ವಿಷವಾಯ್ತು ಕಿಚ್ಚುಗುತಿ ಮಾರಮ್ಮನ ಪ್ರಸಾದ: ಇಬ್ಬರು ಶಂಕಿತರ ಬಂಧನ
ಚಾಮರಾಜನಗರ: ಸುಳುವಾಡಿ ಗ್ರಾಮದ ಕಿಚ್ಕುತ್ ಮಾರಮ್ಮ ದೇವಸ್ಥಾನದಲ್ಲಿ ಗೋಪುರ ಹಾಗೂ ಸುತ್ತುಗೋಡೆ ನಿರ್ಮಾಣಕ್ಕೆ ಭೂಮಿಪೂಜೆ ಏರ್ಪಡಿಸಲಾಗಿತ್ತು. ಇದಕ್ಕಾಗಿ ಅಕ್ಕಪಕ್ಕದ ಗ್ರಾಮಗಳ ಜನರೂ ಸೇರಿದಂತೆ 200ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಪೂಜೆಯ ಬಳಿಕ ಅನ್ನಸಂತರ್ಪಣೆಗಾಗಿ ಪಲಾವ್ ತಯಾರಿಸಲಾಗಿತ್ತು. ಇದನ್ನು ಸೇವಿಸಿದ ಕೆಲವರು ಅರ್ಧ ಗಂಟೆಯಲ್ಲಿಯೇ ದೇವಾಲಯದ ಸಮೀಪವೇ ಅಸ್ವಸ್ಥಗೊಂಡರು. ಈ ಪ್ರಕರಣದಲ್ಲಿ ಮಗು ಸಹಿತ 8ಕ್ಕೂ ಅಧಿಕ ಜನ ಸಾವನ್ನಪ್ಪಿದ್ದು, 80ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದು ಅವರನ್ನು ಕಾಮಗೆರೆ ಹೋಲಿ ಕ್ರಾಸ್ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ಸಂದರ್ಭದಲ್ಲಿ ದೇಗುಲದ ಆವರಣದಲ್ಲಿ ಪ್ರಸಾದ ಸೇವಿಸಿದ್ದ 60ಕ್ಕೂ […]
ಕಾರು ಮರಕ್ಕೆ ಢಿಕ್ಕಿ : ನಿವೃತ್ತ ಬ್ಯಾಂಕ್ ನೌಕರ ಸಾವು
ಕುಂದಾಪುರ: ಕಾರೊಂದು ಮರಕ್ಕೆ ಡಿಕ್ಕಿಹೊಡೆದ ಪರಿಣಾಮ ಚಾಲಕ ಸಾವನ್ನಪ್ಪಿದ ದಾರುಣ ಘಟನೆ ಕೋಟೇಶ್ವರ – ಹಾಲಾಡಿ ರಸ್ತೆಯ ಕಾಳಾವರ ಗ್ರಾಮದ ಸಳ್ವಾಡಿ ನಡುಬೆಟ್ಟು ಕ್ರಾಸ್ಬಳಿ ಗುರುವಾರ ಸಂಭವಿಸಿದೆ. ಮೊಳಹಳ್ಳಿ ಗ್ರಾಮದ ಕುಂದ್ರಾಡಿ ನಿವಾಸಿ ವಿಜಯ ಬ್ಯಾಂಕ್ ನಿವೃತ್ತ ನೌಕರ ಶಂಕರ ಶೆಟ್ಟಿ(೬೩) ಸಾವನ್ನಪ್ಪಿದವರು. ಶಂಕರ್ ಶೆಟ್ಟಿ ತಮ್ಮ ಪತ್ನಿ ಹಾಗೂ ಇಬ್ಬರು ಸಂಬಂಧಿಕರೊಂದಿಗೆ ಸ್ಯಾಂಟ್ರೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಎದುರಿನಿಂದ ಬರುತ್ತಿದ್ದ ಬೈಕಿಗೆ ಢಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ಕಾರು ಮರಕ್ಕೆ ಢಿಕ್ಕಿಯಾಗಿದೆ.ಢಿಕ್ಕಿಯ ರಭಸಕ್ಕೆ […]
ಉಡುಪಿ ಎಸ್ ಪಿ ಫೋನ್ ಕಾರ್ಯಕ್ರಮ :ಸಾರ್ವಜನಿಕರಿಂದ ಸಮಸ್ಯೆಗಳ ದೊಡ್ಡ ಪಟ್ಟಿ
ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ, ಕಟಪಾಡಿ ಹಾಗೂ ಸಂತೆಕಟ್ಟೆ ಜಂಕ್ಷನ್ ನಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸುವಂತೆ ಕೋರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು. ಅವರು ಶುಕ್ರವಾರ ಉಡುಪಿ ಎಸ್ಪಿ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕರೆಗಳನ್ನು ಆಲಿಸಿ ಮಾತನಾಡಿದರು. ಟ್ರಾಫಿಕ್ ಸಿಗ್ನಲ್ ಅಳವಡಿಸಲು ಅವಕಾಶ: ರಾ.ಹೆ.66ರ ಈ ಮೂರು ಜಂಕ್ಷನ್ ಗಳಲ್ಲಿ ತುಂಬಾ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಸರ್ವಿಸ್ ರಸ್ತೆಯಲ್ಲಿ ದ್ವಿಪಥ […]
ಅದಮಾರು ಪರ್ಯಾಯದ ಪೂರ್ವಭಾವಿ ಸಿದ್ಧತೆಗೆ ಚಾಲನೆ
ಉಡುಪಿ: ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಹಾಗೂ ಅವರ ಶಿಷ್ಯ, ಮಠದ ಕಿರಿಯ ಯತಿ ಈಶಪ್ರಿಯ ಸ್ವಾಮೀಜಿ ಅವರು ಶುಕ್ರವಾರ ಬಾಳೆ ಮುಹೂರ್ತ ನೆರವೇರಿಸುವ ಮೂಲಕ 2020, ಜನವರಿ 18ರಿಂದ ಆರಂಭವಾಗಲಿರುವ ಅದಮಾರು ಪರ್ಯಾಯದ ಪೂರ್ವಭಾವಿ ಸಿದ್ಧತೆಗೆ ಚಾಲನೆ ನೀಡಿದರು. ಮಠದ ಪುರೋಹಿತರಾದ ಶಿಬರೂರು ವಾಸುದೇವ ತಂತ್ರಿ ನೇತೃತ್ವದಲ್ಲಿ ಬಾಳೆ ಮುಹೂರ್ತದ ಧಾರ್ಮಿಕ ವಿಧಿವಿಧಾನಗಳು ನಡೆದವು. ಮೊದಲಿಗೆ ಚಂದ್ರಮೌಳೇಶ್ವರ, ಅನಂತೇಶ್ವರ ದೇವರಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಅದಮಾರು ಮಠದಿಂದ ಬಾಳೆ ಗಿಡ, ತುಳಸಿ ಗಿಡ ಮತ್ತು ಕಬ್ಬಿನ ಜಲ್ಲೆಯನ್ನು […]
ಸೌತ್ ಸ್ಟಾರ್ ಗಳನ್ನು ಹಿಂದಿಕ್ಕಿದ ರಶ್ಮಿಕಾ ಮಂದಣ್ಣ
ಇದೀಗ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸೌತ್ ಸ್ಟಾರ್ ಗಳಲ್ಲಿ ಖ್ಯಾತ ನಟರನ್ನು ಹಿಂದಿಕ್ಕಿ ರಶ್ಮಿಕಾ ಮಂದಣ್ಣ ಟಾಪ್ ಐದರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕನ್ನಡದ ಯಾವ ನಟರು ಈ ಪಟ್ಟಿಯಲ್ಲಿಲ್ಲ. ತಮಿಳಿನ ಸ್ಟಾರ್ ನಟರು ಕೂಡ ಕಾಣಿಸಿದ್ದು ಕಡಿಮೆ. ಆದ್ರೆ, ತೆಲುಗು ನಟರೇ ಹೆಚ್ಚು ಇರುವ ಟಾಪ್ ಹತ್ತರಲ್ಲಿ ಸ್ಥಾನ ಪಡೆದಿರುವ ಏಕೈಕ ಕನ್ನಡದ ನಟಿ ರಶ್ಮಿಕಾ ಮಂದಣ್ಣ. ಈ ವರ್ಷ ಗೂಗಲ್ ನಲ್ಲಿ ಸರ್ಚ್ ಆದ ಸೌತ್ ಸ್ಟಾರ್ ಗಳ ಪೈಕಿ ಚಿರಂಜೀವಿ […]