ಕಲೆಕ್ಷನ್ ನಲ್ಲಿ ಇತಿಹಾಸ ನಿರ್ಮಿಸಿದ “ಕೆಜಿಎಫ್”

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಕಲೆಕ್ಷನ್ ಎಷ್ಟು ಎಂಬುದೇ ದೊಡ್ಡ ಕುತೂಹಲವಾಗಿದೆ. ಒಬ್ಬೊಬ್ಬರು ಒಂದೊಂದು ರೀತಿ ವಿಶ್ಲೇಷಣೆ ಮಾಡ್ತಿದ್ರು. ಸಿನಿಮಾ ತಂಡದವರು ಅದ್ಯಾವಾಗ ಘೋಷಣೆ ಮಾಡ್ತಾರೆ ಎಂದು ಅಭಿಮಾನಿಗಳು ಕಾಯ್ತಿದ್ರು. ಅಂತಿಮವಾಗಿ ಕೆಜಿಎಫ್ ಚಿತ್ರದ ಮೊದಲ ದಿನದ ಕಲೆಕ್ಷನ್ ಬಹಿರಂಗವಾಗಿದೆ. ವರ್ಲ್ಡ್ ವೈಡ್ ಕೆಜಿಎಫ್ ಸಿನಿಮಾ ಮೊದಲ ದಿನ 24 ಕೋಟಿ ಗಳಿಸಿದೆ ಎಂದು ಖ್ಯಾತ ವಿಶ್ಲೇಷಕರು ಹಾಗೂ ಚಿತ್ರತಂಡದವರು ಹೇಳಿದ್ದಾರೆ.

ಕೆಜಿಎಫ್ ಕನ್ನಡ ಭಾಷೆಯ ಸಿನಿಮಾ ಮೊದಲ ದಿನ 12.5 ಕೋಟಿ ಗಳಿಕೆಯನ್ನು ಕಂಡಿದೆ. ಸುಮಾರು 400 ಸ್ಕ್ರೀನ್ ಗಳಲ್ಲಿ ಕನ್ನಡ ವರ್ಷನ್ ಕೆಜಿಎಫ್ ರಿಲೀಸ್ ಆಗಿದೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಒಂದು ಹೊಸ ದಾಖಲೆಯಾಗಿದೆ.

ಜಗತ್ತಿನಾದ್ಯಂತ 24.5 ಕೋಟಿ ಗಳಿಸಿರುವ ಕೆಜಿಎಫ್ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಸದ್ಯದ ಮಾಹಿತಿ ಪ್ರಕಾರ, ಭಾರತದಲ್ಲಿ ಮಾತ್ರ 18.1 ಕೋಟಿ ಗಳಿಕೆ ಕಂಡಿದೆ.  ತರಣ್ ಆದರ್ಶ್ ಅವರು ಹೇಳಿರುವ ಪ್ರಕಾರ, ಕೆಜಿಎಫ್ ಹಿಂದಿ ವರ್ಷನ್ ಸಿನಿಮಾ ಮೊದಲ ದಿನ 2.10 ಕೋಟಿ ಗಳಿಕೆ ಕಂಡಿದೆಯಂತೆ. ಈ ಗಳಿಕೆಯನ್ನು ಕಂಡು ಖುಷಿ ಪಡುವುದಕ್ಕಿಂತ ಅಚ್ಚರಿಯಾಗಿ ನೋಡೋರೇ ಹೆಚ್ಚಾಗಿದ್ದಾರೆ.


ಕೆಜಿಎಫ್ ಚಿತ್ರದ ಕಲೆಕ್ಷನ್ ಬಗ್ಗೆ ಚಿತ್ರದ ನಿರ್ಮಾಪಕ, ನಿರ್ದೇಶಕ ಅಥವಾ ನಟ ಖಚಿತಪಡಿಸಿಲ್ಲ. ಆದ್ರೆ, ವಿಶ್ಲೇಷಕ ರಮೇಶ್ ಬಾಲ, ತರಣ್ ಆದರ್ಶ್, ಹಾಗೂ ವಿಶಾಲ್ ಫಿಲಂ ಫ್ಯಾಕ್ಟರಿ ಟ್ವಿಟ್ಟರ್ ಖಾತೆಯಲ್ಲಿ ಈ ಲೆಕ್ಕಾಚಾರ ಪ್ರಕಟಸಿದೆ.