ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಲಡ್ಕ: ವಾರ್ಷಿಕೋತ್ಸವ ಸಮ್ಮಿಲನ

ಉಡುಪಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಲಡ್ಕ(ನೂಜಿ) ಮತ್ತು ಹಳೆ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮ್ಮಿಲನ-೨೦೧೮ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ರಘುಪತಿ ಭಟ್ ಇವರು ನೆರವೇರಿಸಿದರು. ಈ ವೇಳೆ ಶಾಸಕರ ಜೊತೆಗೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಮೇಶ್ ಭಟ್, ಹಾಗೂ  ಇನ್ನಿತರ ರಾಜಕೀಯ ನಾಯಕರು, ಗ್ರಾಮಸ್ಥರು, ಬೋಧಕ ಹಾಗೂ ಬೋಧಕೇತರ ವರ್ಗದ ಸಿಬ್ಬಂದಿಗಳು ಉಪಸ್ಥಿತರಿದ್ದರು