ಉಡುಪಿ ಎಕ್ಸ್ಪ್ರೆಸ್ ಅಮ್ಮ ವಿತ್ ಕಂದಮ್ಮ ಸೀಸನ್-3: ಬಹುಮಾನ ಗೆದ್ದ ಅಮ್ಮ-ಮಕ್ಕಳಿವರು!!

ಉಡುಪಿ: ವಸ್ತುನಿಷ್ಠ ವರದಿಗಾರಿಕೆಗೆ ಹೆಸರುವಾಸಿಯಾದ ನಿಮ್ಮ ಉಡುಪಿ ಎಕ್ಸ್ಪ್ರೆಸ್ ಕಳೆದ ಬಾರಿಯಂತೆಯೆ ಈ ಬಾರಿಯೂ ಮಕ್ಕಳ ದಿನಾಚರಣೆ ಪ್ರಯುಕ್ತ ಮುದ್ದು ಕಂದಮ್ಮಗಳ ಜೊತೆ ತಾಯಂದಿರ ಫೋಟೋ ಸ್ಪರ್ಧೆ “ಅಮ್ಮ ವಿದ್ ಕಂದಮ್ಮ-ಸೀಸನ್ 3” ಅನ್ನು ಏರ್ಪಡಿಸಿದ್ದು, ಇದಕ್ಕೆ ಓದುಗರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದ್ದು, ನೂರಾರು ಫೋಟೋಗಳು ಬಂದಿದ್ದವು. ಇದರಲ್ಲಿ ಅತ್ಯುತ್ತಮ ಗುಣಮಟ್ಟದ 25 ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದು, ಅತಿ ಹೆಚ್ಚು ಲೈಕ್ ಪಡೆದ ಮೂರು ಫೋಟೋಗಳಿಗೆ ಬಹುಮಾನ ದೊರೆತಿದೆ. ಅತಿಹೆಚ್ಚು ಲೈಕ್ ಪಡೆದ […]
ನ್ಯೂಸ್ ಪ್ಲಸ್ ಕನ್ನಡ ಟಿ.ವಿಯ ವೆಬ್ ಸೈಟ್- ಲೋಗೋ ಅನಾವರಣ ಕಾರ್ಯಕ್ರಮ

ಉಡುಪಿ: ನ್ಯೂಸ್ ಪ್ಲಸ್ ಕನ್ನಡ ಸುದ್ದಿವಾಹಿನಿಯ ವೆಬ್ ಸೈಟ್ ಮತ್ತು ಲೋಗೋ ಅನಾವರಣ ಕಾರ್ಯಕ್ರಮ ಇಂದು ಉಡುಪಿಯ ಕಿದಿಯೂರು ಹೊಟೇಲ್‌ನಲ್ಲಿ ನಡೆಯಿತು. ತುಳು ಚಿತ್ರರಂಗದ ನಟಿ ಮತ್ತು ರೂಪದರ್ಶಿ ಸ್ವಾತಿ ಬಂಗೇರ ನ್ಯೂಸ್ ಪ್ಲಸ್ ಕನ್ನಡದ ವೆಬ್ ಸೈಟ್ ಹಾಗೂ ಲೋಗೋ ಅನಾವರಣಗೊಳಿಸಿ ವಿಭಿನ್ನವಾದ ಲೋಗೋ ಹಾಗೂ ಯೋಚನೆಗಳುಳ್ಳ ತಂಡದಿಂದ ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ನ್ಯೂಸ್ ಪ್ಲಸ್ ಕನ್ನಡ ಟಿ ವಿ ವಾಹಿನಿ ಯಶಸ್ಸಿನತ್ತ ಸಾಗಲಿ.ಯುವ ಮನಸ್ಸಿನ ಕನಸುಗಳು ನನಸಾಗಲಿ ಎಂದು ಶುಭ ಹಾರೈಸಿದರು. ಉಡುಪಿ ಜಿಲ್ಲಾ […]
ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ- ಈ ವರ್ಷದ ಪ್ರಥಮ ಕಂಬಳಕ್ಕೆ ವೈಭವದ ಚಾಲನೆ

ಬಂಟ್ವಾಳ: ತಾಲೂಕಿನ ಎಲಿಯನಡುಗೋಡು ಮತ್ತು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿ ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ನಡೆಯುವ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ಮತ್ತು ಈ ವರ್ಷದ ಪ್ರಥಮ ಕಂಬಳಕ್ಕೆ ಭಾನುವಾರ ಬೆಳಿಗ್ಗೆ ಅದ್ದೂರಿ ಚಾಲನೆ ನೀಡಲಾಯಿತು. ಪೂಂಜ ಕ್ಷೇತ್ರದ ಆಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ ಅವರು ಕಂಬಳ ಉದ್ಘಾಟಿಸಿದರು. ಪೂಂಜ ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನ ಮತ್ತು ಇಲ್ಲಿನ ಮುಜಿಲ್ನಾಯಿ ದೈವಸ್ಥಾನ ಜೊತೆಗೆ ವಿಶೇಷ ಧಾರ್ಮಿಕ ನಂಟು ಹೊಂದಿರುವ […]
ಭಾರತೀಯ ಅಂಚೆ ಇಲಾಖೆಯಲ್ಲಿ ಕ್ರೀಡಾ ಕೋಟಾದಡಿ ಖಾಲಿ ಇದೆ ವಿವಿಧ ಹುದ್ದೆಗಳು:ಅರ್ಜಿ ಸಲ್ಲಿಸಿ

ಭಾರತೀಯ ಅಂಚೆ ಇಲಾಖೆಯಲ್ಲಿ(Indian Postal Department) ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಪೋಸ್ಟ್ ಜಾಬ್ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ದೆಹಲಿ ಅಂಚೆ ವೃತ್ತದಲ್ಲಿ(Delhi Post Circle) ಅಂಚೆ ಸಹಾಯಕ, ವಿಂಗಡಣೆ ಸಹಾಯಕ, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮತ್ತು ಪೋಸ್ಟ್‌ಮ್ಯಾನ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕ್ರೀಡಾ ಕೋಟಾದಲ್ಲಿ ಈ ಹುದ್ದೆಗಳನ್ನು ಬದಲಾಯಿಸಲಾಗುತ್ತಿದ್ದು, ಒಟ್ಟು 221 ಹುದ್ದೆಗಳಿವೆ. ಇವುಗಳು ಕ್ರೀಡಾ ಕೋಟಾದಲ್ಲಿ ಭರ್ತಿ ಮಾಡಲಾಗುತ್ತಿರುವ ಹುದ್ದೆಗಳಾಗಿರುವುದರಿಂದ ಅಧಿಸೂಚನೆಯಲ್ಲಿ ನೀಡಿರುವ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿದವರು ಮಾತ್ರ ಅರ್ಜಿ ಸಲ್ಲಿಸಬೇಕು. […]
ಅ. 3ರಂದು ಸಬ್-ಇನ್ಸ್ಪೆಕ್ಟರ್ ಲಿಖಿತ ಪರೀಕ್ಷೆ

ಉಡುಪಿ: ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಸಿವಿಲ್) ಪುರುಷ ಮತ್ತು ಮಹಿಳಾ (ಎನ್‌ಕೆಕೆ & ಕೆಕೆ) ಹಾಗೂ ಸೇವಾನಿರತರನ್ನೊಳಗೊಂಡ 545 ಹುದ್ದೆಗಳಿಗೆ ನಡೆಸಲಾದ ಇಟಿ/ಪಿಎಸ್‌ಟಿ ಪರೀಕ್ಷೆಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಕ್ಟೋಬರ್ 3 ರಂದು ಲಿಖಿತ ಪರೀಕ್ಷೆ ನಡೆಸಲಾಗುವುದು. ಪತ್ರಿಕೆ-1 ಮತ್ತು 2ನ್ನು ಕ್ರಮವಾಗಿ ಬೆ. 11 ರಿಂದ 12.30 ಮತ್ತು 3 ರಿಂದ 4.30 ರವರೆಗೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ದಾವಣಗೆರೆ ಹಾಗೂ ತುಮಕೂರು ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ಲಿಖಿತ ಪರೀಕ್ಷೆಯ ಕರೆ ಪತ್ರವನ್ನು ಅಧಿಕೃತ ವೆಬ್‌ಸೈಟ್ www.recruitment.ksp.gov.in ನಿಂದ […]