ಜ.12, 13ರಂದು ಹಂಪಿ ಉತ್ಸವ

ಬೆಳಗಾವಿ: ಹಂಪಿ ಉತ್ಸವವನ್ನು ಜ.12, 13ರಂದು ಆಚರಿಸಲು ಬಳ್ಳಾರಿ ಜಿಲ್ಲಾಡಳಿತ ತೀರ್ಮಾನಿಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ಹೇಳಿದರು.

ಶುಕ್ರವಾರ ವಿಧಾನ ಪರಿಷತ್‌ನಲ್ಲಿ ಕೆ.ಸಿ. ಕೊಂಡಯ್ಯ ಪ್ರಶ್ನೆಗೆ ಉತ್ತರಿಸಿದ ಅವರು, ಇಲಾಖಾ ಕ್ರಿಯಾ ಯೋಜನೆಯಲ್ಲಿ ಉತ್ಸವ ಆಚರಣೆಗಾಗಿ ₹ 60 ಲಕ್ಷ ಅನುದಾನ ತೆಗೆದಿರಿಸಲಾಗಿದೆ, ಉತ್ಸವಕ್ಕಾಗಿ ₹ 8 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿ ಪ್ರಸ್ತಾವ ಸಲ್ಲಿಸಿದ್ದಾರೆ. ₹ 7.40 ಕೋಟಿ ಹೆಚ್ಚುವರಿಯಾಗಿ ಒದಗಿಸುವಂತೆ ಆರ್ಥಿಕ ಇಲಾಖೆಯನ್ನು ಕೋರಲಾಗಿದೆ ಎಂದು ತಿಳಿಸಿದರು.