ಮೊಸರಲ್ಲಿದೆ ಆರೋಗ್ಯದ ನೂರು ಗುಟ್ಟು: ಆ ಗುಟ್ಟು ಈ ಡಾಕ್ಟರ್ ರಟ್ಟು ಮಾಡಿದ್ದಾರೆ ನೋಡಿ

ಮೊಸರು ಅಂದ್ರೆ ಬಹಳ ಮಂದಿಗೆ ಬೇಕೇ ಬೇಕು. ಮೊಸರಿಲ್ಲದೇ ಊಟ ಸಾಧ್ಯವಿಲ್ಲ ಎಂದು ಹೇಳುವವರಿದ್ದಾರೆ. ಆದರೆ ಮೊಸರು ತಿಂದ್ರೆ ಏನಾಗುತ್ತೆ? ಯಾರಿಗೆ ಬೇಕು ಮೊಸರು ಎಂದು ನಿರ್ಲಕ್ಷ್ಯ ಮಾಡುವವರು ಇದ್ದಾರೆ. ದಿನಕ್ಕೆ ಒಂದು ಕಪ್ ಮೊಸರು ಕುಡಿದರೂ ಸಾಕು ಅದರಿಂದ ನಮ್ಮ ಆರೋಗ್ಯದ ಮೇಲಾಗುವ ಒಳ್ಳೆಯ ಪ್ರಭಾವಗಳೇನು ಎನ್ನುವುದರ ಕುರಿತು ಕಾರ್ಕಳದ ಆಯುರ್ವೇದ ವೈದ್ಯೆ ಡಾ.ಹರ್ಷಾ ಕಾಮತ್ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಮೊಸರು ತಿಂದ್ರೆ ದಪ್ಪವಾಗಬಹುದಾ?ಮೊಸರು ಉಷ್ಣವೇ? ಯಾವ ದೈಹಿಕ ಸಮಸ್ಯೆಗೆಲ್ಲಾ ಮೊಸರು ಒಳ್ಳೆಯದು? ಇತ್ಯಾದಿಗಳ ಬಗ್ಗೆ […]
ಇವರ ಬಣ್ಣದ ಲೋಕ ಜಗಮಗ, ಇವರೇ ಕಲಾಪ್ರಪಂಚದ ಯುವ ಪಯಣಿಗ:ಬಣ್ಣದ ರಂಗಿನ ಹುಡುಗ “ಆಕಾಂಕ್ಷ್”

ಇದು ಉಡುಪಿ XPRESS “ಬಣ್ಣದ ಕನಸುಗಾರರು” ಸರಣಿಯ 7ನೇ ಕಂತು. ಈ ಸರಣಿಯಲ್ಲಿ ನಮ್ಮ ನಡುವಿನ ಯುವ ಕಲಾವಿದರ ಬಗ್ಗೆ ಗಣಪತಿ ದಿವಾಣ ಬರೆಯುತ್ತಾರೆ. ಇಲ್ಲಿ ಬರುವ ಕಲಾವಿದರು ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ಈ ಸಂಚಿಕೆಯಲ್ಲಿ ಉಡುಪಿಯ ಬೈಲೂರಿನ ಕಲಾಜಗತ್ತಿನ ಯುವ ಪಯಣಿಗ ಆಕಾಂಕ್ಷ್ ಅವರ ಕತೆ. ಮನೆಯೇ ಸಣ್ಣ ರಂಗಕೇಂದ್ರವಾಗಿದ್ದಾಗ ಕಲೆಯಲ್ಲಿನ ಆಸಕ್ತಿ, ಸಣ್ಣ ಪುಟ್ಟ ತಿಳುವಳಿಕೆ, ಕಲಿಕೆ ಆಗುವುದು ಸಹಜ ಎನ್ನಬಹುದು. […]
ಸರಕಾರ-ಸಂಘ ಸಂಸ್ಥೆಯ ಸಹಕಾರದಿಂದ ಅಂಗನವಾಡಿಯ ಅಭಿವೃದ್ಧಿ: ಮಂಜುನಾಥ್

ಉಡುಪಿ: ಸರ್ಕಾರ ನೀಡುವ ಸೌಲಭ್ಯದ ಜತೆಗೆ ಸಂಘ ಸಂಸ್ಥೆಗಳು ಸಹ ಸಹಕಾರ ನೀಡಿದಲ್ಲಿ ಅಂಗನವಾಡಿ ಕೇಂದ್ರಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಬಹುದು ಎಂದು ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ಹೇಳಿದರು. ಬಾಲವಿಕಾಸ ಸಮಿತಿ, ರೋಟರಿ ಕ್ಲಬ್ ಉಡುಪಿ ರಾಯಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್, ಸಹಕಾರ ಭಾರತಿ ಸಹಯೋಗದಲ್ಲಿ ಮಣಿಪಾಲ ಈಶ್ವರನಗರ ವಾರ್ಡ್‌ನ ಆದರ್ಶ ನಗರ-ದ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ ಸ್ತನ್ಯಪಾನ ಮತ್ತು ಪೋಷಕಾಂಶ ಅಭಿಯಾನ ಕಾರ್ಯಾಗಾರದಲ್ಲಿ ಮಾತನಾಡಿದರು. ಅಂಗನವಾಡಿಯಿಂದಲೇ […]
ಸಾಂಸ್ಕೃತಿಕ-ಕಲಾ ಚಟುವಟಿಕೆ ಹೃದಯ ಬೆಸೆಯುವ ಮಾಧ್ಯಮ: ಅಂಬಾತನಯ ಮುದ್ರಾಡಿ

ಉಡುಪಿ: ಸಾಂಸ್ಕೃತಿಕ ಕಲಾ ಚಟುವಟಿಕೆಗಳು ಹೃದಯ ಬೆಸೆಯುವ ಮಾಧ್ಯಮವಾಗಿದ್ದು, ಇದರ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಹೇಳಿದರು. ಉಡುಪಿ ಸಂಸ್ಕೃತಿ ವಿಶ್ವಪ್ರತಿಷ್ಠಾನದ ವತಿಯಿಂದ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ ಸಂಸ್ಕೃತಿ ಪ್ರತಿಷ್ಠಾನದ ಉದ್ಘಾಟನೆ, ನಾಟಕೋತ್ಸವ, ಸಾಕ್ಷ್ಯ ಚಿತ್ರ ಬಿಡುಗಡೆ ಹಾಗೂ ಯುವ ಪ್ರತಿಭೆಗಳ ಭಾವಾಭಿವ್ಯಕ್ತಿ ಕಾರ್ಯಕ್ರಮದಲ್ಲಿ ‘ಉಡುಪಿ ವಿಶ್ವನಾಥ ಶೆಣೈ’ ಅವರ ಜೀವನ ಚರಿತ್ರೆ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ […]
ಕಡ್ಡಾಯ ವರ್ಗಾವಣೆ ಬದಲಾವಣೆಗೆ ಸರಕಾರ ಬದ್ಧ: ಕೋಟ

ಉಡುಪಿ: ಶಿಕ್ಷಕರು ವಿವಿಧ ರೀತಿಯ ಒತ್ತಡದಿಂದ ಕೆಲಸ ಮಾಡುವ ಬದಲು ನಿರಾಳತೆ ಹಾಗೂ ಪ್ರೀತಿಯಿಂದ ಕೆಲಸ ಮಾಡುವ ವಾತಾವರಣ ಸೃಷ್ಟಿಸುವ ಅಗತ್ಯವಿದೆ. ಹೀಗಾಗಿ ಸರ್ಕಾರ ಆದಷ್ಟು ಬೇಗ ಕಡ್ಡಾಯ ವರ್ಗಾವಣೆ ಪ್ರಕ್ರಿಯೆಯಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ತಂದು ಶಿಕ್ಷಕರಿಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ಬದ್ಧವಾಗಿದೆ ಎಂದು ಮುಜುರಾಯಿ, ಮೀನುಗಾರಿಕಾ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಉಡುಪಿ ಆದರ್ಶ ಆಸ್ಪತ್ರೆ ವತಿಯಿಂದ ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಶಿಕ್ಷಕ ದಿನಾಚರಣೆಯ ಅಂಗವಾಗಿ ಆದರ್ಶ […]