writeup: suvarchala b s
ಮೊಬೈಲ್ ನಲ್ಲಿ ಮಾತಾಡ್ತನೋ, ಸುಮ್ನೆ ಸೋಷಿಯಲ್ ಮೀಡಿಯಾಗಳಲ್ಲಿ ಕಾಲಹರಣ ಮಾಡ್ತಾನೋ, ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಲೋ ನಿದ್ದೆಗೆ ಜಾರುವವರು ಇಂದಿನ ದಿನಗಳಲ್ಲಿ ಬಹುಸಂಖ್ಯಾತರಾಗಿದ್ದಾರೆ. ಹೆಚ್ಚಿನವರಿಗೆ ಈ ಅಭ್ಯಾಸಗಳು ಆರೋಗ್ಯಕರವಲ್ಲ ಎಂದು ಗೊತ್ತಿದ್ದೂ ಅದರಿಂದ ಹೊರಬರಲಾರದೇ ಅದೇ ಜೀವನಶೈಲಿಗೆ ಒಗ್ಗಿಕೊಂಡಿದ್ದಾರೆ.
ಹಾಗಾದ್ರೆ ಮಲಗುವ ಮುನ್ನ ಯಾವ ರೀತಿಯ ಒಳ್ಳೆಯ ಹವ್ಯಾಸಗಳನ್ನು ನಾವು ರೂಢಿಸಿಕೊಳ್ಬೋದು ಅಂತ ಇಲ್ನೋಡಿ.
- ಮಲಗುವ ಕನಿಷ್ಟ ಒಂದು/ಅರ್ಧ ಗಂಟೆಗಳ ಮೊದಲು ಮೊಬೈಲ್, ಲ್ಯಾಪ್ ಟಾಪ್ ಮುಂತಾದ ಗ್ಯಾಜೆಟ್ ಗಳಿಂದ ದೂರವಿರುವುದು.
- ಅತ್ಯುತ್ತಮ ಹವ್ಯಾಸವೆಂದರೆ ನಮ್ಮಿಷ್ಟದ ಪುಸ್ತಕಗಳನ್ನು ಕನಿಷ್ಟ ಎರಡು ಪುಟ ಓದುವುದು.
- ರಾತ್ರಿಯ ಶುಭ್ರಾಕಾಶವನ್ನು ನೋಡುತ್ತಾ, ಚಂದ್ರ, ನಕ್ಷತ್ರಗಳ ಚೆಲುವನ್ನು ಆಸ್ವಾದಿಸುತ್ತಾ ಮೈಮರೆಯಬಹುದು.
- ರಾತ್ರಿಯ ತಣ್ಣಗಿನ ವಾತಾವರಣದಲ್ಲೊಂದಷ್ಟು ಹೊತ್ತು ವಾಕಿಂಗ್ ಮಾಡ್ಬೋದು.
- ನಿಮ್ಮ ಮನೆಯವರೊಂದಿಗೆ, ಮಕ್ಕಳೊಂದಿಗೆ ಮಾತಾಡುತ್ತಾ, ಹರಟೆ ಹೊಡೆಯುತ್ತಾ ಅಂದಿನ ದಿನಚರಿಯನ್ನು ಎಲ್ಲರೊಂದಿಗೆ ಚರ್ಚಿಸಿ ನೆಮ್ಮದಿಯ ನಿದ್ರೆ ಮಾಡಬಹುದು.
- ಮೊಬೈಲನ್ನು ಆದಷ್ಟು ದೂರವಿಟ್ಡು ಸಂಗೀತ ಕೇಳಬಹುದು
- ನಿಮ್ಮ ಇನ್ನಿತರ ಯಾವುದೇ ಹವ್ಯಾಸಗಳಿದ್ದರೂ ಅದಕ್ಕೆ ಟೈಮ್ ಕೊಡ್ಬೋದು
ಒಟ್ಟಿನಲ್ಲಿ ಮಲಗುವ ಒಂದು/ಅರ್ಧ ಗಂಟೆ ಮೊದಲು ಮೊಬೈಲ್ ನಂತಹಾ ಗ್ಯಾಜೆಟ್ ಗಳಿಂದ ದೂರವಿದ್ದು ನೋಡಿ ಖಂಡಿತ್ತಾ ಒಳ್ಳೆಯ ನಿದ್ರೆ ಬರುತ್ತದೆ, ಆರೋಗ್ಯವೂ ಉತ್ತಮವಾಗಿರುತ್ತದೆ. ನಿಮ್ಮ ಕಣ್ಣುಗಳಿಗೂ ರಕ್ಷಣೆ ದೊರೆಯುತ್ತದೆ ಅಲ್ಲದೇ ಮಧ್ಯೆ ಮಧ್ಯೆ ನಿದ್ದೆಯಲ್ಲಿ ಎಚ್ಚರವಾಗುವ ಸಮಸ್ಯೆಯೂ ಇರದೇ ನೆಮ್ಮದಿಯ ನಿದ್ರೆ ಮಾಡಬಹುದು.