ಸರಕುಗಳ ಜಿಎಸ್‌ಟಿ ದರ ಇಳಿಕೆ ಸಾಧ್ಯತೆ

ಡಿ.22ರಂದು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಸರಕು ಮತ್ತು ಸೇವಾ ತೆರಿಗೆ ದರಗಳನ್ನು ತಗ್ಗಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಗ್ರಾಹಕ ಬಳಕೆ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಶೇ 28ರ ಹಂತದಲ್ಲಿ ಇರುವ ಸರಕುಗಳನ್ನು ಶೇ 18ರ ವ್ಯಾಪ್ತಿಗೆ ತರುವ ಬಗ್ಗೆ ಸಮಿತಿ ಚಿಂತನೆ ನಡೆಸುತ್ತಿದೆ. ಏರ್‌ ಕಂಡೀಷನರ್, ಡಿಜಿಟಲ್ ಕ್ಯಾಮೆರಾ, ವಿಡಿಯೊ ರೆಕಾರ್ಡ್ಸ್‌, ವಾಷಿಂಗ್ ಮಷಿನ್‌ ಮತ್ತು ವಾಹನಗಳಿಗೆ ಗರಿಷ್ಠ ಜಿಎಸ್‌ಟಿ ಇದೆ. ಥರ್ಡ್‌ ಪಾರ್ಟಿ ಮೋಟರ್ ಇನ್ಯೂರೆನ್ಸ್‌ ಮೇಲಿನ ತೆರಿಗೆ ಸದ್ಯ ಶೇ […]

ಗದ್ದೆಗೆ ಬಿದ್ದ ಆಕಾಶ :ಸುಜಿತ್ ಕ್ಲಿಕ್ಕಿಸಿದ ಚಿತ್ರ

ಸುಜಿತ್ ಅಂಚನ್ ಕಾರ್ಕಳದ ಮುಡಾರು ಗ್ರಾಮದ ನಿವಾಸಿ.ಛಾಯಾಗ್ರಹಣದಲ್ಲಿ ಇವರಿಗೆ ಅಪಾರ ಆಸಕ್ತಿ. ನೀವು ಕ್ಲಿಕ್ಕಿಸಿದ ಕ್ರಿಯಾಶೀಲ ಛಾಯಾಚಿತ್ರಗಳಿಗೆ ಇಲ್ಲಿದೆ ಜಾಗ. ನಿಮ್ಮ ಚಿತ್ರಗಳನ್ನು [email protected] ಗೆ ಕಳುಹಿಸಿ.

ಪ್ರಾಚೀನ ಭತ್ತದ ತಳಿಗೆ ಜೀವ ನೀಡಿದ ಕೃಷಿಕ

ಆ ದಾರಿ ಹೊಕ್ಕರೆ ಎಲ್ಲೆಲ್ಲೂ ತೋಟಗಳ ನೆರಳು, ಆ ನೆರಳಲ್ಲೇ ಸಾಗಿದರೆ ಪಚ್ಚೆ ತೆನೆಯ ಗಾಳಿ ಮೈ ಸೋಕಿ ಮನಸ್ಸಲ್ಲಿ ಅರಳಿಸುವ ಅನುಭವ ವಿಶಿಷ್ಟ. ಒಂದೆಕರೆ ಜಾಗದಲ್ಲಿ ಹರಡಿ ತೊನೆದಾಡುವ ಆ ಗದ್ದೆಯ ತೆನೆಗಳನ್ನು ನೋಡುತ್ತ ನಿಂತರೆ ಮಣ್ಣಿನ ಫಲವತ್ತತೆ, ಮುಂದೆ ಅಕ್ಕಿಯಾಗುವ ಆ ಭತ್ತದ ಪರಿಮಳ ಈಗಲೇ ಮನಸ್ಸನ್ನು ಆವರಿಸಿಕೊಂಡುಬಿಡುತ್ತದೆ. ಪ್ರಾಚೀನ ಬತ್ತದ ತಳಿಯ ಮಹತ್ವ ಅರಿತವರು ಈ ಕಾಲದಲ್ಲಿ ಕಡಿಮೆಯಾದರೂ, ಪ್ರಾಚೀನ ತಳಿಯ ಮಹತ್ವ ಈ ಕಾಲದ ಮಂದಿಗೆ ಈಗೀಗ ಅರಿವಾಗುತ್ತಿರುವುದು ಸುಳ್ಳಲ್ಲ. ಆದರೆ […]

ಆಹಾ ಒಂದ್ ಪಪ್ಪಿ ಕೊಟ್ಟುಬಿಡಿ..

ನೀವು ಪ್ರೀತಿಯಿಂದ, ನಿಮ್ಮ ಪ್ರೀತಿಸುವ ಹುಡುಗಿಗೋ,ಹುಡುಗನಿಗೋ ಕೊಡುವ ಮುತ್ತಿನ ರಹಸ್ಯ ನಿಮಗೆ ಗೊತ್ತೋ? ಇಲ್ವೋ?ಆದರೆ ಒಂದು ಸಣ್ಣ ಮುತ್ತು ನಿಮ್ಮ ಪ್ರೀತಿಗೆ ದೊಡ್ಡದ್ದೊಂದುತಿರುವು ಕೊಟ್ಟುಬಿಡಬಹುದು. ಮುತ್ತು ಕೊಟ್ರೆ ಅವಳು ಬೇಜಾರ್ ಮಾಡ್ಕೊಂಡ್ರೆ, ಅಥವಾ ನನ್ನನ್ನೇ ಬಿಟ್ಟುಹೋದ್ರೆ ಅಂತೆಲ್ಲಾ ಪ್ರೀತಿಯ “ಎಲ್ ಬೋರ್ಡ್” ಸ್ಟೇಜ್ ನಲ್ಲಿರುವ, ಈಗಷ್ಟೇ ಪ್ರೀತಿಗೆ ಬಿದ್ದಿರುವ ನೀವು ಯೋಚನೆ ಮಾಡುತ್ತಿರಬಹುದು, ಅಥವಾ ಇಷ್ಟು ವರ್ಷಗಳಿಂದ ಪ್ರೀತಿಸ್ತಾ ಇರೋ ನೀವು “ಅಯ್ಯೋ ಅವಳಿಗೊಂದು ಮುತ್ತು ಕೊಡಲು ಆಗ್ತಿಲ್ವೇ” ಎಂದು ಚಡಪಡಿಸುತ್ತಿರಬಹುದು. ನಾವು ನಿಮಗೊಂದಿಷ್ಟು ಸಲಹೆ ಕೊಡುತ್ತೇವೆ. […]

ಹೆಲ್ಮೆಟ್ ನಿಂದ ಕೂದಲು ಉದುರುತ್ತಂತೆ : ಇಲ್ಲಿದೆ ಹೆಲ್ಮೆಟ್ ಬಳಕೆಯ ಟಿಪ್ಸ್ ಗಳು

ನಾವೇನೋ ಹೆಲ್ಮೆಟ್ ಬಳಸುವ ಕಾನೂನು  ಇದೆ ಅಂತೆಲ್ಲಾ ಹೆದರಿ ಇದ್ದ ಬದ್ದ ಕಡೆಗೆ ಬೈಕ್ನಲ್ಲಿ ಹೋಗುವಾಗ ಹೆಲ್ಮೆಟ್ ಹಾಕಿಕೊಂಡೇ ಹೋಗುತ್ತೇವೆ. ಆದರೆ ಅತೀಯಾದ ಹೆಲ್ಮೆಟ್ ಬಳಸಿದರೆ ತಲೆ ಕೂದಲೆಲ್ಲಾ ಉದುರಿ ಹೋಗಿ “ಬಾಂಡ್ಲಿ”ಆಗುತ್ತಾರಂತೆ. ಹೆಲ್ಮೆಟ್ ಬಳಸಿದ್ರೆ ತಲೆಕೂದಲು ಉದುರುತ್ತದೆ ಎನ್ನುವ ಕುರಿತು ಇದೀಗ ಚರ್ಚೆಯಾಗುತ್ತಿದೆ. ಕೆಲವೊಬ್ಬರು ಹಾಗೇನು ಇಲ್ಲ, ಅದು ಕೆಲವೊಂದು ಹೆಲ್ಮೆಟ್ ಗಳು ತಲೆಗೆ ಒಗ್ಗದ ಕಾರಣ ಕೂದಲು ಉದುರುತ್ತದೆ ಅಷ್ಟೆ, ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಹೆಲ್ಮೆಟ್ ಬಳಸಿದ್ರೆ ತಲೆ ಕ್ರಮೇಣ ಬೋಳಾಗುತ್ತದೆ […]