ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕ ಶಿಕ್ಷಕೇತರ ಸಂಘದ ಪದಗ್ರಹಣ

ಬೆಂಗಳೂರು: ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕ ಶಿಕ್ಷಕೇತರ ಸಂಘದ ಪದಗ್ರಹಣ ಕಾರ್ಯಕ್ರಮ ಬೆಂಗಳೂರಿನ ಕೆ.ಎ.ಎಸ್ ಆಫೀಸರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಶನಿವಾರ ನೆರವೇರಿತು. ವಾರ್ತಾ ಮತ್ತು ಸಂಪರ್ಕ ಇಲಾಖೆಯ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ವಿಕಲಚೇತನ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ಎಚ್.ವಿ. ಗೋಪಾಲಪ್ಪ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಕಲಚೇತನರ ಸಬಲೀಕರಣ ಇಲಾಖೆಯ ನಿರ್ದೇಶಕ ಜಯವಿಭವ ಸ್ವಾಮಿ ಉಪಸ್ಥಿತರಿದ್ದರು. ನೂತನವಾಗಿ ರಾಜ್ಯ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಿತು. ಪ್ರಧಾನ ಕಾರ್ಯದರ್ಶಿ ಡಾ. […]
ಉಡುಪಿ: ಮಂಗಳೂರು ವಿವಿ ಅಂತರ್ ಕಾಲೇಜು ಬ್ಯಾಡ್ಮಿಂಟನ್ ಗೆ ಚಾಲನೆ

ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯ, ಅಜ್ಜರಕಾಡು ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಬ್ಯಾಂಕ್ ಆಫ್ ಬರೋಡಾ, ಉಡುಪಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಗಳ ಸಹಯೋಗದೊಂದಿಗೆ ಅಜ್ಜರಕಾಡು ಒಳಂಗಾಣ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಎರಡು ದಿನಗಳ ಮಂಗಳೂರು ವಿವಿ ಅಂತರ ಕಾಲೇಜು ಮಟ್ಟದ ಪುರುಷ ಹಾಗೂ ಮಹಿಳೆಯರ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಬುಧವಾರ ಉದ್ಘಾಟನೆಗೊಂಡಿತು. ಬ್ಯಾಂಕ್ ಆಫ್ ಬರೋಡಾದ ಉಡುಪಿ ಪ್ರಾದೇಶಿಕ ಪ್ರಬಂಧಕ ರವೀಂದ್ರ ರೈ ಚಾಲನೆ ನೀಡಿ ಮಾತನಾಡಿ, […]
ಸಮರ್ಪಣಾಭಾವದಿಂದ ನೀಡಿದ ಪ್ರಶಸ್ತಿಗೆ ವಿಶೇಷ ಮಹತ್ವವಿದೆ: ವಿದ್ಯಾಸಾಗರ ಸ್ವಾಮೀಜಿ

ಉಡುಪಿ: ಶಿಫಾರಸ್ಸು ಅಥವಾ ಒತ್ತಡ ತಂದು ಪಡೆಯುವ ಪ್ರಶಸ್ತಿಗಿಂತಲೂ ಸಮರ್ಪಣಾ ಭಾವದಿಂದ ನೀಡುವ ಪ್ರಶಸ್ತಿಗೆ ವಿಶೇಷ ಮಹತ್ವವಿದೆ ಎಂದು ಕೃಷ್ಣಾಪುರ ಮಠದ ವಿದ್ಯಾಸಾಗರ ಸ್ವಾಮೀಜಿ ಹೇಳಿದರು. ಉಡುಪಿ ರಥಬೀದಿ ಶ್ರೀ ರಾಘವೇಂದ್ರ ಮಠದ ಮಂತ್ರಾಲಯ ಸಭಾಭಾವನದಲ್ಲಿ ನಡೆದ ರಾಜ್ಯಮಟ್ಟದ ‘ಉಪಾಧ್ಯಾಯ ಸಮ್ಮಾನ್’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಶಸ್ತಿ ಕೊಟ್ಟವರಿಗೂ ಪಡೆದವರಿಗೂ ಸಮಾಜದಲ್ಲಿ ನಿಜವಾದ ಗೌರವ ಸಿಗುತ್ತದೆ. ಆ ದೃಷ್ಟಿಯಿಂದ ನೋಡುವಾಗ ಉಪಾಧ್ಯಾಯ ಮೂಡುಬೆಳ್ಳೆ ಕಲಾ ಪ್ರತಿಷ್ಠಾನ ನೀಡುವ ಪ್ರಶಸ್ತಿ ನಿಜವಾಗಲೂ ಶ್ರೇಷ್ಠವಾಗಿದೆ ಎಂದರು. ರಾಜ್ಯ […]
ಉಡುಪಿ ಜಿಲ್ಲಾ ಮಲೆಕುಡಿಯ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸಮಿತಿಯ ಸಭೆ

ಉಡುಪಿ: ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ವತಿಯಿಂದ 73 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಘದ ಕೇಂದ್ರ ಕಚೇರಿ ಮಾಳ ಪೇರಡ್ಕ ವಠಾರದಲ್ಲಿ ಆಚರಿಸಲಾಯಿತು. ಜಿಲ್ಲಾಧ್ಯಕ್ಷ ಮಂಜಪ್ಪ ಗೌಡ ನೂರಾಳ್ ಬೆಟ್ಟು ಅವರು ಧ್ವಜಾರೋಹಣ ನೆರವೇರಿಸಿದರು. ರಾಜ್ಯ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಈದು ಅವರು ಮಾತನಾಡಿ, ದೇಶಕ್ಕಾಗಿ ಸ್ವಾತಂತ್ರ್ಯ ತಂದುಕೊಟ್ಟಂತಹ ಹೋರಾಟಗಾರರನ್ನು ಸ್ಮರಿಸಿ ಅವರ ಆದರ್ಶ ಪಾಲನೆ ಮಾಡುವುದರ ಜೊತೆಗೆ ದೇಶಕ್ಕಾಗಿ ತಮ್ಮ ಸಮಯ ಮೀಸಲಿಡಬೇಕು ಎಂದರು. ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ […]
ಸಮಾನತೆಯ ಸಂವಿಧಾನದ ಒಳಗೆ ಮನುವಾದಿ ಸಿದ್ದಾಂತ ತುರುಕಿಸಲಾಗಿದೆ: ನಾರಾಯಣ ಮಣೂರು

ಉಡುಪಿ: ಸ್ವಾತಂತ್ರ್ಯ ದೊರೆತ ದಿನದಿಂದ ಆಳುವ ವ್ಯವಸ್ಥೆ ಮನುಧರ್ಮ ಶಾಸನ, ಮನುವಾದಿ ಸಿದ್ದಾಂತವನ್ನು ಅಂಬೇಡ್ಕರ್ ಜಾರಿಗೊಳಿಸಿದ ಸಮಾನತೆಯ ಸಂವಿಧಾನದ ಒಳಗೆ ತುರುಕಿಸಿ, ತನ್ನ ಅಧಿಕಾರವನ್ನು ವ್ಯವಸ್ಥಿತವಾಗಿ ಕಾಪಾಡಿಕೊಂಡು ಬಂದಿದೆ ಎಂದು ದಲಿತ ಚಿಂತಕ ನಾರಾಯಣ ಮಣೂರು ಹೇಳಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಮೂಡುಬೆಟ್ಟು ನಗರ ಶಾಖೆಯ ಆಶ್ರಯದಲ್ಲಿ ಮೂಡುಬೆಟ್ಟು ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ ದಲಿತ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು. ಈ ದೇಶವನ್ನು ನಾಶ ಮಾಡಲು ಇಲ್ಲಿನ ಶಿಕ್ಷಣ ವ್ಯವಸ್ಥೆಯ ತಳ ತಪ್ಪಿಸಿ […]