ಪಿತ್ರೋಡಿ ಮಾತೃಮಂಡಳಿ ಸೇವಾ ಟ್ರಸ್ಟ್ ವತಿಯಿಂದ ಸಾಮೂಹಿಕ ಲಕ್ಷ್ಮೀ ಪೂಜೆ ಸಂಪನ್ನ

ಪಿತ್ರೋಡಿ: ಮಾತೃಮಂಡಳಿ ಸೇವಾ ಟ್ರಸ್ಟ್ ವತಿಯಿಂದ ಆಗಸ್ಟ್ 26 ಶುಕ್ರವಾರದಂದು ಉದ್ಯಾವರದ ಶ್ರೀ ಶಂಭು ಶೈಲೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಲಕ್ಷ್ಮೀ ಪೂಜೆಯು ಜರುಗಿತು. ಪೂಜೆಯಲ್ಲಿ ಅತ್ಯಾಧಿಕ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.

ಮಾತೃ ಛಾಯಾ ಶಿಶು ಮಂದಿರದ ವತಿಯಿಂದ ಮುದ್ದು ಕೃಷ್ಣ ಸ್ಪರ್ಧೆ

ಪಿತ್ರೋಡಿ: ಉದ್ಯಾವರದ ಮಾತೃ ಮಂಡಲಿಯ ಅಂಗಸಂಸ್ಥೆ ಮಾತೃ ಛಾಯಾ ಶಿಶು ಮಂದಿರ ವತಿಯಿಂದ ಮುದ್ದು ಕೃಷ್ಣ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತೃ ಮಂಡಲಿ ಟ್ರಸ್ಟಿಗಳಾದ ನಯನಾ ಗಣೇಶ್, ಸುಮತಿ ಯು ಮೈಂದನ್ , ಬೇಬಿ ಟಿ.ಬಂಗೇರ,ಮಾತೃ ಛಾಯಾ ಶಿಶು ಮಂದಿರದ ಅಧ್ಯಕ್ಷೆ ಗುಲಾಬಿ ಡಿ.ಸನಿಲ್, ಪ್ರೇಮ ಶಿವದಾಸ್, ಚಂದ್ರಾವತಿ ಭಾಸ್ಕರ್, ಸಬಿತ ಮೈಂದನ್,ಕುಸುಮ ವಿಶ್ವನಾಥ್,ಮಮತಾ, ವಿನುತಾ ಹಾಗೂ ಮಾತಾಜಿ ಯಮುನಾ ಉಪಸ್ಥಿತರಿದ್ದರು.

ಉದ್ಯಾವರ: ಉದ್ಯಮಿಗಳ ಒಣ ಪ್ರತಿಷ್ಠೆಗೆ ಹೈರಾಣಾದ ಸ್ಥಳೀಯ ಜನತೆ ರಸ್ತೆ ಅವಾಂತರದಿಂದ ಬದುಕು ನರಕ

ಉದ್ಯಾವರ: ಉಳಿದೆಲ್ಲಾ ಕಡೆ ಮಳೆಯಿಂದಾಗಿ ರಸ್ತೆ ಸಮಸ್ಯೆಗಳುಂಟಾಗಿದ್ದರೆ, ಉದ್ಯಾವರದ ಜನರಿಗೆ ಮಾತ್ರ ಮಳೆಗಾಲ ಆರಂಭಕ್ಕೂ ಮೊದಲೆ ರಸ್ತೆ ಸಮಸ್ಯೆ ಎದುರಾಗಿತ್ತು. ಉದ್ಯಾವರದಿಂದ ಪಿತ್ರೋಡಿಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಜನರು ಹೊಂಡ ಗುಂಡಗಳಿಂದ ತಪ್ಪಿಸಿಕೊಂಡು ವಾಹನ ಸಂಚಾರ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಎರಡು ತಿಂಗಳ ಹಿಂದೆ ಉದ್ಯಾವರ ಪಂಚಾಯತ್ ಮುಂಭಾಗದಿಂದ ಪಿತ್ರೋಡಿ ಹೋಗುವ 170 ಮೀಟರ್ ರಸ್ತೆಯನ್ನು ಅಗೆದು ಹಾಕಿ ಕಾಮಗಾರಿಯನ್ನು ಆಮೆಗತಿಯಲ್ಲಿ ನಡೆಸಲಾಗುತ್ತಿತ್ತು. ಈ ಬಗ್ಗೆ ಜನಪ್ರತಿನಿಧಿಗಳ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಸಿಮೆಂಟ್ […]

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

  ಉಡುಪಿ: ಲಯನ್ಸ್ ಜಿಲ್ಲೆ 317-C, ಪ್ರಾಂತ್ಯ VII ಹಾಗೂ ವಲಯ II ರ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ 4 ನೇ ಪದಗ್ರಹಣ ಸಮಾರಂಭ ಉದ್ಯಾವರದ ಸೈಂಟ್ ಫ್ರಾನ್ಸಿಸ್ ಝೇವಿಯರ್ ಚರ್ಚ್ ನ ಝೇವಿಯರ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿದ ಜಿಲ್ಲಾ 317 C ಯ ಪ್ರಥಮ ಜಿಲ್ಲಾ ಉಪ ಗವರ್ನರ್ ಲ. ಡಾ.ನೇರಿ ಕರ್ನೆಲಿಯೋ ಎಂಜೆಎಫ್ ಅವರು ಮಾತನಾಡಿ, ನಮ್ಮಲ್ಲಿ ಭರವಸೆ, ಧನಾತ್ಮಕ ಚಿಂತನೆ, ಆತ್ಮ ಗೌರವ, ಸ್ವಾಭಿಮಾನ […]

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ಅಧ್ಯಕ್ಷರಾಗಿ ಅನಿಲ್ ಲೋಬೊ ಆಯ್ಕೆ

ಉದ್ಯಾವರ : ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ 2022-23ರ ಸಾಲಿನ ನೂತನ ಅಧ್ಯಕ್ಷರಾಗಿ ಲ. ಅನಿಲ್ ಲೋಬೊ ಆಯ್ಕೆ ಅಗಿದ್ದಾರೆ. ಇತ್ತೀಚಿಗೆ ನಡೆದ ಮಾಸಿಕ ಸಭೆಯಲ್ಲಿ ನೂತನ ಸಾಲಿನ ಕಾರ್ಯಕಾರಿ ಸಮಿತಿಯ ಚುನಾವಣೆ ನಡೆದಿದ್ದು ಕಾರ್ಯದರ್ಶಿಯಾಗಿ ಲ. ಸ್ಟೀವನ್ ಕುಲಾಸೊ ಮತ್ತು ಕೋಶಾಧಿಕಾರಿಯಾಗಿ ಲ. ರೋಶನ್ ಕ್ರಾಸ್ತಾ ಆಯ್ಕೆಯಾಗಿದ್ದಾರೆ. ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮವು ಜುಲೈ 2 ರಂದು ಶನಿವಾರ […]