ಕುಂದಾಪುರ : ಬಿ.ಎಂ.ಸುಕುಮಾರ್ ಶೆಟ್ಟಿ ಸನ್ಮಾನ ಕಾರ್ಯಕ್ರಮ

ಕುಂದಾಪುರ: ಪರಿಶ್ರಮ ಇದ್ದಾಗ ಮಾತ್ರ ಸಾಧನೆ ಶಿಖರವೇರಲು ಸಾಧ್ಯ ಎನ್ನುವುದಕ್ಕೆ ಸುಕುಮಾರ ಶೆಟ್ಟಿ ಅವರು ಬಹುದೊಡ್ಡ ಉದಾಹರಣೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಹೇಳಿದರು. ಕುಂದಾಪುರ ಎಜ್ಯುಕೇಶನ್ ಸೊಸೈಟಿ ಮತ್ತು ಬಿ.ಎಂ.ಸುಕುಮಾರ್ ಶೆಟ್ಟಿ ಅಭಿಮಾನಿ ಬಳಗ ಇಲ್ಲಿನ ಡಾ.ಬಿ.ಬಿ.ಹೆಗ್ಡೆ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ ವಿಶಿಷ್ಟ ಸಾಧಕ ಬಿ.ಎಂ.ಸುಕುಮಾರ್ ಶೆಟ್ಟಿ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸುಕುಮಾರ್ ಶೆಟ್ಟಿಯವರು ತಮ್ಮ ಶಿಕ್ಷಣ ಸಂಸ್ಥೆಗಳ ಮೂಲಕ ಸಾಮಾಜಿಕ ಕೆಲಸ ಮಾಡುತ್ತಿದ್ದಾರೆ. ತಾನೂ […]

ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗಕ್ಕೆ ಕ್ರಮ : ಸಂಸದ ಬಿ.ವೈ ರಾಘವೇಂದ್ರ

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದು ಸಾಕಷ್ಟು ವರ್ಷಗಳು ದಾಟಿವೆ. ಯುಪಿಎ ಸರ್ಕಾರ ಅಧಿಕಾರವಧಿಯಲ್ಲಿ ಒಪ್ಪಂದ ಆಗಿದ್ದು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗ ಪಡೆದುಕೊಂಡಿದೆ. ಹೆದ್ದಾರಿ ಕಾಮಗಾರಿ ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಶ್ರಮಿಸುತ್ತೇವೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಹೇಳಿದರು. ಅವರು ಶನಿವಾರ ಕುಂದಾಪುರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. ಕಾಂಗ್ರೆಸ್ ಅಪ್ರಚಾರದಿಂದ ಹಿನ್ನೆಡೆ: ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದಂತೆ […]

ಆ ಕಪ್ಪು ಸುಂದರಿ, ನನ್ನ ಬಾಳಿಗೆ ಬಿಳುಪು ತಂದಳು..

ಅವಳು ಎಂದರೆ ನನಗೆ ಏನೋ ಸಂತೋಷ, ಹುರುಪು ಉತ್ಸಾಹ ಎಲ್ಲವೂ.  ಒಬ್ಬರ ಬಾಳಿನಲ್ಲಿ ತನ್ನ ಸಂಗಾತಿ ಬಂದರೆ ಮಾತ್ರ ಜೀವನ ಪಾವನವಾಗಲು ಸಾಧ್ಯ ಅಲ್ಲವೇ. ಹೌದು! ಇದು ಅಕ್ಷರಶಃ ಸತ್ಯ. ಹೀಗೆ ನಾನು ಸಹ ನನ್ನ ಸಂಗಾತಿಯನ್ನು ಹುಡುಕುವ ಭರದಲ್ಲಿದ್ದೆ. ಈ ಪಯಣ ಪ್ರಾರಂಭವಾದದ್ದು ಪದವಿ ಜೀವನದಲ್ಲಿ. ಆ ವಯಸ್ಸೇ ಹಾಗೆ ಅದು ಜೀವನದಲ್ಲಿ ಮರೆಯಲಾಗದ ಕಾಲಘಟ್ಟ. ಆಗ ವಯಸ್ಸು ಅರಳುತ್ತಿರುವ ಗುಲಾಬಿಯಂತೆ  ಅದರದೇ ಆದ ಛಾಪನ್ನು ಮೂಡಿಸುತ್ತದೆ. ಈ ವಯಸ್ಸಿನಲ್ಲಿ ತನ್ನ ಸಂಗಾತಿಯನ್ನು ಹುಡುಕುವ ಹಂಬಲ […]

ಮಳ್ಳಿ ಮಳ್ಳಿ ಸೂರ್ನಳ್ಳಿ: ಈ ದೋಸೆ ತಿಂದಿಲ್ಲಾಂದ್ರೆ ಬೇಗ ತಿನ್ನಿ

ಮಳ್ಳಿ..ಮಳ್ಳಿ.ಮಿಂಚುಳ್ಳಿ ಹಾಡು ಕೇಳಿದ್ದೇವೆ.. ನೀರ್‌ನಳ್ಳಿ, ನೀರುಳ್ಳಿನೂ ಕೇಳಿದ್ದೀವಿ ಇದ್ಯಾವುದು ಸೂರ್ನಳ್ಳಿ? ಅಂತ ನಿಮ್ಮಲ್ಲೊಂದು ಜಿಕ್ ಅಂತ ಪ್ರಶ್ನೆ ಮೂಡಿರಬಹುದು ಅದಕ್ಕೆ ಉತ್ತರ ಇಲ್ಲಿದೆ. ಈ ರುಚಿ ಟೇಸ್ಟಿ  ದೋಸೆಯ ಹೆಸರು ಸೂರ್ನಳ್ಳಿ. ತಿಂದರೆ ಮನಸೂರೆಗೊಳ್ಳುತ್ತದೆ. ಇದು ಕರಾವಳಿ ಸ್ಪೆಷಲ್ ಮಾರ್ರೆ:   ಒಂದೊಂದು ಜಿಲ್ಲೆಗೂ. ತರಹೇವಾರಿ, ತಿಂಡಿ-ತೀರ್ಥ ಆ ಊರಿನ ಸೊಗಡಿಗೆ ತಕ್ಕಂತೆ ಹುಟ್ಟಿಕೊಂಡಿರೋ ಹಾಗೆ, ಈ ಸೂರ್ನಳ್ಳಿ ಕರಾವಳಿ ಕಡಲ ತಡಿಯ ಮಂದಿಯ ಬಾಯಲ್ಲಿ ಥಳುಕು ಹಾಕಿಕೊಂಡಿರೋ ಸ್ಪೆಶಲ್ ದೋಸೆ. ಉಡುಪಿ ಜಿಲ್ಲೆಯ ಕೊಂಕಣಿ ಸಮುದಾಯದಲ್ಲಿ ಹೆಚ್ಚಾಗಿ […]

ವಿಶ್ವಕಪ್ ಹೀರೋ ಯುವಿ ;ಇದೀಗ ಮೈದಾನದಾಚೆಗೂ ರಿಯಲ್ ಹೀರೋ …

ತಮ್ಮ ಸ್ಫೋಟಕ ಬ್ಯಾಟಿಂಗ್, ಅತ್ಯಾಕರ್ಷಕ ಫೀಲ್ಡಿಂಗ್ ಮೂಲಕ ಭಾರತೀಯ ಅಭಿಮಾನಿಗಳ ಮನಗೆದ್ದಿರುವ ಯುವಿ ಮೈದಾನದಾಚೆಗೂ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ಭಾರತ ತಂಡ 2011ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಯುವಿ ಪ್ರಮುಖ ಪಾತ್ರವಹಿಸಿದ್ದರು. ಇದಾದ ಬಳಿಕ 2012ರಲ್ಲಿ ಶ್ವಾಸಕೋಶ ಕ್ಯಾನ್ಸರ್’ಗೆ ತುತ್ತಾಗಿ ಸಾವಿನೊಂದಿಗೆ ಸೆಣಸಿ ಮತ್ತೆ ಟೀಂ ಇಂಡಿಯಾಗೆ ಕಮ್’ಬ್ಯಾಕ್ ಮಾಡಿದ್ದೇ ಒಂದು ರೋಚಕ ಉದಾಹರಣೆ . ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಯುವರಾಜ್ ಸಿಂಗ್ ಕ್ಯಾನ್ಸರ್’ಗೆ ತುತ್ತಾಗಿರುವ ಅತ್ಯಂತ ಕಡುಬಡತನದಲ್ಲಿರುವ 25 ಕ್ಯಾನ್ಸರ್ ಪೀಡಿತ […]