ಡಿ.22, 23 : ಸನ್‌ಶೈನ್ ದಶಮಾನೋತ್ಸವ, ವಿಶಿಷ್ಠ ವ್ಯಕ್ತಿಗಳಿಗೆ ಸಮ್ಮಾನ

ಉಡುಪಿ:  ಸಾಮಾಜಿಕ, ಸಾಂಸ್ಕೃತಿ, ಕ್ರೀಡಾ, ಶೈಕ್ಷಣಿಕ, ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಅಚ್ಲಾಡಿಯ ಸನ್‌ಶೈನ್ ಗೆಳೆಯರ ಬಳಗ, ಕ್ರೀಡಾಸಂಘ ಅಚ್ಲಾಡಿ. ಈ ಸಂಸ್ಥೆಯ  ದಶಮಾನೋತ್ಸವದ ಸಂಭ್ರಮದ ಪ್ರಯುಕ್ತ,  ಸಂಘದ ಆಶ್ರಯದಲ್ಲಿ  ಡಿ.22 ಹಾಗೂ 23 ರಂದು ಅಚ್ಲಾಡಿ ಸನ್ ಶೈನ್ ಕ್ರೀಡಾಂಗಣದಲ್ಲಿ  ದಶಮಾನೋತ್ಸವ ಕಾರ್ಯಕ್ರಮ “ಹತ್ತುಹೆಜ್ಜೆ” ನಡೆಯಲಿದೆ. ಈ ಸಂದರ್ಭ ನಾಲ್ವರು ವಿಶಿಷ್ಠ ವ್ಯಕ್ತಿಗಳನ್ನು  ಗುರುತಿಸಿ ಗೌರವಿಸಲಾಗುತ್ತದೆ.

ವಿಶೇಷ ವ್ಯಕ್ತಿಗಳಿಗೆ ಸನ್ಮಾನ:

ಸಾಸ್ತಾನ ಸಮೀಪದ ಪಾಂಡೇಶ್ವರದ ಐಸ್ ಕ್ಯಾಂಡಿ ಗೋಪಾಲಣ್ಣ (ಗೋಪಾಲ ದೇವಾಡಿಗ).ಕಳೆದ ೩೫ವರ್ಷಗಳಿಂದಲೂ ತಮ್ಮ ವೃತ್ತಿಯನ್ನು ದುಡ್ಡಿನ ಸಾಧನದಿಂದ ಅಳೆಯದೆ ಆತ್ಮ ತೃಪ್ತಿಯ ಮೂಲಕವೇ ಖುಷಿಪಡಿಸಿದ ಇವರಿಗೆ ಸನ್ಮಾನ ನಡೆಯಲಿದೆ. ಉಳಿದಂತೆ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಎಲ್ಲಾ ರಂಗಗಳಿಗೂ ನೆರವು ನೀಡಿದ ಆನಂದ್ ಸಿ.ಕುಂದರ್, ಅಚ್ಲಾಡಿಯ ಸಾಧಕ ಕರ್ನಾಟಕ ಸರಕಾರದ ಲೆಕ್ಕಪರಿಶೋಧನಾ ವರ್ತುಲದಲ್ಲಿ ಕಾರ್‍ಯನಿರ್ವಹಿಸುತ್ತಿರುವ  ಜಗದೀಶ್ ಮರಕಾಲ ಅವರಿಗೆ, ರಕ್ತದಾನಿ, ಸಮಾಜ ಸೇವಕ, ಸಾಧಕ ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್, ಅವರನ್ನು ಗೌರವಿಸಲಾಗುತ್ತದೆ. 

ಕಾರ್ಯಕ್ರಮದಲ್ಲಿ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ಮಿಂಚಿದ ಜನಪ್ರಿಯ ಕಾಮಿಡಿ ಕಿಲಾಡಿಗಳಾದ ದಿವ್ಯಶ್ರೀ ಮೂಡಿಗೆರೆ, ನಯನ, ಸೂರ್ಯ ಕುಂದಾಪುರ, ಅಪ್ಪಣ್ಣ ಹಾಗೂ ಧಾರವಾಹಿ ನಟ-ನಟಿಯರು ಭಾಗವಹಿಸಲಿದ್ದಾರೆ.

 

                 

ಕಳೆದ ೩೫ವರ್ಷಗಳಿಂದಲೂ ತಮ್ಮ ವೃತ್ತಿಯನ್ನು ದುಡ್ಡಿನ ಸಾಧನದಿಂದ ಅಳೆಯದೆ ಆತ್ಮ ತೃಪ್ತಿಯಯ ಮೂಲಕವೇ ಖುಷಿಪಡಿಸಿದಸಾಸ್ತಾನ ಸಮೀಪದ ಪಾಂಡೇಶ್ವರದ ಐಸ್  ಕ್ಯಾಂಡಿ ಗೋಪಾಲಣ್ಣ (ಗೋಪಾಲ ದೇವಾಡಿಗ).
ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಎಲ್ಲಾ ರಂಗಗಳಿಗೂ ನೆರವು ನೀಡಿದ ಆನಂದ್ ಸಿ.ಕುಂದರ್
ಅಚ್ಲಾಡಿಯ ಸಾಧಕ ಕರ್ನಾಟಕ ಸರಕಾರದ ಲೆಕ್ಕಪರಿಶೋಧನಾ ವರ್ತುಲದಲ್ಲಿ ಕಾರ್‍ಯನಿರ್ವಹಿಸುತ್ತಿರುವ  ಜಗದೀಶ್ ಮರಕಾಲ
ರಕ್ತದಾನಿ, ಸಮಾಜ ಸೇವಕ, ಸಾಧಕ ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್