ಸಿಕ್ಕಾಪಟ್ಟೆ ಹಿಟ್ ಆಗ್ತಿದೆ “ಪಿಕ್ಚರ್” ತುಳು ಮೂವೀ ಸಾಂಗ್ “ತಕ ತಕ ನಲಿಪುಗ” ನೀವಿನ್ನೂ ಕೇಳ್ಲಿಲ್ಲಾಂದ್ರೆ ಲಿಂಕ್ ಇಲ್ಲಿದೆ

ಗೋಲ್ಡನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ನಿರ್ದೇಶನ ಮಾಡ್ತಿರೋ ತುಳು ಮೂವೀ “ಪಿಕ್ಚರ್” ಇದ್ರ ಮೊದಲ ಲಿರಿಕಲ್ ವೀಡಿಯೋ ಸಾಂಗ್ “ತಕ ತಕ ನಲಿಪುಗ” ರಿಲೀಸ್ ಆಗಿದ್ದು ಫುಲ್ ಹವಾ ಕ್ರಿಯೇಟ್ ಮಾಡ್ತಿದೆ. ಸಂದೀಪ್ ಬೆದ್ರ ಆಕ್ಷನ್ ಕಟ್ ಹೇಳಿರೋ ಈ ಸಿನಿಮಾದ ರಿಲೀಸ್ ಡೇಟ್ ಕೂಡಾ ಅನೌನ್ಸ್ ಆಗಿದ್ದು, ಜುಲೈ 24 ರಂದು ಕನ್ನಡ ಹಾಗೂ ತುಳು ಎರಡೂ ಭಾಷೆಗಳಲ್ಲಿ ತೆರೆಗೆ ಬರಲಿದೆ. ನಿತ್ಯಪ್ರಕಾಶ್ ಬಂಟ್ವಾಳ್ ನಾಯಕನಾಗಿ ಮಿಂಚಲಿದ್ದು, ಅಮೃತಾ, ದೇವಿದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು ಮುಂತಾದವರು ತಾರಾಬಳಗದಲ್ಲಿದ್ದಾರೆ. ಸಂತೋಷ್ ರೈ ಪಾತಾಜೆ, ಚಂದ್ರಶೇಖರ್ ಎಸ್ ಸಿನಿಮಾಟೋಗ್ರಫಿಯಿದ್ದು, ರಾಜು ಆರ್ಯನ್ ಸಂಕಲನವಿದೆ.

ಕನ್ನಡದ ಫೇಮಸ್ ನಿರ್ದೇಶಕ ಅನೂಪ್ ಭಂಡಾರಿ ಸಾಹಿತ್ಯ ರಚಿಸಿರುವ ಈ ಚಿತ್ರದ ತುಳು ಹಾಡು “ತಕ ತಕ ನಲಿಪುಗ” ಲಿರಿಕಲ್ ಹಾಡಿಗೆ ಸ್ಯಾಮ್ಯುಯೆಲ್ ಅಬಿ ಸಂಗೀತ ನೀಡಿದ್ದು, ಸ್ಯಾಮ್ಯುಯೆಲ್ ಅಬಿ, ಅಧ್ವಿಕ್, ಏಂಜಲ್ ಮೇರಿ ಜೋಸೆಫ್, ಶಮೀರ್ ಮುಡಿಪು ಧ್ವನಿಯಿದೆ. ಮದುವೆ ಸನ್ನಿವೇಶದಲ್ಲಿ ಬರುವ ಹಾಡು ಇದಾಗಿದ್ದು, ಕೇಳುಗರನ್ನು ಕುಣಿಯುವಂತೆ ಮಾಡುತ್ತದೆ.  

https://youtu.be/CZz71NNgtFY?si=YKjEPuBSRhzH_Ezs: ಸಿಕ್ಕಾಪಟ್ಟೆ ಹಿಟ್ ಆಗ್ತಿದೆ “ಪಿಕ್ಚರ್” ತುಳು ಮೂವೀ ಸಾಂಗ್ “ತಕ ತಕ ನಲಿಪುಗ” ನೀವಿನ್ನೂ ಕೇಳ್ಲಿಲ್ಲಾಂದ್ರೆ ಲಿಂಕ್ ಇಲ್ಲಿದೆ