ನಿಮ್ಮದೇ ಸಂಭ್ರಮ, ನಿಮ್ಮದೇ ಉತ್ಸವ ಹರ್ಷೋತ್ಸವದ ಸಂಭ್ರಮಾಚರಣೆ ನಾಳೆಯಿಂದ ಆರಂಭ

ಉಡುಪಿ: ಪ್ರತಿವರ್ಷವೂ ಗ್ರಾಹಕರ ಅಪಾರ ಬೆಂಬಲದಿಂದ ಹರ್ಷೋತ್ಸವವು ಯಶಸ್ವಿಯಾಗಿ ನಡೆಯುತ್ತಿದ್ದು, ವರ್ಷದಿಂದ ವರ್ಷಕ್ಕೆ ಭಾರೀ ಜನಮನ್ನಣೆ ಗಳಿಸುತ್ತಾ, ಎಲ್ಲರ ನೆಚ್ಚಿನ “ಶಾಪಿಂಗ್ ಹಬ್ಬ”ವಾಗಿ ಸಂಭ್ರಮದಿಂದ ಆಚರಿಸಲ್ಪಡುತ್ತಿದೆ. ಈ ಬಾರಿಯೂ ಇನ್ನಷ್ಟು ವೈಶಿಷ್ಟö್ಳೊಂದಿಗೆ ಏಳು ದಿನಗಳು ನಡೆಯಲಿರುವ ಹೊಸ ರೂಪದ ಹರ್ಷೋತ್ಸವವು ನಿಮ್ಮ ಶಾಪಿಂಗ್‌ಗೆ ಒಂದು ವಿನೂತನ ಮೆರುಗನ್ನು ನೀಡಲಿದೆ. ಹರ್ಷದ ವಾರ್ಷಿಕಾಚರಣೆ – “ಹರ್ಷೋತ್ಸವ” ನಾಳೆ ಅಂದರೆ ಮಾರ್ಚ್ 06 ರಿಂದ 12ರವರೆಗೆ ಉಡುಪಿಯ ಮೂರು, ಮಂಗಳೂರಿನ ಎರಡು, ಬ್ರಹ್ಮಾವರ, ಸುರತ್ಕಲ್, ಪುತ್ತೂರು, ಕುಂದಾಪುರ ಹಾಗೂ ಶಿವಮೊಗ್ಗ […]

ಉಡುಪಿ: ಮಾ.10 ರಿಂದ ರಾಷ್ಟ್ರೀಯ ಯುವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್

ಭಾರತದ ಅಥ್ಲೆಟಿಕ್ ಫೆಡರೇಷನ್, ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ಹಾಗೂ ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ ಅಸೋಸಿಯೇಷನ್‌ನ ಸಂಯುಕ್ತ ಆಶ್ರಯದಲ್ಲಿ 18ನೇ ರಾಷ್ಟ್ರೀಯ ಯುವ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಮಾ.10ರಿಂದ 12ರವರೆಗೆ ಉಡುಪಿ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕ್ರೀಡಾಕೂಟದ ಸಂಘಟನಾ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಿಟ್ಟೆಯ ನಿಟ್ಟೆ ವಿದ್ಯಾಸಂಸ್ಥೆಯ ಪ್ರಾಯೋಜಕತ್ವದಲ್ಲಿ ಈ ಪ್ರತಿಷ್ಠಿತ ಕ್ರೀಡಾಕೂಟ ಮೂರು ದಿನಗಳ ಕಾಲ ನಡೆಯಲಿದೆ ಎಂದರು. ಈ ಕ್ರೀಡಾಕೂಟದಲ್ಲಿ ದೇಶದ […]

ಉಡುಪಿ ಎಕ್ಸ್ಪ್ರೆಸ್ ಅಮ್ಮ ವಿತ್ ಕಂದಮ್ಮ ಸೀಸನ್-3: ಬಹುಮಾನ ಗೆದ್ದ ಅಮ್ಮ-ಮಕ್ಕಳಿವರು!!

ಉಡುಪಿ: ವಸ್ತುನಿಷ್ಠ ವರದಿಗಾರಿಕೆಗೆ ಹೆಸರುವಾಸಿಯಾದ ನಿಮ್ಮ ಉಡುಪಿ ಎಕ್ಸ್ಪ್ರೆಸ್ ಕಳೆದ ಬಾರಿಯಂತೆಯೆ ಈ ಬಾರಿಯೂ ಮಕ್ಕಳ ದಿನಾಚರಣೆ ಪ್ರಯುಕ್ತ ಮುದ್ದು ಕಂದಮ್ಮಗಳ ಜೊತೆ ತಾಯಂದಿರ ಫೋಟೋ ಸ್ಪರ್ಧೆ “ಅಮ್ಮ ವಿದ್ ಕಂದಮ್ಮ-ಸೀಸನ್ 3” ಅನ್ನು ಏರ್ಪಡಿಸಿದ್ದು, ಇದಕ್ಕೆ ಓದುಗರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದ್ದು, ನೂರಾರು ಫೋಟೋಗಳು ಬಂದಿದ್ದವು. ಇದರಲ್ಲಿ ಅತ್ಯುತ್ತಮ ಗುಣಮಟ್ಟದ 25 ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದು, ಅತಿ ಹೆಚ್ಚು ಲೈಕ್ ಪಡೆದ ಮೂರು ಫೋಟೋಗಳಿಗೆ ಬಹುಮಾನ ದೊರೆತಿದೆ. ಅತಿಹೆಚ್ಚು ಲೈಕ್ ಪಡೆದ […]

ನ್ಯೂಸ್ ಪ್ಲಸ್ ಕನ್ನಡ ಟಿ.ವಿಯ ವೆಬ್ ಸೈಟ್- ಲೋಗೋ ಅನಾವರಣ ಕಾರ್ಯಕ್ರಮ

ಉಡುಪಿ: ನ್ಯೂಸ್ ಪ್ಲಸ್ ಕನ್ನಡ ಸುದ್ದಿವಾಹಿನಿಯ ವೆಬ್ ಸೈಟ್ ಮತ್ತು ಲೋಗೋ ಅನಾವರಣ ಕಾರ್ಯಕ್ರಮ ಇಂದು ಉಡುಪಿಯ ಕಿದಿಯೂರು ಹೊಟೇಲ್‌ನಲ್ಲಿ ನಡೆಯಿತು. ತುಳು ಚಿತ್ರರಂಗದ ನಟಿ ಮತ್ತು ರೂಪದರ್ಶಿ ಸ್ವಾತಿ ಬಂಗೇರ ನ್ಯೂಸ್ ಪ್ಲಸ್ ಕನ್ನಡದ ವೆಬ್ ಸೈಟ್ ಹಾಗೂ ಲೋಗೋ ಅನಾವರಣಗೊಳಿಸಿ ವಿಭಿನ್ನವಾದ ಲೋಗೋ ಹಾಗೂ ಯೋಚನೆಗಳುಳ್ಳ ತಂಡದಿಂದ ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ನ್ಯೂಸ್ ಪ್ಲಸ್ ಕನ್ನಡ ಟಿ ವಿ ವಾಹಿನಿ ಯಶಸ್ಸಿನತ್ತ ಸಾಗಲಿ.ಯುವ ಮನಸ್ಸಿನ ಕನಸುಗಳು ನನಸಾಗಲಿ ಎಂದು ಶುಭ ಹಾರೈಸಿದರು. ಉಡುಪಿ ಜಿಲ್ಲಾ […]

ಹೊಕ್ಕಾಡಿಗೋಳಿ ವೀರ-ವಿಕ್ರಮ  ಜೋಡುಕರೆ ಬಯಲು ಕಂಬಳ- ಈ ವರ್ಷದ ಪ್ರಥಮ ಕಂಬಳಕ್ಕೆ ವೈಭವದ ಚಾಲನೆ

ಬಂಟ್ವಾಳ: ತಾಲೂಕಿನ ಎಲಿಯನಡುಗೋಡು ಮತ್ತು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿ  ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ  ನಡೆಯುವ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ-ವಿಕ್ರಮ  ಜೋಡುಕರೆ ಬಯಲು ಕಂಬಳ ಮತ್ತು ಈ ವರ್ಷದ ಪ್ರಥಮ ಕಂಬಳಕ್ಕೆ ಭಾನುವಾರ ಬೆಳಿಗ್ಗೆ ಅದ್ದೂರಿ ಚಾಲನೆ ನೀಡಲಾಯಿತು. ಪೂಂಜ ಕ್ಷೇತ್ರದ ಆಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ ಅವರು ಕಂಬಳ  ಉದ್ಘಾಟಿಸಿದರು. ಪೂಂಜ ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನ ಮತ್ತು ಇಲ್ಲಿನ ಮುಜಿಲ್ನಾಯಿ ದೈವಸ್ಥಾನ ಜೊತೆಗೆ ವಿಶೇಷ ಧಾರ್ಮಿಕ ನಂಟು ಹೊಂದಿರುವ   […]