ಆಹಾ ಒಂದ್ ಪಪ್ಪಿ ಕೊಟ್ಟುಬಿಡಿ..

ನೀವು ಪ್ರೀತಿಯಿಂದ, ನಿಮ್ಮ ಪ್ರೀತಿಸುವ ಹುಡುಗಿಗೋ,ಹುಡುಗನಿಗೋ ಕೊಡುವ ಮುತ್ತಿನ ರಹಸ್ಯ ನಿಮಗೆ ಗೊತ್ತೋ? ಇಲ್ವೋ?ಆದರೆ ಒಂದು ಸಣ್ಣ ಮುತ್ತು ನಿಮ್ಮ ಪ್ರೀತಿಗೆ ದೊಡ್ಡದ್ದೊಂದುತಿರುವು ಕೊಟ್ಟುಬಿಡಬಹುದು. ಮುತ್ತು ಕೊಟ್ರೆ ಅವಳು ಬೇಜಾರ್ ಮಾಡ್ಕೊಂಡ್ರೆ, ಅಥವಾ ನನ್ನನ್ನೇ ಬಿಟ್ಟುಹೋದ್ರೆ ಅಂತೆಲ್ಲಾ ಪ್ರೀತಿಯ “ಎಲ್ ಬೋರ್ಡ್” ಸ್ಟೇಜ್ ನಲ್ಲಿರುವ, ಈಗಷ್ಟೇ ಪ್ರೀತಿಗೆ ಬಿದ್ದಿರುವ ನೀವು ಯೋಚನೆ ಮಾಡುತ್ತಿರಬಹುದು, ಅಥವಾ ಇಷ್ಟು ವರ್ಷಗಳಿಂದ ಪ್ರೀತಿಸ್ತಾ ಇರೋ ನೀವು “ಅಯ್ಯೋ ಅವಳಿಗೊಂದು ಮುತ್ತು ಕೊಡಲು ಆಗ್ತಿಲ್ವೇ” ಎಂದು ಚಡಪಡಿಸುತ್ತಿರಬಹುದು. ನಾವು ನಿಮಗೊಂದಿಷ್ಟು ಸಲಹೆ ಕೊಡುತ್ತೇವೆ. ನಮ್ಮ ಮುತ್ತಿನಂತಹ ಸಲಹೆಯನ್ನು ನೀವು ಪಾಲಿಸಿದ್ರೆ ನಿಮಗೇ ಲಾಭ, ಇಲ್ಲದಿದ್ರೆ ನಿಮಗೇ ಲಾಸ್.

ಪಪ್ಪಿ ಕೊಡುವೆ ಹತ್ತಿರ ಬಾ

-ಮುತ್ತು ನಿಮಗೆ ಕೊಡುವ ಆಪ್ತತೆಯೇ ಬೇರೆ,ನೀವು ತುಂಬಾ ಪ್ರೀತಿಸುವ ವ್ಯಕ್ತಿಗೊಂದುಮುತ್ತು ಕೊಟ್ಟು ನೋಡಿ, ಆಗ ಇಬ್ಬರಲ್ಲೂ ಆಗುವ ಉನ್ಮಾದ ,ಖುಷಿ, ಬೆಚ್ಚಗಿನ ಭಾವ, ಮೈ ಮನಗಳಲ್ಲಿ ಆಗುವ ರೋಮಾಂಚನ ನಿಮ್ಮನ್ನು ಇನ್ನಷ್ಟು ಹತ್ತಿರಾಗಿಸುತ್ತದೆ.

-ಮುತ್ತನ್ನು ಪಬ್ಲಿಕ್ ಪ್ಲೇಸ್ ನಲ್ಲಿ ಕೊಡೋದಕ್ಕೆ ಖಂಡಿತ ಹೋಗ್ಬೇಡಿ, ಸಾರ್ವಜನಿಕ ಸ್ಥಳದಲ್ಲಿ ಕೊಡುವ ಮುತ್ತು ವೇಸ್ಟ್, ಏಕಾಂತದಲ್ಲಿ ಆಕೆಯನ್ನೋ, ಆತನನ್ನೋ ಕೂರಿಸಿ ಮುತ್ತು ಕೊಟ್ಟು ಆ ಮೇಲ್ ನೋಡಿ.ಮುತ್ತು ಮಾತಾಡುತ್ತದೆ.

-ಮುತ್ತು ಕೊಡಲಿರುವ ವ್ಯಕ್ತಿಯ ಮೇಲೆ ನಿಮಗೆ ತುಂಬಾ ಪ್ರೀತಿಯೇ? ಹಾಗಾದ್ರೆ ನೀವು ಇನ್ನೇನು ಕೊಡಲಿರುವ ಮುತ್ತಿಗೆ ಸಮುದ್ರದ ಮುತ್ತಿಗಿಂತಲೂ ಜಾಸ್ತಿ ಬೆಲೆ ಇದೆ. ಆದಷ್ಟು ಬೇಗ ಮುತ್ತುಕೊಟ್ಟು ಬಿಡಿ, ಪ್ರೀತಿ ಖಂಡಿತ ಜಾಸ್ತಿ ಆಗುತ್ತೆ.

ಎಷ್ಟೋ ವರ್ಷದಿಂದ ಗಾಢವಾಗಿ ಪ್ರೀತಿಸುತ್ತಿರುವ ನೀವು ನಿಮ್ಮ ಹುಡುಗಿಗೊಂದು ಮುತ್ತು ಕೊಟ್ಟಿಲ್ಲದಿದ್ರೆ ನೀವು ವೇಸ್ಟ್, ಹುಡುಗರೇ ಮೊದಲು ಮುತ್ತು ನೀಡಿದರೆ ಹುಡುಗಿಯರು ಥ್ರಿಲ್ಲ್  ಆಗೋದು ಗ್ಯಾರಂಟಿ, ಒಮ್ಮೆ ಆಕೆಗೆ ಮುತ್ತು ಕೊಟ್ಟು ನೋಡಿ, ಆ ಮೇಲ್ ನೋಡಿ ಆಕೆಯ ಪ್ರೀತಿ,ಅದರ ರೀತಿ.

-ಮುತ್ತು ಎಲ್ಲಿಗೆ ನೀಡಬೇಕು ಅಂತ ಕೇಳ್ತೀರಾ? ಎಲ್ಲಿ ಬೇಕಾದ್ರೂ ಕೊಡಿ ನಿಮ್ ಇಷ್ಟ, ಒಂದು ಅಧ್ಯಯನದ ಪ್ರಕಾರ ತುಟಿ, ಹಣೆ, ಗಲ್ಲ, ಕೈ ಕತ್ತು ಹಾಗೂ ಇದರ ಆಸುಪಾಸು ನೀಡುವ ಮುತ್ತುಗಳು ಪ್ರೀತಿಯಲ್ಲಿ ಬೇಗ ಪಾಸ್ ಆಗುತ್ತದಂತೆ. ಹುಡುಗರಿಗೆ ಹುಡುಗಿಯರು ತುಟಿ,ಎದೆ ಹಾಗೂ ಹಣೆಗೆ ಕೊಟ್ಟರೆ  ಹುಡುಗರು ಸಖತ್ ಥ್ರಿಲ್ಲ್ ಆಗ್ತಾರಂತೆ. ತಡ ಮಾಡ್ಬೇಡಿ ಮಾರ್ರೆ ಇನ್ನಾದ್ರೂ ಮುತ್ತು ಕೊಟ್ಟು ನೋಡ್ತೀರಲ್ವಾ?

ಆಹಾ ಒಂದ್ ಪಪ್ಪಿ ಕೊಟ್ಟುಬಿಡಿ..

                                             -ಆನಂದಸಾಗರ

(ಆಹಾ..ರೋಮಾಂಚನ ಅಂಕಣದಲ್ಲಿ ಬರೋದೆಲ್ಲಾ ಬದುಕಿಗೆ ಆನಂದ ಕೊಡುವ ವಿಚಾರವೇ.ಈ ಅಂಕಣ ಆಗಾಗ ಪ್ರಕಟವಾಗುತ್ತದೆ)