ಡಿ.21 :ಜಿಲ್ಲೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಮುಷ್ಕರ
ಉಡುಪಿ: ವೇತನ ಪರಿಷ್ಕರಣೆಗೆ ಆಗ್ರಹಿಸಿ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ ಡಿ.21ರಂದು ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ, ಜಿಲ್ಲೆಯ ಬ್ಯಾಂಕ್ ವ್ಯವಹಾರ ಸ್ಥಗಿತಗೊಳ್ಳಲಿದೆ ಎಂದು ಎಸ್.ಬಿ.ಓ.ಎ ರಾಷ್ಟ್ರೀಯ ಅಧ್ಯಕ್ಷ ಯು.ಶಶಿಧರ್ ಶೆಟ್ಟಿ ಹೇಳಿದ್ದಾರೆ. ಅವರು ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ನಿವೃತ್ತ ಬ್ಯಾಂಕ್ ಉದ್ಯೋಗಿಗಳ ಪಿಂಚಣಿ ಪರಿಕ್ಷರಣೆ ಹಾಗೂ ಕುಟುಂಬ ಪಿಂಚಣಿಯಲ್ಲಿ ಸುಧಾರಣೆ, ಕ್ಯಾಥೋಲಿಕ್ ಸಿರಿಯನ್ ಬ್ಯಾಂಕ್ ಹಾಗೂ ಐ.ಡಿ.ಬಿ.ಐ ಬ್ಯಾಂಕ್ ಮಾನವೀಯ ಸಂಬಂಧಗಳ ಸುಧಾರಣೆ ಸೇರಿದಂತೆ ನೌಕರರ ವೇತನ ಬೇಡಿಕೆ ಪಟ್ಟಿಗಳಲ್ಲಿರುವ ಅಂಶಗಳನ್ನು ಸಂಪೂರ್ಣ ಜಾರಿಗೊಳ್ಳಿಸುವುದು, […]
ನಮಗೆ ಕುಡಿಯುವುದಕ್ಕೆ ನೀರು ಕೊಡಿ, ಇಲ್ಲದಿದ್ರೆ ಸಿಗಡಿ ಕೆರೆ ಬಂದ್ ಮಾಡಿ : ಹೆಮ್ಮಾಡಿ ಗ್ರಾಪಂ ಸಭೆಯಲ್ಲಿ ಆಕ್ರೋಶ
ಕುಂದಾಪುರ: ಹೆಮ್ಮಾಡಿ ಹೇಮಾಪುರ ಉಡುಪರ ಮನೆ ರಸ್ತೆ ಸಮೀಪ ಇರುವ ಹುಂಚನಕೇರಿಯ ಮನೆಗಳಿಗೆ ಕುಡಿಯುವ ನೀರಿಗೂ ತತ್ವಾರ ಬಂದಿದೆ. ಹಿಂದೆ ಹೀಗಿರಲಿಲ್ಲ. ಯಾವತ್ತು ಸಿಗಡಿ ಕೆರೆ ಆರಂಭವಾಯಿತೋ ಅಂದಿನಿಂದ ನಮ್ಮ ಬಾವಿ ನೀರು ಉಪ್ಪಾಗುತ್ತಿದೆ. ಅದಕ್ಕೆ ಸಿಗಡಿ ಕೆರೆಯಲ್ಲಿ ನಿಲ್ಲಿಸುವ ಉಪ್ಪು ನೀರು ಕಾರಣ. ಸಿಗಡಿ ಕೆರೆ ಬಂದ್ ಮಾಡಿ ನಮ್ಮ ಕುಡಿಯುವ ನೀರಿನ ಹಕ್ಕು ನಮಗೆ ಕೊಡಿ ಎಂದು ಕೇಳಿಕೊಂಡರೂ ಗ್ರಾಪಂಗೆ ಕುಡಿಯುವ ನೀರಿಗಿಂತಲೂ ಸಿಗಡಿ ಕೃಷಿಯೇ ಹೆಚ್ಚಾಯಿತು. ಸಿಗಡಿ ಕೆರೆ ಬಂದ್ ಮಾಡಿ ಇಲ್ಲಾ […]
ಕಾರ್ಕಳ ಕಡಾರಿಯ ರೈತ ಮಾಡಿದ ಕೈ ಪಂಪು : ತೋಟವೆಲ್ಲಾ ತಂಪು ತಂಪು
ಕಾರ್ಕಳ ತಾಲೂಕಿನ ಪುಟ್ಟದಾದ ಸುಂದರ ಊರು ಕಡಾರಿ. ಎಲ್ಲೆಲ್ಲೂ ಹಸಿರೇ ತುಂಬಿರುವ ಈ ಊರಿನ ಒಂದು ಬದಿಯಲ್ಲಿ ಹರಿಯುವ ಸ್ವರ್ಣ ನದಿ. ನೂರು ಮೀಟರ್ ದೂರದಲ್ಲಿ ಕಡಾರಿ ಸೇತುವೆ, ಅದರ ಕೆಳಭಾಗದಲ್ಲಿ ಸ್ವರ್ಣೆಗೆ ಕಟ್ಟಿದ ಕಿಂಡಿ ಅಣೆಕಟ್ಟು. ಅಲ್ಲೇ ಪಕ್ಕದಲ್ಲಿದೆ ಜಯರಾಮ್ ಪ್ರಭು ಅವರ ಸಣ್ಣ ಅಡಕೆ ತೋಟ, ಹಾಗೂ ಮನೆ. ಅವರ ತಮ್ಮ ಜಗದೀಶ್ ಪ್ರಭು ಅವರು ರೈತ ರಾಗಿದ್ದು ಕೈ ಪಂಪು ಆವಿಷ್ಕರಿಸಿ ಕೃಷಿಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಹೌದು. ಜಗದೀಶ್ ಪ್ರಭು ಅವರು ತಮ್ಮ […]
ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಜಯ
ಪ್ರೊ ಕಬಡ್ಡಿ ಟೂರ್ನಿಯಲ್ಲಿ ಡಿ.18 ರಂದು ಮಿಂಚಿನ ಆಟವಾಡಿದ ಬುಲ್ಸ್ ತಂಡದ ಪವನಕುಮಾರ್ ಶೇರಾವತ್ ಅವರು13 ಅಂಕಗಳನ್ನು ಗಳಿಸಿದರು. ಇದರಿಂದಾಗಿ ಬೆಂಗಳೂರು ಬುಲ್ಸ್ ತಂಡವು ಮಂಗಳವಾರ 44–28 ಅಂತರದಿಂದ ತೆಲುಗು ಟೈಟನ್ಸ್ ವಿರುದ್ಧ ಜಯ ಗಳಿದರು. ತೆಲುಗು ಟೈಟನ್ಸ್ ತಂಡಕ್ಕೆ ತಿರುಗೇಟು ನೀಡಲು ಅವಕಾಶವನ್ನೇ ನೀಡದ ಬುಲ್ಸ್ ತಂಡವು ದೊಡ್ಡ ಅಂತರದ ಮುನ್ನಡೆ ಸಾಧಿಸುವಲ್ಲಿ ಸಫಲವಾಯಿತು. ತಂಡದ ರೋಹಿತ್ ಕುಮಾರ್ ರೇಡಿಂಗ್‌ನಲ್ಲಿ ಆರು ಅಂಕ ಮತ್ತು ಟ್ಯಾಕಲ್‌ನಲ್ಲಿ ಒಂದು ಅಂಕ ಗಳಿಸಿದರು. ತೆಲುಗು ಟೈಟನ್ಸ್ ತಂಡದಲ್ಲಿ ರಾಹುಲ್ […]
ರಾಷ್ಟ್ರಮಟ್ಟದ ಭರತನಾಟ್ಯ ರಿಯಾಲಿಟಿ ಶೋನಲ್ಲಿ ಉಡುಪಿಯ ಜಾನಕಿ ಗೆ ‘ನಾಟ್ಯರತ್ನ’ ಪ್ರಶಸ್ತಿ
ಉಡುಪಿ: ಉಡುಪಿಯ ಸೃಷ್ಟಿ ನೃತ್ಯ ಕಲಾ ಕುಟೀರ ಸಂಸ್ಥೆಯ ವಿದ್ಯಾರ್ಥಿನಿ ಡಿ.ಎ.ಜಾನಕಿ ಖಾಸಗಿ ವಾಹಿನಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ‘ನಾಟ್ಯ ರತ್ನ ಭರತ ನಾಟ್ಯ’ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ನಾಟ್ಯರತ್ನ’ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಮಂಜರಿ ಚಂದ್ರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 560 ಮಕ್ಕಳ ಪೈಕಿ ಅತ್ಯುತ್ತಮ ಪ್ರದರ್ಶನ ನೀಡಿದ ಜಾನಕಿ ಫೈನಲ್‌ನಲ್ಲಿ ಪ್ರಶಸ್ತಿ ಗೆದ್ದು ಕೊಂಡರು. ಲಿಟಲ್ ರಾಕ್ ಇಂಡಿಯನ್ ಸ್ಕೂಲ್‌ನಲ್ಲಿ ಜಾನಕಿ 6ನೇ ತರಗತಿಯಲ್ಲಿ ಓದುತ್ತಿದ್ದು, ‘ಹೆಜ್ಜೆ ಗೆಜ್ಜೆ’ ಪ್ರತಿಷ್ಠಾನ ಆಯೋಜಿಸಿದ್ದ […]