ವರಾಹರೂಪಂ ಹಾಡನ್ನು ಸುಶ್ರಾವ್ಯವಾಗಿ ಹಾಡಿದ ಜರ್ಮನಿಯ ನೇತ್ರಹೀನ ಕುವರಿ ಕ್ಯಾಸ್ಮೇ

ಕ್ಯಾಸ್ಮೇ ಎನ್ನುವ ವಿದೇಶೀ ಹುಡುಗಿಯೊಬ್ಬರು ಕಾಂತಾರದ ವರಾಹರೂಪಂ ಹಾಡನ್ನು ಹಾಡುವ ಮೂಲಕ ನೆಟ್ಟಿಗರ ಅಚ್ಚರಿಗೆ ಕಾರಣರಾಗಿದ್ದಾರೆ. “ನಿಮ್ಮಲ್ಲಿ ಹಲವರು ನಾನು ಕನ್ನಡದಲ್ಲಿ ಹಾಡಬೇಕೆಂದು ಬಯಸಿದ್ದರು, ಈ ಬಾರಿ ನಾನು ಸಾಹಿತ್ಯವನ್ನು ಸರಿಯಾಗಿ ಹೇಳಿದ್ದೇನೆ ಎಂದು ಭಾವಿಸುತ್ತೇನೆ” ಎಂದು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಹೇಳಿಕೊಂಡಿರುವ ಇವರು ವರಾಹರೂಪಂ ಹಾಡನ್ನು ಹಾಡಿದ್ದಾರೆ.

19 ವರ್ಷದ ನೇತ್ರಹೀನ ಹಾಡುಗಾರ್ತಿ ಮೂಲತಃ ಜರ್ಮನಿಯವರು. ಕ್ಯಾಸ್ಮೇ ಭಾರತವನ್ನು ಪ್ರೀತಿಸುತ್ತಾರೆ ಮತ್ತು ಭಾರತೀಯ ಭಾಷೆಗಳ ಹಲವಾರು ಹಾಡುಗಳನ್ನು ಹಾಡಿದ್ದಾರೆ. ಇವರ ಇನ್ಸ್ಟಾಗ್ರಾಂ ಪ್ರೊಫೈಲ್ ನಲ್ಲಿ ಇವರು ಹಾಡಿರುವ ಹಾಡುಗಳಿವೆ. ಈಕೆ ಕಳೆದ ಐದು ವರ್ಷಗಳಿಂದ ತಬಲಾ ವಾದನವನ್ನೂ ಮಾಡುತ್ತಿದ್ದಾರೆ..

ಪ್ರಪಂಚವನ್ನು ನೋಡಲು ಈಕೆಯ ಬಳಿ ಕಣ್ಣಿಲ್ಲದಿರಬಹುದು ಆದರೆ ದೇವರು ಈಕೆಗೆ ನೀಡಿದ ಅತ್ಯದ್ಭುತ ವರವೆಂದರೆ ಈಕೆಯ ಸುಮಧುರ ಕಂಠ. ಕನ್ನಡದ ಕಾಂತಾರ ಸಿನಿಮಾದ ವರಾಹರೂಪಂ ಹಾಡನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿರುವ ವೀಡಿಯೋವನ್ನು ಫಿಲ್ಮಿ ಕಾರ್ನರ್ ಟ್ವಿಟರ್ ನಲ್ಲಿ ಹಂಚಿಕೊಂಡಿದೆ.