ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಜಯ

ಪ್ರೊ ಕಬಡ್ಡಿ ಟೂರ್ನಿಯಲ್ಲಿ ಡಿ.18 ರಂದು ಮಿಂಚಿನ ಆಟವಾಡಿದ  ಬುಲ್ಸ್‌ ತಂಡದ ಪವನಕುಮಾರ್ ಶೇರಾವತ್ ಅವರು13 ಅಂಕಗಳನ್ನು ಗಳಿಸಿದರು. ಇದರಿಂದಾಗಿ ಬೆಂಗಳೂರು ಬುಲ್ಸ್‌ ತಂಡವು ಮಂಗಳವಾರ 44–28 ಅಂತರದಿಂದ ತೆಲುಗು ಟೈಟನ್ಸ್‌ ವಿರುದ್ಧ ಜಯ ಗಳಿದರು.

ತೆಲುಗು ಟೈಟನ್ಸ್‌ ತಂಡಕ್ಕೆ ತಿರುಗೇಟು ನೀಡಲು ಅವಕಾಶವನ್ನೇ ನೀಡದ ಬುಲ್ಸ್‌ ತಂಡವು ದೊಡ್ಡ ಅಂತರದ ಮುನ್ನಡೆ ಸಾಧಿಸುವಲ್ಲಿ ಸಫಲವಾಯಿತು. ತಂಡದ ರೋಹಿತ್ ಕುಮಾರ್ ರೇಡಿಂಗ್‌ನಲ್ಲಿ ಆರು ಅಂಕ ಮತ್ತು ಟ್ಯಾಕಲ್‌ನಲ್ಲಿ ಒಂದು ಅಂಕ ಗಳಿಸಿದರು. ತೆಲುಗು ಟೈಟನ್ಸ್‌ ತಂಡದಲ್ಲಿ ರಾಹುಲ್ ಚೌಧರಿ 13 ಅಂಕಗಳನ್ನು ಗಳಿಸಿದರು. ಮೊಹಸೀನ್ ಟ್ಯಾಕಲ್‌ನಲ್ಲಿ ಆರು ಅಂಕ, ಫರ್ಹಾದ್ ಎರಡು ಅಂಕ ಸಂಗ್ರಹಿಸಿದರು.

‘ಬಿ’ ಗುಂಪಿನಲ್ಲಿ ಒಟ್ಟು 19 ಪಂದ್ಯಗಳನ್ನು ಆಡಿರುವ ಬೆಂಗಳೂರು ಬುಲ್ಸ್‌ ತಂಡವು 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ತಂಡವು 69 ಅಂಕಗಳನ್ನು ಗಳಿಸಿ ಗುಂಪಿನಲ್ಲಿ ಮೊದಲ ಸ್ಥಾನಕ್ಕೇರಿದೆ.