ಪೇಜಾವರ ಶ್ರೀಗಳಿಗೆ ಅರಳುಮರಳು: ದಿನೇಶ್ ಅಮೀನ್ ಮಟ್ಟು

  ಉಡುಪಿ: ಪೇಜಾವರ ಸ್ವಾಮೀಜಿಗೆ ಅರಳುಮರಳು. ಅವರು ಕ್ಷಣಕೊಂದು ಮಾತನಾಡುತ್ತಾರೆ. ಹಾಗಾಗಿ ಅವರ ಮಾತುಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಚಿಂತಕ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ. ಉಡುಪಿ ಅಂಬೇಡ್ಕರ್ ಯುವಸೇನೆಯ ವತಿಯಿಂದ ಭಾನುವಾರ ಬನ್ನಂಜೆ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಅಂಬೇಡ್ಕರ್ ಯುವಜನೋತ್ಸವವನ್ನು ಸೇನೆಯ ಲಾಂಛನ ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಿ  ಮಾತನಾಡಿದ ಅವರು, ಪೇಜಾವರ ಶ್ರೀಗಳು ರಾಮಮಂದಿರ ಕಟ್ಟುವ ಹೇಳಿಕೆಯನ್ನಾದರೂ ನೀಡಲಿ, ಸಂವಿಧಾನ ಬದಲಾವಣೆ ಹೇಳಿಕೆಯನ್ನಾದರೂ ನೀಡಲಿ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಆದರೆ, ದೇಶದ ಪ್ರಧಾನಿ ಅಥವಾ […]

ರೈತರಿಗೆ 10 ಲಕ್ಷದ ವರೆಗೆ ಬಡ್ಡಿರಹಿತ ಸಾಲ ನೀಡಲು ಪ್ರಯತ್ನ : ಡಾ.ಜಯಮಾಲಾ

ಉಡುಪಿ: ರೈತರು ಮನೆ ನಿರ್ಮಾಣ, ತೋಟ ಅಭಿವೃದ್ಧಿ, ಬೇಲಿ ನಿರ್ಮಾಣ ಮುಂತಾದ ಅಭಿವೃದ್ದಿ ಕಾರ್ಯಕ್ರಮಗಳನ್ನು ಮಾಡಲು10 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ನೀಡುವ ಕುರಿತಂತೆ ಸರಕಾರದ ಮಟ್ಟದಲ್ಲಿ ಚರ್ಚಿಸಿ, ಜಾರಿಗೆ ಪ್ರಯತ್ನಿಸಲಾಗುವುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಭರವಸೆ ನೀಡಿದ್ದಾರೆ.  ಅವರು ಭಾನುವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ರೈತರ ದಿನಾಚರಣೆ ಮತ್ತು […]

ಕಲೆಕ್ಷನ್ ನಲ್ಲಿ ಇತಿಹಾಸ ನಿರ್ಮಿಸಿದ “ಕೆಜಿಎಫ್”

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಕಲೆಕ್ಷನ್ ಎಷ್ಟು ಎಂಬುದೇ ದೊಡ್ಡ ಕುತೂಹಲವಾಗಿದೆ. ಒಬ್ಬೊಬ್ಬರು ಒಂದೊಂದು ರೀತಿ ವಿಶ್ಲೇಷಣೆ ಮಾಡ್ತಿದ್ರು. ಸಿನಿಮಾ ತಂಡದವರು ಅದ್ಯಾವಾಗ ಘೋಷಣೆ ಮಾಡ್ತಾರೆ ಎಂದು ಅಭಿಮಾನಿಗಳು ಕಾಯ್ತಿದ್ರು. ಅಂತಿಮವಾಗಿ ಕೆಜಿಎಫ್ ಚಿತ್ರದ ಮೊದಲ ದಿನದ ಕಲೆಕ್ಷನ್ ಬಹಿರಂಗವಾಗಿದೆ. ವರ್ಲ್ಡ್ ವೈಡ್ ಕೆಜಿಎಫ್ ಸಿನಿಮಾ ಮೊದಲ ದಿನ 24 ಕೋಟಿ ಗಳಿಸಿದೆ ಎಂದು ಖ್ಯಾತ ವಿಶ್ಲೇಷಕರು ಹಾಗೂ ಚಿತ್ರತಂಡದವರು ಹೇಳಿದ್ದಾರೆ. ಕೆಜಿಎಫ್ ಕನ್ನಡ ಭಾಷೆಯ ಸಿನಿಮಾ ಮೊದಲ ದಿನ 12.5 ಕೋಟಿ ಗಳಿಕೆಯನ್ನು […]

ಮೂಡಬಿದಿರೆ ಕರಿಂಜೆ ವಿನೂ ವಿಶ್ವನಾಥ ಶೆಟ್ಟಿ ಹೃದಯಘಾತದಿಂದ ಸಾವು: ಕಂಬಳ ದಿಗ್ಗಜ ಇನ್ನು ನೆನಪು ಮಾತ್ರ

ಮೂಡಬಿದಿರೆ: ತುಳುನಾಡಿನ ಕಂಬಳ ಕ್ಷೇತ್ರದ ದಿಗ್ಗಜ ಮೂಡಬಿದಿರೆ ಕರಿಂಜೆ ವಿನೂ ವಿಶ್ವನಾಥಶೆಟ್ಟಿ (೫೪) ಅವರು ಭಾನುವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಹೊಕ್ಕಾಡಿಗೊಳಿಯಲ್ಲಿ ನಡೆದ ಜೋಡುಕರೆ ಕಂಬಳದಿಂದ ವಾಪಾಸಾಗುತ್ತಿದ್ದ ವೇಳೆ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಳೆದ ಹಲವು ವರ್ಷಗಳಿಂದ ಕಂಬಳದ ಕೋಣಗಳ ಯಜಮಾನರಾಗಿ, ಕಂಬಳದ ಉಳಿವಿಗೆ ಸಾಕಷ್ಟು ಕೊಡುಗೆ ನೀಡಿದ ಕೀರ್ತಿ ಅವರದು. ಕೋಣಗಳಿಗಾಗಿ ಈಜುಕೊಳ, ಆಧುನಿಕ ಮಾದರಿಯ ಸೌಲ`ಗಳನ್ನು ಕಲ್ಪಿಸಿ ಹೆಸರುವಾಸಿಯಾಗಿದ್ದರು. ಹಲವು ವರ್ಷಗಳಲ್ಲಿ ಅವರ ಕೋಣಗಳು ಚ್ಯಾಂಪಿಯಾನ್ […]

ಶಬರಿಮಲೆ ದೇಗುಲ ಪ್ರವೇಶಿಸಲು ಮಹಿಳೆಯರಿಂದ ಯತ್ನ:ತಡೆಹಿಡಿದ ಅಯ್ಯಪ್ಪ ಭಕ್ತರು

ಕೇರಳ : ಇಲ್ಲಿನ ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ ಚೆನ್ನೈ ಮೂಲದ 11 ಮಹಿಳೆಯರನ್ನು ಅಯ್ಯಪ್ಪ ಭಕ್ತರು ತಡೆ ಹಿಡಿದಿದ್ದು  ದೇಗುಲದ ಸ್ಥಳದಲ್ಲಿ  ಭಾನುವಾರ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ ಎನ್ನುವ ಮಾಹಿತಿ ಲಭಿಸಿದೆ.      ಚೆನ್ನೈ ಮೂಲದ ಮಹಿಳಾ ಸಂಘಟನೆಯ ಸದಸ್ಯರು ಕಾಡು ದಾರಿಯ ಮೂಲಕ ದೇವಾಲಯ ಪ್ರವೇಶಿಸಲು ಪ್ರಯತ್ನ ನಡೆಸಿದವರು.  ಆದರೆ ಇವರ ಪ್ರಯತ್ನ ವಿಫಲಗೊಂಡಿದೆ. ದೇವಾಲಯದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿ ಮಹಿಳೆಯರನ್ನು ಅಯ್ಯಪ್ಪ ಭಕ್ತರು ತಡೆ ಹಿಡಿದಿದ್ದಾರೆ. ಹಾಗೂ ಘೋಷಣೆ ಕೂಗಿದ್ದಾರೆ. […]