ಪೆರ್ಡೂರಿನ ಸ್ವರ್ಣ ಸಿರಿ ಜ್ಯುವೆಲ್ಲರ್ಸ್ ನಲ್ಲಿ ಆಭರಣ ಪ್ರಿಯರಿಗಾಗಿ ಕಾದಿದೆ ಅತ್ಯುತ್ತಮ ಉಳಿತಾಯ ಯೋಜನೆ.!

ಉಡುಪಿ: ಗ್ರಾಹಕರಿಗೆ ಅತ್ಯುತ್ತಮ ಸೇವೆ ಮತ್ತು ಚಿನ್ನಾಭರಣಗಳನ್ನು ಒದಗಿಸುತ್ತಿರುವ ಪೆರ್ಡೂರಿನ ಎ.ಪಿ.ಟಿ. ಶಾಲೆ ಎದುರು, ಅನಂತ ಸಿರಿ ಆರ್ಕೇಡ್ ನಲ್ಲಿರುವ ಸ್ವರ್ಣ ಸರಿ ಜ್ಯುವೆಲ್ಲರ್ಸ್ ಈಗ ಸ್ವರ್ಣ ಸರಿ ಮುಂಗಡ ಉಳಿತಾಯ ಯೋಜನೆಯನ್ನು ಘೋಷಿಸಿದೆ. ಏನಿದು ಸ್ವರ್ಣ ಸಿರಿ ಮುಂಗಡ ಉಳಿತಾಯ ಯೋಜನೆ: ಸ್ವರ್ಣ ಸಿರಿ ಮುಂಗಡ ಉಳಿತಾಯ ಯೋಜನೆ, ಈ ಯೋಜನೆಯ ಕನಿಷ್ಠ ಮೊತ್ತ ರೂ. 500/-ರಿಂದ ಗರಿಷ್ಠ ರೂ. 50,000/-ವರೆಗೆ ಆಗಿದ್ದು, ಈ ಯೋಜನೆಯಲ್ಲಿ ಗ್ರಾಹಕರು ಸಮಾನ ಮೊತ್ತವನ್ನು 11 ಕಂತುಗಳಲ್ಲಿ ಪಾವತಿಸಬೇಕು. ಗ್ರಾಹಕರು […]
ಎ. 7 ರಂದು ‘ಹಿರಿಯಡ್ಕದಲ್ಲಿ ಶ್ಯಾಮಿಲಿ ಸ್ಟ್ರಿಂಗ್ಸ್’ ಅದ್ಧೂರಿ ಉದ್ಘಾಟನೆ, ವಿವಿಧ ಸಮಾರಂಭಗಳಿಗೆ ಭವ್ಯ ಸಭಾಂಗಣ

ಉಡುಪಿ: ಹಿರಿಯಡಕದ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣಗೊಂಡಿರುವ ‘ಶ್ಯಾಮಿಲಿ ಸ್ಟ್ರಿಂಗ್ಸ್’ ಕನ್ವೆನ್ಷನ್ ಸೆಂಟರ್ ಏಪ್ರಿಲ್ 7 ರಂದು ಉದ್ಘಾಟನೆಗೊಳ್ಳಲಿದೆ. ಕೋಸ್ಟಲ್‌ವುಡ್ ರೆಸಾರ್ಟ್ ಉಡುಪಿ ಸಹಯೋಗದಲ್ಲಿ ನಿರ್ಮಿತವಾಗಿರುವ ಈ ಭವ್ಯ ಸಂಕೀರ್ಣವು, ವಿವಿಧ ಸಮಾರಂಭಗಳನ್ನು ಒಂದೇ ಸ್ಥಳದಲ್ಲಿ ಆಯೋಜಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಡಾ| ಜಿ. ಶಂಕರ್ ಅವರ ಕನಸಿನ ಯೋಜನೆಯಾಗಿ ರೂಪುಗೊಂಡಿರುವ ಈ ಕೇಂದ್ರವು ಕೈಗೆಟಕುವ ದರದಲ್ಲಿ ಉತ್ತಮ ಸೌಲಭ್ಯಗಳನ್ನು ಒದಗಿಸುವ ಉದ್ದೇಶ ಹೊಂದಿದೆ. ಶ್ಯಾಮಿಲಿ ಸ್ಟ್ರಿಂಗ್ಸ್’ ನಲ್ಲಿ ಏನೇನಿದೆ? ಸುಮಾರು 1,000 ಮಂದಿಗೆ ಆಸನ […]
ಸಿಕ್ಕಾಪಟ್ಟೆ ಹಿಟ್ ಆಗ್ತಿದೆ “ಪಿಕ್ಚರ್” ತುಳು ಮೂವೀ ಸಾಂಗ್ “ತಕ ತಕ ನಲಿಪುಗ” ನೀವಿನ್ನೂ ಕೇಳ್ಲಿಲ್ಲಾಂದ್ರೆ ಲಿಂಕ್ ಇಲ್ಲಿದೆ

ಗೋಲ್ಡನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ನಿರ್ದೇಶನ ಮಾಡ್ತಿರೋ ತುಳು ಮೂವೀ “ಪಿಕ್ಚರ್” ಇದ್ರ ಮೊದಲ ಲಿರಿಕಲ್ ವೀಡಿಯೋ ಸಾಂಗ್ “ತಕ ತಕ ನಲಿಪುಗ” ರಿಲೀಸ್ ಆಗಿದ್ದು ಫುಲ್ ಹವಾ ಕ್ರಿಯೇಟ್ ಮಾಡ್ತಿದೆ. ಸಂದೀಪ್ ಬೆದ್ರ ಆಕ್ಷನ್ ಕಟ್ ಹೇಳಿರೋ ಈ ಸಿನಿಮಾದ ರಿಲೀಸ್ ಡೇಟ್ ಕೂಡಾ ಅನೌನ್ಸ್ ಆಗಿದ್ದು, ಜುಲೈ 24 ರಂದು ಕನ್ನಡ ಹಾಗೂ ತುಳು ಎರಡೂ ಭಾಷೆಗಳಲ್ಲಿ ತೆರೆಗೆ ಬರಲಿದೆ. ನಿತ್ಯಪ್ರಕಾಶ್ ಬಂಟ್ವಾಳ್ ನಾಯಕನಾಗಿ ಮಿಂಚಲಿದ್ದು, […]
ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇಗುಲ- ಶ್ರೀ ಮುಖ್ಯಪ್ರಾಣ ದೇವರಿಗೆ ಬ್ರಹ್ಮಕುಂಭಾಭಿಷೇಕ

ಉಡುಪಿ: ಇಂದ್ರಾಳಿಯ ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವರ ಗುಡಿಯಲ್ಲಿ ಭಾನುವಾರ ಅತ್ಯಂತ ವೈಭವದಿಂದ ಬ್ರಹ್ಮಕಲಶೋತ್ಸವ ನೇರವೇರಿತು. ಅಷ್ಟಬಂಧ ಸಹಿತವಾಗಿ ಪುನಃ ಪ್ರತಿಷ್ಠಾಪಿತ ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವರಿಗೆ ವೇದಮೂರ್ತಿ ಪುತ್ತೂರು ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಉಪಾಧ್ಯಾಯರ ಉಪಸ್ಥಿತಿಯಲ್ಲಿ ಬೆಳಿಗ್ಗೆ ಬ್ರಹ್ಮಕುಂಭಾಭಿಷೇಕ ನೆರವೇರಿಸಲಾಯಿತು. ಬೆಳಿಗ್ಗೆ ಗಣಹೋಮ, ಪ್ರಧಾನ ಕಲಾ ಸಾನಿಧ್ಯ ಹೋಮ, 1001 ಕಲಶಾರಾಧನೆ, ಪ್ರಸನ್ನ ಪೂಜೆ, ಮಹಾಪೂಜೆ, ಪಲ್ಲ ಪೂಜೆ ಜರುಗಿತು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು. […]
ಕರ್ನಾಟಕ: ದ್ವಿತೀಯ ಪಿಯುಸಿ ಫಲಿತಾಂಶ ದಿನಾಂಕ ಪ್ರಕಟ?

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಇದೇ ಏ.8 ರಂದು ಪ್ರಕಟವಾಗುವ ಸಾಧ್ಯತೆ ಇದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮೂಲಗಳು ತಿಳಿಸಿವೆ. ಈ ಮೊದಲಿನ ತಾತ್ಕಾಲಿಕ ವೇಳಾಪಟ್ಟಿಯಂತೆ 7ರಂದು ಫಲಿತಾಂಶ ಪ್ರಕಟವಾಗಬೇಕಿತ್ತು. ಫಲಿತಾಂಶ ಪ್ರಕಟಿಸುವ ಬಗ್ಗೆ ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗಿದ್ದು, ಅವರ ಸಮಯ ನೋಡಿಕೊಂಡು ಫಲಿತಾಂಶ ಪ್ರಕಟಿಸಲಾಗುವುದು ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.