ವರಾಹರೂಪಂ ಹಾಡಿನ ಮೊದಲನೆ ತಡೆ ಪಾರು: ಹಾಡಿನ ಬಳಕೆಗೆ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ಅನುಮತಿ

ತಿರುವನಂತಪುರ: ಕಾಂತಾರ ಚಿತ್ರದ ವರಾಹರೂಪಂ ಹಾಡಿನ ಕಾನೂನಾತ್ಮಕ ಸಂಘರ್ಷದಲ್ಲಿ ನಿರ್ಮಾಪಕರಾದ ಹೊಂಬಾಳೆ ಫಿಲಂಮ್ಸ್ ನ ಮೊದಲನೆ ತಡೆ ಪಾರಾಗಿದ್ದು, ಹಾಡಿನ ಬಳಕೆಗೆ ಅನುಮತಿ ದೊರೆತಿದೆ. ವರಾಹರೂಪಂ ಹಾಡನ್ನು ತನ್ನ ನವರಸಂ ಹಾಡಿನಿಂದ ಕೃತಿಚೌರ್ಯ ಮಾಡಲಾಗಿದೆ ಎಂದು ಕೇರಳದ ಸಂಗೀತ ಬ್ಯಾಂಡ್ ಥೈಕ್ಕುಡಂ ಬ್ರಿಡ್ಜ್ ಕೋರ್ಟಿನಲ್ಲಿ ದಾವೆ ಹೂಡಿದ್ದು ಇದನ್ನು ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ. ಈ ವಿಚಾರವಾಗಿ ಈ ಹಾಡಿನ ಬರಹಗಾರ ಶಶಿರಾಜ್ ಕಾವೂರು, “ಇಂದು ಕೆಳ ನ್ಯಾಯಾಲಯವು ಎರಡೂ ಕಡೆಯವರ ವಾದ ಆಲಿಸಿದ ಬಳಿಕ ಥೈಕ್ಕುಡಂ […]

ವರಾಹರೂಪಂ ಹಾಡನ್ನು ಸುಶ್ರಾವ್ಯವಾಗಿ ಹಾಡಿದ ಜರ್ಮನಿಯ ನೇತ್ರಹೀನ ಕುವರಿ ಕ್ಯಾಸ್ಮೇ

ಕ್ಯಾಸ್ಮೇ ಎನ್ನುವ ವಿದೇಶೀ ಹುಡುಗಿಯೊಬ್ಬರು ಕಾಂತಾರದ ವರಾಹರೂಪಂ ಹಾಡನ್ನು ಹಾಡುವ ಮೂಲಕ ನೆಟ್ಟಿಗರ ಅಚ್ಚರಿಗೆ ಕಾರಣರಾಗಿದ್ದಾರೆ. “ನಿಮ್ಮಲ್ಲಿ ಹಲವರು ನಾನು ಕನ್ನಡದಲ್ಲಿ ಹಾಡಬೇಕೆಂದು ಬಯಸಿದ್ದರು, ಈ ಬಾರಿ ನಾನು ಸಾಹಿತ್ಯವನ್ನು ಸರಿಯಾಗಿ ಹೇಳಿದ್ದೇನೆ ಎಂದು ಭಾವಿಸುತ್ತೇನೆ” ಎಂದು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಹೇಳಿಕೊಂಡಿರುವ ಇವರು ವರಾಹರೂಪಂ ಹಾಡನ್ನು ಹಾಡಿದ್ದಾರೆ. https://www.instagram.com/reel/Ck0sRJ9MAad/?igshid=YmMyMTA2M2Y%3D 19 ವರ್ಷದ ನೇತ್ರಹೀನ ಹಾಡುಗಾರ್ತಿ ಮೂಲತಃ ಜರ್ಮನಿಯವರು. ಕ್ಯಾಸ್ಮೇ ಭಾರತವನ್ನು ಪ್ರೀತಿಸುತ್ತಾರೆ ಮತ್ತು ಭಾರತೀಯ ಭಾಷೆಗಳ ಹಲವಾರು ಹಾಡುಗಳನ್ನು ಹಾಡಿದ್ದಾರೆ. ಇವರ ಇನ್ಸ್ಟಾಗ್ರಾಂ ಪ್ರೊಫೈಲ್ […]

ಕಾಂತಾರ ವರಾಹರೂಪಂ ಹಾಡಿಗೆ ಕಂಟಕ: ಕೃತಿಚೌರ್ಯದ ಆಧಾರದ ಮೇಲೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ ಕೇರಳ ಹೈಕೋರ್ಟ್

ತಿರುವನಂತಪುರಂ: ವಿಶ್ವದಾದ್ಯಂತ ಸಂಚಲನ ಮೂಡಿಸಿದ ಕಾಂತಾರ ಚಿತ್ರಕ್ಕೆ ಕಂಟಕವೊಂದು ಎದುರಾಗಿದೆ. ಬೆಳಗ್ಗಿನ ಸುಪ್ರಭಾತದಂತೆ ಕಾಂತಾರ ಚಿತ್ರದ ಪಂಜುರ್ಲಿ ದೈವದ ‘ವರಾಹ ರೂಪಂ’ ಹಾಡು ಮನಸೂರೆಗೊಳಿಸುವಂತಿದ್ದು, ನಿತ್ಯವೂ ಎಲ್ಲರ ಮನೆಯಲ್ಲೂ ಕೇಳಿಸುತ್ತಿದೆ. ಇದೀಗ ಚಿತ್ರತಂಡವು ಈ ಹಾಡನ್ನು ಬಳಸದಂತೆ ಕೇರಳದ ನ್ಯಾಯಾಲಯವು ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಕೇರಳ ಮೂಲದ ರಾಕ್ ಮ್ಯೂಸಿಕ್ ಬ್ಯಾಂಡ್ ‘ತೈಕ್ಕುಡಮ್ ಬ್ರಿಡ್ಜ್’ ಸಲ್ಲಿಸಿದ ಮೊಕದ್ದಮೆಯಲ್ಲಿ ಕೋಝಿಕ್ಕೋಡ್‌ನ ಪ್ರಧಾನ ಜಿಲ್ಲಾ ನ್ಯಾಯಾಲಯವು ಮಧ್ಯಂತರ ಆದೇಶವನ್ನು ನೀಡಿದೆ. ವರಾಹ ರೂಪಂ ಅನ್ನು ತೈಕ್ಕುಡಮ್ ಬ್ರಿಡ್ಜ್ ಬ್ಯಾಂಡ್ ನ […]