“ಕೆಜಿಎಫ್” ಬರೀ 5 ದಿನಕ್ಕೆ ನೂರು ಕೋಟಿ ಕಲೆಕ್ಷನ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಕಲೆಕ್ಷನ್ 100 ಕೋಟಿ ಗಳಿಕೆ ಮಾಡಿದೆ. ಬಿಡುಗಡೆಯಾದ ಬರೀ 5 ದಿನಕ್ಕೆ ನೂರು ಕೋಟಿ ಕಲೆಕ್ಷನ್ ಮಾಡಿ ಎಲ್ಲರನ್ನು ಆಶ್ಚರ್ಯ ಆಗುವಂತೆ ಮಾಡಿದೆ. ಈ ಹಿಂದೆ ಬಾಲಿವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ಮಾತ್ರವಲ್ಲದೆ ಮರಾಠಿಯ ಸಿನಿಮಾ ಕೂಡ ನೂರು ಕೋಟಿ ಗಳಿಕೆ ಮಾಡಿತ್ತು. ಕನ್ನಡ ಸಿನಿಮಾಭಿಮಾನಿಗಳು ನಮ್ಮ ಸಿನಿಮಾಗಳು ಯಾವಾಗ ಈ ರೀತಿ ಮಾಡೋದು ಅಂತ ಕಾಯುತ್ತಿದ್ದರು. ಅಂತೂ ಕನ್ನಡದ ‘ಕೆಜಿಎಫ್’ ಸಿನಿಮಾ ಬರೀ 5 ದಿನಕ್ಕೆ 100 […]

‘ಮಹಿಳೆಯ ಬ್ಯಾಗ್ ಸುಲಿಗೆ ಪ್ರಕರಣ’: ಇಬ್ಬರು ಆರೋಪಿಗಳ‌ ಬಂಧನ

ಉಡುಪಿ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆಎಂಸಿ ಆಸ್ಪತ್ರೆಯ ಬಾಳಿಗಾ ಬ್ಲಾಕ್ ಬಳಿ ಡಿ.25ರಂದು ನಡೆದ ಒಂಟಿ ಮಹಿಳೆಯ ಬ್ಯಾಗ್ ಕಸಿದುಕೊಂಡು 87 ಸಾವಿರ ಮೌಲ್ಯದ ಸೊತ್ತುಗಳನ್ನು ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ. ಪ್ರಕರಣವನ್ನು ಒಂದೇ ದಿನದಲ್ಲಿ ಭೇದಿಸಿದ ಮಣಿಪಾಲ ಪೊಲೀಸರು, ಆರೋಪಿಗಳಾದ ಉದ್ಯಾವರ ಗ್ರಾಮದ ನಿವಾಸಿ ಮಹ್ಮದ್ ಫಹಾದ್ (19) ಹಾಗೂ ಇನ್ನೊರ್ವ ಬಾಲಕನನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಬೈಕ್ ನಲ್ಲಿ ಬಂದಿದ್ದ ಈ ಇಬ್ಬರು ಆರೋಪಿಗಳು ಡಿ.25ರಂದು ಮಣಿಪಾಲ ಕೆಎಂಸಿ […]

‘ಸುವರ್ಣ ತ್ರಿಭುಜ’ ಮೀನುಗಾರಿಕೆ ಬೋಟ್ ನಾಪತ್ತೆ ಪ್ರಕರಣ: 11 ದಿನ ಕಳೆದರೂ ಯಾವುದೇ ಸುಳಿವು ಸಿಕ್ಕಿಲ್ಲ

ಉಡುಪಿ: ಮಲ್ಪೆ ಬಂದರಿನಿಂದ ಬೋಟಿನ ಮಾಲೀಕರು ಸೇರಿದಂತೆ ಒಟ್ಟು ಏಳು ಮಂದಿ ಮೀನುಗಾರರೊಂದಿಗೆ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ‘ಸುವರ್ಣ ತ್ರಿಭುಜ’ ಮೀನುಗಾರಿಕಾ ಬೋಟ್ ನಾಪತ್ತೆಯಾಗಿ 11 ದಿನಗಳು ಕಳೆದರೂ ಯಾವುದೇ ಸುಳಿವು ದೊರೆತ್ತಿಲ್ಲ ಎಂದು ವಿವಿಧ ಮೂಲಗಳಿಂದ ತಿಳಿದುಬಂದಿದೆ.   ಇದೀಗ ಬೋಟ್ ಪತ್ತೆಗಾಗಿ ಮಂಗಳೂರು, ಗೋವಾ ಹಾಗೂ ಮಹಾರಾಷ್ಟ್ರದ ಕೋಸ್ಟ್ ಗಾರ್ಡ್ ತನ್ನೆರಡು ಹೆಲಿಕಾಫ್ಟರ್ ಗಳೊಂದಿಗೆ ಗೋವಾ, ಮಹಾರಾಷ್ಟ್ರ ಹಾಗೂ ರತ್ನಗಿರಿಯ ಸಮುದ್ರದುದ್ದಕ್ಕೂ ಹುಡುಕಾಟ ನಡೆಸಿದೆ. ಇಂದು ನೌಕಾ ಪಡೆಯ ಹಡಗು ಹಾಗೂ ಸಿಬ್ಬಂದಿಗಳು […]

ಶ್ರೀಕೃಷ್ಣಮಠಕ್ಕೆ ರಾಷ್ಟ್ರಪತಿ ಭೇಟಿ: ನಗರದಾದ್ಯಂತ ಪೊಲೀಸ್ ಕಣ್ಗಾವಲು

ಉಡುಪಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಉಡುಪಿಗೆ ಭೇಟಿ ನೀಡಲಿದ್ದು, ಮೊದಲು ಶ್ರೀಕೃಷ್ಣಮಠಕ್ಕೆ ತೆರಳಿ ದೇವರ ದರ್ಶನ ಪಡೆಯುವರು. ಬಳಿಕ ಪೇಜಾವರ ಮಠದಲ್ಲಿ ನಡೆಯುವ ಪೇಜಾವರ ಶ್ರೀಗಳ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸುವರು. ರಾಷ್ಟ್ರಪತಿಗಳನ್ನು ಬರಮಾಡಿಕೊಳ್ಳಲು ಜಿಲ್ಲಾಡಳಿತ ಸಕಲ ರೀತಿಯ ಸಿದ್ದತೆ ಮಾಡಿಕೊಂಡಿದೆ. ರಾಷ್ಟ್ರಪತಿ ಮಧ್ಯಾಹ್ನ 11 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿ ಅಲ್ಲಿಂದ 11.45ಕ್ಕೆ ಸುಮಾರಿಗೆ ವಾಯು ಸೇನಾ ವಿಶೇಷ ಹೆಲಿಕಾಪ್ಟರ್‌ನಲ್ಲಿ ಆದಿ ಉಡುಪಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಆದಿ ಉಡುಪಿ […]

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಲಡ್ಕ: ವಾರ್ಷಿಕೋತ್ಸವ ಸಮ್ಮಿಲನ

ಉಡುಪಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಲಡ್ಕ(ನೂಜಿ) ಮತ್ತು ಹಳೆ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮ್ಮಿಲನ-೨೦೧೮ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ರಘುಪತಿ ಭಟ್ ಇವರು ನೆರವೇರಿಸಿದರು. ಈ ವೇಳೆ ಶಾಸಕರ ಜೊತೆಗೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಮೇಶ್ ಭಟ್, ಹಾಗೂ  ಇನ್ನಿತರ ರಾಜಕೀಯ ನಾಯಕರು, ಗ್ರಾಮಸ್ಥರು, ಬೋಧಕ ಹಾಗೂ ಬೋಧಕೇತರ ವರ್ಗದ ಸಿಬ್ಬಂದಿಗಳು ಉಪಸ್ಥಿತರಿದ್ದರು