ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಟೆಸ್ಲಾ ಇವಿ ಕಾರು :ಭಾರತದಲ್ಲಿ ಟೆಸ್ಲಾ ಕಂಪೆನಿಯ ನೇಮಕಾತಿ ಶುರು

ನವದೆಹಲಿ: ಅಮೇರಿಕಾದ  ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಅತ್ಯಂತ ದೈತ್ಯ ಕಂಪೆನಿಯಾಗಿರುವ ಟೆಸ್ಲಾ ಕಂಪೆನಿ ಸದ್ಯದಲ್ಲೇ  ಭಾರತದ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಡಲು ಭರ್ಜರಿ ತಯಾರಿ ನಡೆಸಿದ್ದು ಭಾರತದ ರಸ್ತೆಗಳಲ್ಲಿ ತನ್ನ ಇವಿ ಕಾರುಗಳನ್ನು ತರಲು ಉತ್ಸುಕಗೊಂಡಿದೆ. ಅದಕ್ಕೋಸ್ಕರ ಈಗಾಗಲೇ ಭಾರತದಲ್ಲಿ ನೇಮಿಕಾತಿಯನ್ನು ಕಂಪೆನಿ ಚುರುಕುಗೊಳಿಸಿದ್ದು  ಲಿಂಕ್ಡ್‌ಇನ್ ಮತ್ತು ಟೆಸ್ಲಾದ ವೆಬ್‌ಸೈಟ್‌ನಲ್ಲಿನ ಉದ್ಯೋಗ ಜಾಹೀರಾತು ಪ್ರಕಾರ, ಕಂಪನಿಯು ಭಾರತದಲ್ಲಿ ಕನಿಷ್ಠ 13 ಬಗೆಯ ವಿವಿಧ ಉದ್ಯೋಗಾವಕಾಶಗಳನ್ನು ಪೋಸ್ಟ್ ಮಾಡಿದೆ. ಸಿಇಒ ಎಲೋನ್ ಮಸ್ಕ್  ಭಾರತಕ್ಕೆ ಟೆಸ್ಲಾ ಕಂಪೆನಿಯ ಎಂಟ್ರಿ ಕುರಿತು […]

ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಯನ್ನು ವಾಪಾಸ್ ಕಳುಹಿಸಿದ ರಾಜ್ಯಪಾಲರು!

ಬೆಂಗಳೂರು: ರಾಜ್ಯದಲ್ಲ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಮೂಗುದಾರ ಹಾಕಲು ರಾಜ್ಯ ಸರ್ಕಾರ ಹೊರಟಿತ್ತು. ಆದರೆ, ಇದೀಗ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಸುಗ್ರೀವಾಜ್ಞೆಯಲ್ಲಿ ಸಾಲ ಪಡೆದವರ ರಕ್ಷಣೆಗೆ ಮಾತ್ರವೇ ಗಮನ ಹರಿಸಲಾಗಿದೆ. ಸಹಜ ನ್ಯಾಯದ ಅಡಿಯಲ್ಲಿ ಸಾಲ‌ ಕೊಟ್ಟವರಿಗೆ ರಕ್ಷಣೆ ಕಾಣಿಸುತ್ತಿಲ್ಲ. ಸುದೀರ್ಘ ಅವಧಿಯಲ್ಲಿ ಇದು ಮಾರಕವಾಗಲಿದೆ. ಮೈಕ್ರೋ ಫೈನಾನ್ಸ್ 3 ಲಕ್ಷಕ್ಕಿಂತ ಜಾಸ್ತಿ ಸಾಲ ಕೊಡುವುದಿಲ್ಲ. ನೀವು ಐದು ಲಕ್ಷ ದಂಡ‌ ಹೇಗೆ ಹಾಕುತ್ತೀರಾ ಎಂದು ರಾಜ್ಯಪಾಲರು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ಇದರ ಜೊತೆಗೆ 10 ವರ್ಷಗಳ ಶಿಕ್ಷೆ ಮತ್ತು […]

ಶೃಂಗೇರಿ ಕೃಷಿ ಇಲಾಖೆಯಲ್ಲಿದೆ ಉದ್ಯೋಗಾವಕಾಶ: ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ

ಶೃಂಗೇರಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಶೃಂಗೇರಿ ತಾಲ್ಲೂಕಿನಲ್ಲಿ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ತಾತ್ಕಾಲಿಕ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 10 ಕೊನೆಯ ದಿನವಾಗಿರುತ್ತದೆ. ಆಸಕ್ತರು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ ಇರಬೇಕು. ಈ ಎಲ್ಲಾ ಕ್ವಾಲಿಫಿಕೇಶನ್‌ಗಳು ಇದ್ದ ಅಭ್ಯರ್ಥಿಗಳು ತಡಮಾಡದೇ ಅಪ್ಲೈ ಮಾಡಿ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಆತ್ಮ ವಿಭಾಗದ […]

ನಿಮ್ಮ ಮೊಬೈಲ್ ನೆಟ್ ವರ್ಕ್ ಸಿಗದಿದ್ರೂ ಇನ್ಮುಂದೆ ಕರೆ ಮಾಡಬಹುದಂತೆ : ದೂರ ಸಂಪರ್ಕ ಇಲಾಖೆಯ  ಹೊಸ ಹೆಜ್ಜೆ:

ಕೇಂದ್ರ ಸರಕಾರದ ದೂರ ಸಂಪರ್ಕ ಇಲಾಖೆ ಹೊಸ ಸೌಲಭ್ಯವೊಂದನ್ನು ಜಾರಿಗೆ ತರಲಿದೆ. ಈ ಸೌಲಭ್ಯದಲ್ಲಿ ನೀವು ನೆಟ್ ವರ್ಕ್ ಇಲ್ಲದಿದ್ದರೂ ಕರೆ ಮಾಡುವ ಅವಕಾಶ ಪಡೆದುಕೊಳ್ಳುತ್ತೀರಿ. ಹೌದು  ದೇಶದಲ್ಲಿ  ಇಂಟ್ರಾ  ಸರ್ಕಲ್ ರೋಮಿಂಗ್ (ಐಸಿಆರ್)ಸೌಲಭ್ಯವನ್ನು  ದೂರ ಸಂಪರ್ಕ ಇಲಾಖೆ ಪ್ರಾರಂಭಿಸಿದೆ. ಈ ಸೌಲಭ್ಯದ ಅಡಿಯಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ಈಗ ಕರೆಗಳನ್ನು ಮಾಡಲು 4G ಮೂಲಸೌಕರ್ಯವನ್ನು ತಮ್ಮ ನಡುವೆ ಹಂಚಿಕೊಳ್ಳಬೇಕಾಗುತ್ತದೆ. ಆಗ ನೀವು ಯಾವುದೇ ಕಂಪೆನಿಯ ಸಿಮ್ ಕಾರ್ಡ್ ಇದ್ದರೂ ನಿಮ್ಮ ಸ್ಥಳದಲ್ಲಿ ಲಭ್ಯವಿರುವ ಇತರ ಯಾವುದೇ […]

ನವಿರಾದ ಸಂಸಾರದ ಕತೆ ಹೇಳಲು ಹೊರಟ “ಟಾಮ್ and ಜೆರ್ರಿ ಸಂಸಾರ”: ರಿಲೀಸಾಯ್ತು ಚೆಂದದ ಟ್ರೈಲರ್

ಸಂಸಾರದ ಕತೆಯನ್ನು ಒಂದಷ್ಟು ಪ್ರೀತಿ, ಹಾಸ್ಯದ ಕಚಕುಳಿಯೊಂದಿಗೆ ನೀಡುವ ಮತ್ತು ಈ ಹೊಸ ತಲೆಮಾರಿನ ತಲ್ಲಣ ತವಕಗಳನ್ನು ನವಿರಾದ  ಭಾವದೊಂದಿಗೆ ನಿರೂಪಿಸಲಿರುವ “ಟಾಮ್ & ಜೆರಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಒಂದಷ್ಟು ವಿಭಿನ್ನತೆಯಿಂದ ಗಮನ ಸೆಳೆಯುತ್ತಿದೆ, ಸದ್ದು ಮಾಡುತ್ತಿದೆ. ಗಂಡ-ಹೆಂಡತಿಯ ದಾಂಪತ್ಯ ಜೀವನದ ಘಟನೆಗಳನ್ನು ಪೋಣಿಸುತ್ತ, ಹಾಸ್ಯದ ಕಚಕುಳಿ ನೀಡುತ್ತ ಮುಂದೇನಾಗಲಿದೆ, ಬರೀ ಇಷ್ಟನ್ನೇ ಅಲ್ಲ ಇನ್ನೂ ಏನನ್ನೋ ಹೇಳಲು ಸಿನಿಮಾ ತಂಡ ಪ್ರಯತ್ನಿಸಿದಂತೆ ಈ ಟ್ರೈಲರ್ ಚೂರು ಹಿಂಟ್ ಬಿಟ್ಟುಕೊಟ್ಟಿದೆ. ಆದ್ರೆ ಕುತೂಹಲ ಬಿಟ್ಟು […]