ವಿಧವೆ ಸೊಸೆಗೆ‌ ಮದುವೆ ಮಾಡಿಸಿದ ಅತ್ತೆ..! 

ಮಂಗಳೂರು: ಅತ್ತೆಯೇ ವಿಧವೆ ಸೊಸೆಗೆ ಮದುವೆ ಮಾಡಿಸಿದ ಅಪರೂಪದ, ಮಾನವೀಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದೆ. ಬೆಳ್ಳಾರೆಯ ಕೋಟೆ ದೇವಸ್ಥಾನದಲ್ಲಿ ಸೋಮವಾರ ಈ ಅಪರೂಪದ ಮದುವೆ ಸಮಾರಂಭ ನಡೆದಿದೆ. ಸುಳ್ಯ ತಾಲೂಕಿನ ಕಳಂಜ ಗ್ರಾಮದ ಗೋಪಾಲಕಜೆ ನಿವಾಸಿ ಶಾಂತಪ್ಪ ಗೌಡರ ಪುತ್ರಿ ಸುಶೀಲಾ ಎಂಬುವವರನ್ನು ಅದೇ ಗ್ರಾಮದ ದಿವಂಗತ ಪದ್ಮಯ್ಯರ ಪುತ್ರ ಮಾಧವ ಎಂಬುವವರಿಗೆ ವಿವಾಹ ಮಾಡಿ‌ ಕೊಡಲಾಗಿತ್ತು. ಆದರೆ ವಿವಾಹವಾದ ವರ್ಷದೊಳಗೆ ಅಪಘಾತದಿಂದ ಮಾಧವ ಇಹಲೋಕ ತ್ಯಜಿಸಿದ್ದರು. ಅದಾಗಲೇ ಗರ್ಭಿಣಿಯಾಗಿದ್ದ […]

ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಅನುದಾನ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ

ಉಡುಪಿ: ಆದಿವಾಸಿ ಜನಾಂಗದವರ ಅಭಿವೃದ್ಧಿಗಾಗಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 2.25 ಕೋಟಿ ಅನುದಾನವನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿ ಕೊರಗರ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕೊರಗ ಸಮುದಾಯದವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ‌ ಆರಂಭಿಸಿದರು. ಕೊರಗ ಸಮುದಾಯದ ಸಂಘಟನೆ ತಯಾರಿಸಿದ ಜನ ಯೋಜನೆಯನ್ನು ಕೈಬಿಟ್ಟು, ಅಧಿಕಾರಿಗಳು ತಯಾರಿಸಿದ ಕ್ರಿಯಾ ಯೋಜನೆಯನ್ನು ಜಾರಿಗೊಳಿಸಲು ನಿಗಮ ಹೊರಟಿದೆ. ಇದರಿಂದ ಆದಿವಾಸಿ ಜನಾಂಗದವರಿಗೆ ಸರಿಯಾದ ಅನುದಾನ ಹಂಚಿಕೆ ಆಗಲ್ಲ. ಅಲ್ಲದೆ, […]

ಮಣಿಪಾಲ: ರಾಜಾಪುರ ಸಾರಸ್ವತ ಮಹಿಳೆಯರಿಂದ ‘ಯವಾ ನೇಜಿ ಲಾವ್ಯ’

ಉಡುಪಿ: ಮಣಿಪಾಲದ ರಾಜಾಪುರ ಸಾರಸ್ವತ ಮಹಿಳಾ ವೇದಿಕೆಯ ವತಿಯಿಂದ ಕಾರ್ಕಳ ತಾಲೂಕಿನ ಹೆರ್ಮುಂಡೆ ಗ್ರಾಮದ ಕಲಾಯಿಗುತ್ತು ಎಂಬಲ್ಲಿ ಯವಾ ನೇಜಿ ಲಾವ್ಯ (ಬನ್ನಿ ನೇಜಿ ನಡೋಣ)‌ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವೇದಿಕೆಯ ಅಧ್ಯಕ್ಷೆ ಮೋಹಿನಿ ಎನ್.ನಾಯಕ್ ಅವರ ನೇತೃತ್ವದಲ್ಲಿ ವೇದಿಕೆಯ ಸದಸ್ಯರೆಲ್ಲರೂ ಸೇರಿ ಸುರಿಯುವ ಮಳೆಯಲ್ಲಿಯೇ ಪಾಡ್ದನ ಹಾಡಿ, ಗದ್ದೆಯಲ್ಲಿ ನೇಜಿ (ಬತ್ತದ ಸಸಿ)ಗಳನ್ನು ನೆಟ್ಟು ತಮ್ಮ ಹಿರಿಯರ ಶ್ರಮ ಸಂಸ್ಕೃತಿಯನ್ನು ಗೌರವಿಸಿದರು. ಇದೇ ಸಂದರ್ಭದಲ್ಲಿ ಗದ್ದೆಯಲ್ಲಿ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಮಧ್ಯಾಹ್ನ ಕಲಾಯಿಗುತ್ತಿನ ಮನೆಯವರಿಂದ ಗ್ರಾಮೀಣ […]

ಗಾಂಜ ಹೊಂದಿದ್ದ ಓರ್ವನ ಬಂಧನ; 1 ಕೆ.ಜಿ. ಗಾಂಜ ವಶ

ಬಂಟ್ವಾಳ: ಗಾಂಜಾ ಹೊಂದಿದ್ದ ಓರ್ವ ವ್ಯಕ್ತಿಯನ್ನು ಶನಿವಾರ ಬಂಟ್ವಾಳದಲ್ಲಿ  ಬಂಧಿಸಲಾಗಿದೆ.. ಅಮೀರ್ ಹುಸೈನ್ (45) ಬಂಧಿತ‌ ಆರೋಪಿ. ಈತನನ್ನು ಬಂಟ್ವಾಳದ ತುಂಬೆ ಎಂಬಲ್ಲಿ ಬಂಧಿಸಲಾಗಿದ್ದು, 39,000 ಮೌಲ್ಯದ 1 ಕೆಜಿ 330 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈತ ಮಂಗಳೂರಿನ ಮೂಡುಶೆಡ್ಡೆಯ ಓರ್ವ ವ್ಯಕ್ತಿಯಿಂದ ಗಾಂಜಾ ಪಡೆದಿದ್ದ ಎಂದು‌ ತಿಳಿದು ಬಂದಿದೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಲೀನ್ ಉಡುಪಿ ಪ್ರಾಜೆಕ್ಟ್ ವತಿಯಿಂದ 8ನೇ  ಪರಿಸರ ಸ್ನೇಹಿ ಅಭಿಯಾನ

ಉಡುಪಿ: ಕ್ಲೀನ್ ಉಡುಪಿ ಪ್ರಾಜೆಕ್ಟ್ ವತಿಯಿಂದ 8ನೇ ವಾರದ ಪರಿಸರ ಸ್ನೇಹಿ ಅಭಿಯಾನವು ಶನಿವಾರ ಸಂಜೆ ಅಜ್ಜರಕಾಡು ಉದ್ಯಾನವನದಲ್ಲಿ ನಡೆಯಿತು. ವೆಸ್ಟ್‌ ಇಂಡೀಸ್‌ನಲ್ಲಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾಗಿರುವ ಡಾ. ಶಿವಾನಂದ ನಾಯಕ್ ಅವರು ಚಾಲನೆ ನೀಡಿ ಮಾತನಾಡಿ, ಪರಿಸರವನ್ನು ಸಂರಕ್ಷಿಸಲು ಪ್ರತಿಯೊಬ್ಬರೂ ಕ್ರಿಯಾಶೀಲ ಪ್ರಯತ್ನವನ್ನು ಮಾಡಿದರೆ ಜಾಗತಿಕ ತಾಪಮಾನ ಏರಿಕೆ ಪ್ರಕ್ರಿಯೆಗೆ ಕಡಿವಾಣ ಹಾಕಬಹುದು. ಗಿಡಗಳನ್ನು ನೆಡುವ ಬಗ್ಗೆ ಮಾತ್ರ ಗಮನಹರಿಸದೇ, ಅದನ್ನು ಪೋಷಿಸಿ ಹೆಮ್ಮರವಾಗಿ ಬೆಳೆಯಲು ಪೂರಕ ವಾತಾವರಣ ಸೃಷ್ಟಿಸಬೇಕು ಎಂದರು. ನಗರಸಭಾ ಸದಸ್ಯೆ ರಶ್ಮಿ […]