ಅಪಾಯಕಾರಿಯಾಗಿದೆ ಬೆಂಗಳೂರಿನ ಏರ್ ಕ್ವಾಲಿಟಿ; ಇಲ್ಲಿದೆ ಉಡುಪಿ, ಮಂಗಳೂರು ವಾಯು ಗುಣಮಟ್ಟದ ಡೀಟೈಲ್ಸ್

ಬೆಂಗಳೂರು, ಏಪ್ರಿಲ್ 06: ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ವಾಯು ಗುಣಮಟ್ಟದಲ್ಲಿ ಏರಿಳಿತ ಕಂಡು ಬರುತ್ತಿದೆ. ಇಂದಿನ ಸ್ಥಿತಿಯಲ್ಲಿ ಬೆಳಗಾವಿ ಬೆಂಗಳೂರು ಸೇರಿದಂತೆ ಕೆಲವು ಕಡೆಗಳಲ್ಲಿ ಏರ್ ಕ್ವಾಲಿಟಿಯಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡುಬಂದಿದೆ. ಆದರೆ, ಬೆಂಗಳೂರಿನ ವಾಯು ಗುಣಮಟ್ಟ ಇನ್ನೂ ಅಪಾಯಕಾರಿ ಮಟ್ಟದಲ್ಲಿಯೇ ಉಳಿದಿದ್ದು, ಇದರಿಂದ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಕೆಲ ದಿನಗಳ ಹಿಂದೆ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ AQI ಇಂದು […]

ಕಾರ್ಕಳ: ಸಂಚಾರ ಮಾರ್ಗಗಳನ್ನು ಬೇಕಾಬಿಟ್ಟಿ ಬದಲಿಸುವ ಖಾಸಗಿ ಬಸ್ ಗಳು, ಗೊಂದಲದಲ್ಲೇ ಕಾದು ಹೈರಾಣಾಗುವ ಪ್ರಯಾಣಿಕರು,ನಿದ್ರೆಯಲ್ಲಿದೆ ವ್ಯವಸ್ಥೆ

ಕಾರ್ಕಳ: ಕಾರ್ಕಳದಿಂದ ಉಡುಪಿಗೆ ಮತ್ತು ಹೆಬ್ರಿ ಶಿವಮೊಗ್ಗದತ್ತ ಸಂಚರಿಸುವ ಕೆಲವೊಂದು ಎಕ್ಸ್ ಪ್ರೆಸ್ ಬಸ್ ಗಳು ಬಸ್ಸು ನಿಲ್ದಾಣದಿಂದ ಮಾರ್ಕೆಟು ರಸ್ತೆಯಾಗಿ ಉಡುಪಿಗೆ ಸಂಚರಿಸುವ ಬದಲು ನಗರದ ಮುಖ್ಯ ರಸ್ತೆ ರಥಬೀದಿ ಮೂಲಕ ಸಂಚರಿಸಿ ಪ್ರತೀ ದಿನ ನಿಯಮವನ್ನು ಉಲ್ಲಂಘಿಸುತ್ತಿವೆ. ಉಡುಪಿ, ಹೆಬ್ರಿ ಮಾರ್ಗದಲ್ಲಿ ಸಂಚರಿಸುವ ಬಸ್ ಗಳು ಕಾರ್ಕಳ ಮಾರ್ಕೆಟ್ ರಸ್ತೆಯ ಮೂಲಕ ಸಂಚರಿಸಿ, ಉಡುಪಿ,ಹೆಬ್ರಿಯಿಂದ ಮರಳಿ ಬರುವಾಗ ಮುಖ್ಯ ರಸ್ತೆಯ ಮೂಲಕ ಬಸ್ಸು ನಿಲ್ದಾಣಕ್ಕೆ ಬರಬೇಕು. ಆದರೆ ಹೆಚ್ಚಿನ ಬಸ್ಸುಗಳು ಉಡುಪಿಗೆ ಹೋಗುವಾಗಲೂ, ಬರುವಾಗಲೂ […]

ಕಣ್ಣಿಗೆ ಸುಂದರ, ದೇಹಕ್ಕೆ ವಿಷ: ಬಣ್ಣ ಬಣ್ಣದ ಮಾವಿನ ಹಣ್ಣು ಕೊಳ್ಳುವಾಗ ಹೀಗೆ ಪರೀಕ್ಷಿಸಿ ಕೊಳ್ಳಬಹುದು

ದಟ್ಟ ಹಳದಿ, ಕೇಸರಿ, ಕೆಂಬಣ್ಣದ ಮಾವಿನ ಹಣ್ಣುಗಳನ್ನ ಸಾಲಾಗಿ ಚೆಂದವಾಗಿ ಜೋಡಿಸಿಟ್ಟಿದ್ದನ್ನ ನೋಡ್ತಾ ಇದ್ರೆ ಆಹಾ! ಯಾರ ಬಾಯಲ್ಲಿ ನೀರು ಬರಲ್ಲ ಹೇಳಿ. ಅದೂ ಈ ಬೇಸಿಗೆಯ ಬಿಸಿಲ ಧಗೆಯಲ್ಲಿ ಬೆಂದು ಮನೆಗೆ ಬರುವ ಹೊತ್ತಿಗೆ ಮಾವಿನ ಹಣ್ಣು ಜೊತೆಯಲ್ಲಿದ್ದರೆ ಹೊಟ್ಟೆ ತಂಪಾಗುತ್ತದೆಯೆಂದು ಮಾವಿನ ಹಣ್ಣನ್ನು ಖಂಡಿತಾ ಕೊಳ್ಳುವ ಮನಸ್ಸಾಗುತ್ತದೆ. ಆದರೆ, ಈಗ ಹೀಗೆ ಕಣ್ಣಿಗೆ ಕುಕ್ಕುವ ಮಾವಿನಹಣ್ಣನ್ನು ಕೊಳ್ಳುವಾಗ ಎಚ್ಚರ ವಹಿಸಲೇಬೇಕು. ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿವೆ ಮಾವಿನ ಹಣ್ಣುಗಳು  ಕಣ್ಣಿಗೆ ಹೊಳೆಯುವಂತಹಾ ಚೆಂದದ ಬಣ್ಣ ಬಣ್ಣದ […]

ಮದುವೆ ಆಗಿ ಒಂದು ತಿಂಗಳಿಗೇ “ರಶ್ಮಿಕಾ ಮಂದಣ್ಣ” ಸಿಹಿಸುದ್ದಿ? “ಈಗ ನಾವು ಮೂವರು” ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌

ನಟಿ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್‌ನಲ್ಲಿ “Now it’s us three” “ಈಗ ನಾವು ಮೂವರು” ಎಂಬ ಕ್ಯಾಪ್ಷನ್‌ನೊಂದಿಗೆ ಹಂಚಿಕೊಂಡಿರುವ ಗ್ರಾಫಿಕ್ ವಿಡಿಯೋ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. ವಿಜಯ್ ದೇವರಕೊಂಡ ಅವರೊಂದಿಗೆ ಫೆ. 26ರಂದು ಅದ್ಧೂರಿ ಮದುವೆಯ ನಂತರ ಹಂಚಿಕೊಂಡಿರುವ ಈ ಪೋಸ್ಟ್ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ವಿಡಿಯೋದಲ್ಲಿ ಸಾಂಕೆತಿಕ ದೃಶ್ಯಗಳಿದ್ದು, Terribly Tiny Tales ಅನ್ನು ಟ್ಯಾಗ್ ಮಾಡಿರುವುದು ಗಮನ ಸೆಳೆಯುತ್ತಿದೆ. ಇದರಿಂದಾಗಿ ಇದು ವೈಯಕ್ತಿಕ ಸುದ್ದಿಯೋ ಅಥವಾ ಪ್ರಚಾರದ ಭಾಗವೋ ಎಂಬುದು ಸ್ಪಷ್ಟವಾಗಿಲ್ಲ. ಅಧಿಕೃತ ದೃಢೀಕರಣಕ್ಕಾಗಿ […]

ತಂಗಳು ಅನ್ನ ಎಂದು  ಸಸಾರ ಮಾಡ್ತೀರಾ? : ತಂಗಳನ್ನ ಆರೋಗ್ಯಕ್ಕೆ ಎಷ್ಟೊಂದು ಶಕ್ತಿ ಕೊಡುತ್ತೆಂದು ನಿಮಗೆ ಗೊತ್ತಾ?

ತುಂಬಾ ಮಂದಿಗೆ ತಂಗಳು ಅನ್ನವೆಂದರೆ ತಾತ್ಸಾರ ಭಾವನೆ. ಕೆಲವರಿಗೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ಭಾವನೆ ಬೆಳೆದುಬಿಟ್ಟಿದೆ. ಹಾಗಾಗಿ ತಂಗಳು ಅನ್ನವನ್ನು ಬಿಸಾಕುವವರೇ ಜಾಸ್ತಿ. ಆದರೆ ನೆನಪಿರಲಿ ಇಂತಹ ತಂಗಳನ್ನದಲ್ಲೂ ಇದೆ ಆರೋಗ್ಯಕ್ಕೆ ಪೂರಕವಾಗುವ ಅಂಶಗಳು! ಹೌದು. ತಂಗಳನ್ನ ಜೀರ್ಣಕ್ರಿಯೆಯ ಆರೋಗ್ಯಕ್ಕೆ  ಪ್ರಯೋಜನಕಾರಿಯಾಗಿರುವ ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ. ಅಲ್ಲದೇ ಇದರಿಂದ ಹಲವಾರು ಪ್ರಯೋಜನಗಳಿವೆ. ಹೀಗಾಗಿ ಇನ್ಮುಂದೆ ತಂಗಳು ಅನ್ನವನ್ನು ಎಸೆಯುವ ಮುನ್ನ ಇದರಿಂದ ಆಗುವ ಉಪಯೋಗಗಳೇನು ಎಂಬುದನ್ನು ತಿಳಿದುಕೊಳ್ಳಿ.