ಆಹಾ ಒಂದ್ ಪಪ್ಪಿ ಕೊಟ್ಟುಬಿಡಿ..

ನೀವು ಪ್ರೀತಿಯಿಂದ, ನಿಮ್ಮ ಪ್ರೀತಿಸುವ ಹುಡುಗಿಗೋ,ಹುಡುಗನಿಗೋ ಕೊಡುವ ಮುತ್ತಿನ ರಹಸ್ಯ ನಿಮಗೆ ಗೊತ್ತೋ? ಇಲ್ವೋ?ಆದರೆ ಒಂದು ಸಣ್ಣ ಮುತ್ತು ನಿಮ್ಮ ಪ್ರೀತಿಗೆ ದೊಡ್ಡದ್ದೊಂದುತಿರುವು ಕೊಟ್ಟುಬಿಡಬಹುದು. ಮುತ್ತು ಕೊಟ್ರೆ ಅವಳು ಬೇಜಾರ್ ಮಾಡ್ಕೊಂಡ್ರೆ, ಅಥವಾ ನನ್ನನ್ನೇ ಬಿಟ್ಟುಹೋದ್ರೆ ಅಂತೆಲ್ಲಾ ಪ್ರೀತಿಯ “ಎಲ್ ಬೋರ್ಡ್” ಸ್ಟೇಜ್ ನಲ್ಲಿರುವ, ಈಗಷ್ಟೇ ಪ್ರೀತಿಗೆ ಬಿದ್ದಿರುವ ನೀವು ಯೋಚನೆ ಮಾಡುತ್ತಿರಬಹುದು, ಅಥವಾ ಇಷ್ಟು ವರ್ಷಗಳಿಂದ ಪ್ರೀತಿಸ್ತಾ ಇರೋ ನೀವು “ಅಯ್ಯೋ ಅವಳಿಗೊಂದು ಮುತ್ತು ಕೊಡಲು ಆಗ್ತಿಲ್ವೇ” ಎಂದು ಚಡಪಡಿಸುತ್ತಿರಬಹುದು. ನಾವು ನಿಮಗೊಂದಿಷ್ಟು ಸಲಹೆ ಕೊಡುತ್ತೇವೆ. […]

ಹೆಲ್ಮೆಟ್ ನಿಂದ ಕೂದಲು ಉದುರುತ್ತಂತೆ : ಇಲ್ಲಿದೆ ಹೆಲ್ಮೆಟ್ ಬಳಕೆಯ ಟಿಪ್ಸ್ ಗಳು

ನಾವೇನೋ ಹೆಲ್ಮೆಟ್ ಬಳಸುವ ಕಾನೂನು  ಇದೆ ಅಂತೆಲ್ಲಾ ಹೆದರಿ ಇದ್ದ ಬದ್ದ ಕಡೆಗೆ ಬೈಕ್ನಲ್ಲಿ ಹೋಗುವಾಗ ಹೆಲ್ಮೆಟ್ ಹಾಕಿಕೊಂಡೇ ಹೋಗುತ್ತೇವೆ. ಆದರೆ ಅತೀಯಾದ ಹೆಲ್ಮೆಟ್ ಬಳಸಿದರೆ ತಲೆ ಕೂದಲೆಲ್ಲಾ ಉದುರಿ ಹೋಗಿ “ಬಾಂಡ್ಲಿ”ಆಗುತ್ತಾರಂತೆ. ಹೆಲ್ಮೆಟ್ ಬಳಸಿದ್ರೆ ತಲೆಕೂದಲು ಉದುರುತ್ತದೆ ಎನ್ನುವ ಕುರಿತು ಇದೀಗ ಚರ್ಚೆಯಾಗುತ್ತಿದೆ. ಕೆಲವೊಬ್ಬರು ಹಾಗೇನು ಇಲ್ಲ, ಅದು ಕೆಲವೊಂದು ಹೆಲ್ಮೆಟ್ ಗಳು ತಲೆಗೆ ಒಗ್ಗದ ಕಾರಣ ಕೂದಲು ಉದುರುತ್ತದೆ ಅಷ್ಟೆ, ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಹೆಲ್ಮೆಟ್ ಬಳಸಿದ್ರೆ ತಲೆ ಕ್ರಮೇಣ ಬೋಳಾಗುತ್ತದೆ […]

ಮೊಳಗುತಿದೆ ವೇಣಿಯವರ ಗಾನ ವಾಣಿ

ಯಕ್ಷಗಾನಕಲೆ ಸದಾ ಒಂದಿಲ್ಲೊಂದು ಕಡೆನಮ್ಮನ್ನು ನಾನಾ ರೂಪವಾಗಿ ಸೆಳೆಯುತ್ತಲೇ ಇರುತ್ತದೆ. ಯಕ್ಷಗಾನ ನಾಟ್ಯ  ವೈಭವ ಯಕ್ಷಗಾನ ರೂಪಕ,ಯಕ್ಷಗಾನ ಗೊಂಬೆಯಾಟ, ಏಕವ್ಯಕ್ತಿ ಯಕ್ಷಗಾನ ಹೀಗೆ ಯಕ್ಷಗಾನಅನ್ನೋ  ಚೈತನ್ಯಶಾಲಿ ಕಲೆಗೆ ಎಲ್ಲೆಗಳಿಲ್ಲ, ಇದುಅದರ ಹಿರಿಮೆ ಹಾಗೂ ಎಲ್ಲದರಲ್ಲೂತನ್ನನ್ನು ತಾನು ಒಳಗೊಳ್ಳುತ್ತದೆ ಎನ್ನುವುದಕ್ಕೆದೊಡ್ಡ ಉದಾಹರಣೆ. ಇದೀಗ ಯಕ್ಷಲೋಕಕ್ಕೆ ಹೊಸಸೇರ್ಪಡೆ ಯಕ್ಷದಾಸ-ಗಾನ-ವೈಭವ.ಕಾರ್ಕಳದ ವೇಣಿ ಸುಬ್ರಮಣ್ಯ ಭಟ್ಯಕ್ಷದಾಸ-ಗಾನ-ವೈಭವವನ್ನು ಕರ್ನಾಟಕದಾದ್ಯಂತ ಪ್ರಚುರ ಪಡಿಸುತ್ತಿದ್ದಾರೆ. ವಿಜಯದಾಸ, ಪುರಂದರ ದಾಸ, ಮೊದಲಾದ ಜನಪ್ರಿಯ ಕೀರ್ತನಕಾರರ ಕೀರ್ತನೆಗಳನ್ನು ತಮ್ಮ ಯಕ್ಷಗಾನ ಭಾಗವತಿಕೆಯ ಶೈಲಿಯಲ್ಲಿ, ಚಂಡೆ, ಮದ್ದಳೆ, ತಾಳಗಳ ಹಿನ್ನೆಲೆಯಲ್ಲಿ ಹಾಡಿ, […]

ಚುಮು ಚುಮು ಚಳಿಗೆ ಸೂಪ್ ಇದ್ರೆ ಸೂಪರ್

    ಚಳಿಗಾಲದಲ್ಲಿ ಬಾಯಿಚಪಲ ತೀರಿಸುವ, ಆರೋಗ್ಯಕ್ಕೂ ಪೂರಕವಾದ ವಿವಿಧ ತರಕಾರಿ ಹಾಗೂ ಸೊಪ್ಪುಗಳಿಂದ ಮನೆಯಲ್ಲೇ ಸೂಪ್ ತಯಾರಿಸಿ ಸುಮ್ಮನೆ ಸವಿದುಬಿಡಿ. ನೀವು ಸೂಪರ್ ಅನ್ನದೇ ಇರುವುದಿಲ್ಲ ಜಸ್ಟ್ ಟ್ರೈ ಇಟ್. ಟೊಮೇಟೋ ಸೂಪ್ ಬೇಕಾಗುವ ಸಾಮಗ್ರಿಗಳು:ಟೊಮ್ಯಾಟೊ 2, ಕ್ಯಾರೆಟ್ 1, ಬೀನ್ಸ್ 4, ಕೊತ್ತಂಬರಿ ಸೊಪ್ಪು, ಈರುಳ್ಳಿ 1,  ಬೆಳ್ಳುಳ್ಳಿ 3 ಎಸಳು, ಲವಂಗ, ಕಾಳುಮೆಣಸು, ಬೆಣ್ಣೆ, ಮೆಣಸಿನಪುಡಿ, ಉಪ್ಪು, ರಸ್ಕ್ ಮಾಡುವ ವಿಧಾನ:ಕ್ಯಾರೆಟ್ ಮತ್ತು ಬೀನ್ಸ್ ನ್ನು ಸಣ್ಣಗೆ ಹೆಚ್ಚಿ ಬೇಯಿಸಿಕೊಳ್ಳಬೇಕು. ಬಾಣಲೆಯಲ್ಲಿ ಬೆಣ್ಣೆ […]

ಮನದಲ್ಲೇ ಮುಚ್ಚಿಕೊಂಡೆಯಾ ವಿಧಿಯ ಮಾತು?

ಸುಂದರವಾದ ಪ್ರಾಥಮಿಕ ಶಾಲಾ ದಿನಗಳನ್ನು ಮುಗಿಸಿ ಪ್ರೌಢಶಾಲೆಗೆ ಹೆಜ್ಜೆ ಹಾಕಿದ್ದೆ. ಎಂಟನೆಯ ತರಗತಿಗೆ ದಾಖಲಾತಿಯಾಗಿ ಹೊಸ ಹೊಸ ಗೆಳೆಯರ ಪರಿಚಯವಾಗಿ ಅವರೊಂದಿಗೆ ಆಟ ಮತ್ತು ಪಾಠದಲ್ಲಿ ತೊಡಗಿಸಿಕೊಂಡಿದ್ದೆ. ಸಮಯದ ಓಟ ಅದಾಗಲೇ ಮುಂದೆ ಸಾಗಿತ್ತು. ಮಧ್ಯವಧಿ ಪರೀಕ್ಷೆ ಮುಗಿಸಿ, ರಜಾದಿನಗಳೂ ಮುಗಿದು, ಮತ್ತೆ ತರಗತಿ ಪ್ರಾರಂಭವಾದವು.ಬಹಳ ಆತ್ಮೀಯತೆಯ ಸ್ವಭಾವ ನನ್ನದು. ಹಾಸ್ಯಮಯ ಮಾತುಗಳನ್ನೇ ಜಾಸ್ತಿ ಮಾತಾಡುತ್ತಿದ್ದುದರಿಂದ ಎಲ್ಲರಿಗೂ ನಾನೆಂದರೆ ಅಚ್ಚು ಮೆಚ್ಚು, ಹೀಗೆ ದಿನ ಕಳೆಯುತ್ತಿರುವಾಗಲೇ ನನಗೊಂದು ಗೆಳತಿಯ ಪರಿಚಯವಾಗಿತ್ತು. ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದ ಆಕೆಗೆ ನನ್ನ […]