ಡಿ.21 :ಜಿಲ್ಲೆಯಲ್ಲಿ  ಬ್ಯಾಂಕ್‌ ಅಧಿಕಾರಿಗಳ ಮುಷ್ಕರ

ಉಡುಪಿ: ವೇತನ ಪರಿಷ್ಕರಣೆಗೆ ಆಗ್ರಹಿಸಿ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ ಡಿ.21ರಂದು  ಮುಷ್ಕರಕ್ಕೆ ಕರೆ ನೀಡಿದ  ಹಿನ್ನೆಲೆಯಲ್ಲಿ, ಜಿಲ್ಲೆಯ ಬ್ಯಾಂಕ್ ವ್ಯವಹಾರ ಸ್ಥಗಿತಗೊಳ್ಳಲಿದೆ ಎಂದು ಎಸ್‌.ಬಿ.ಓ.ಎ ರಾಷ್ಟ್ರೀಯ ಅಧ್ಯಕ್ಷ ಯು.ಶಶಿಧರ್‌ ಶೆಟ್ಟಿ ಹೇಳಿದ್ದಾರೆ.
ಅವರು ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ನಿವೃತ್ತ ಬ್ಯಾಂಕ್‌ ಉದ್ಯೋಗಿಗಳ ಪಿಂಚಣಿ ಪರಿಕ್ಷರಣೆ ಹಾಗೂ ಕುಟುಂಬ ಪಿಂಚಣಿಯಲ್ಲಿ ಸುಧಾರಣೆ, ಕ್ಯಾಥೋಲಿಕ್‌ ಸಿರಿಯನ್‌ ಬ್ಯಾಂಕ್‌ ಹಾಗೂ ಐ.ಡಿ.ಬಿ.ಐ ಬ್ಯಾಂಕ್‌  ಮಾನವೀಯ ಸಂಬಂಧಗಳ ಸುಧಾರಣೆ ಸೇರಿದಂತೆ ನೌಕರರ ವೇತನ ಬೇಡಿಕೆ ಪಟ್ಟಿಗಳಲ್ಲಿರುವ ಅಂಶಗಳನ್ನು ಸಂಪೂರ್ಣ ಜಾರಿಗೊಳ್ಳಿಸುವುದು,  5 ದಿನಗಳ ಕೆಲಸದ ವಾರವನ್ನು ಆರಂಭಿಸುವುದು. ಇತರೆ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗುತ್ತದೆ ಎಂದು ಹೇಳಿದರು.
ಈ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.21ರಂದು ದೇಶದಾದ್ಯಂತ  ಬ್ಯಾಂಕ್‌ ನೌಕರರು ಹಾಗೂ ಅಧಿಕಾರಿ ಬ್ಯಾಂಕಿನಲ್ಲಿ ವ್ಯವಹಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಮುಷ್ಕರಕ್ಕೆ ಬೆಂಬಲ ನೀಡಲಾಗುತ್ತದೆ ಎಂದರು.
‌ಈ ಸಂದರ್ಭದಲ್ಲಿ  ಅಧಿಕಾರಿಗಳಾದ ಶಂಕರ್‌ ಕುಂದಾಪುರ, ಸೂರಜ್‌ ಉಪ್ಪೂರು, ಅವಿನಾಶ್‌ ಹೆಗ್ಡೆ, ಅರವಿಂದ್‌ ಶೆಟ್ಟಿ, ದಿನೇಶ್‌ ಪೈ ಉಪಸ್ಥಿತರಿದ್ದರು.