾಗಿದ್ದಾರೆ. ಭಿನ್ನಾಭಿಪ್ರಾಯಗಳ ಕುರಿತು ಅವರೊಂದಿಗೆ ಬಹಿರಂಗವಾಗಿ ಚರ್ಚಿಸಲು ಸಿದ್ಧ. ಉಡುಪಿ […]

ಸಾರಿಗೆ ಸಂಸ್ಥೆಗಳ ಬಸ್‌ ಪ್ರಯಾಣ ದರ ಹೆಚ್ಚಳ: ಶೀಘ್ರ ಪ್ರಸ್ತಾವ

ಬೆಂಗಳೂರು: ಸಾರಿಗೆ ಸಂಸ್ಥೆಗಳ ಬಸ್‌ ಪ್ರಯಾಣ ದರ ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮತ್ತೊಮ್ಮೆ ಪ್ರಸ್ತಾವ ಸಲ್ಲಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರು ಈ‌ ಹಿಂದೆ ಶೇ 18ರಷ್ಟು ಪ್ರಯಾಣ ದರ ಏರಿಕೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಈಗ ಮತ್ತೆ ಪ್ರಸ್ತಾವ ಸಲ್ಲಿಸಿ ವಿವೇಚನೆಗೆ ಅನುಸಾರವಾಗಿ ದರ ಏರಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು ಎಂದರು. ಬುಧವಾರ ನಡೆದ ಮಂಡಳಿ ಸಭೆಯಲ್ಲಿ ಸಾರಿಗೆ ನಿಗಮಗಳ ಆಡಳಿತ ನಿರ್ದೇಶಕರು […]