ಉಡುಪಿ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು : ನಿರ್ವಹಣಾ ಹಬ್ಬ ‘ಲಕ್ಷ್ಯ-2026’ ಉದ್ಘಾಟನೆ

ಉಡುಪಿ, ಎ. 24: ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇಲ್ಲಿನ ವಾಣಿಜ್ಯಶಾಸ್ತ್ರ, ನಿರ್ವಹಣಾ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಾಸಕೋಶ ಇದರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಒಂದು ದಿನದ ನಿರ್ವಹಣಾ ಹಬ್ಬ ‘ಲಕ್ಷ್ಯ-2026’ರ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಪಿ. ಜಿ ಸಭಾಂಗಣದಲ್ಲಿ ನಡೆಯಿತು. ಮಹಿಳಾ ಉದ್ಯಮಿ ಮತ್ತು ಫುಡ್ ಬ್ಲಾಗರ್ ಆದ ರೋವೆನಾ ಫೆರ್ನಾಂಡಿಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜೀವನದಲ್ಲೊಂದು ನಿರ್ದಿಷ್ಟ ಗುರಿಯನ್ನು ಹೊಂದಿದ್ದರೆ […]

ಹುಬ್ಬಳ್ಳಿ: 4 ಗಂಟೆ ಆಗಸದಲ್ಲೇ ತೇಲಾಡಿದ ವಿಮಾನ, ಪ್ರಯಾಣಿಕರ ಬೆಚ್ಚಿಬೀಳಿಸಿ ಕೊನೆಗೂ ಲ್ಯಾಂಡ್ ಆದ FLY91 ವಿಮಾನ!

ಹುಬ್ಬಳ್ಳಿ: ಇತ್ತೀಚೆಗೆ ದೇಶದಲ್ಲಿ ವಿಮಾನ ದುರಂತಗಳ ಆತಂಕ ಹೆಚ್ಚುತ್ತಿರುವ ನಡುವೆಯೇ, ರಾಜ್ಯದಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ಕೊನೆಯ ಕ್ಷಣದಲ್ಲಿ ತಪ್ಪಿದ ಘಟನೆ ಬೆಳಕಿಗೆ ಬಂದಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿಗೆ ಬರುತ್ತಿದ್ದ Fly91 ಏರ್ ಲೈನ್ಸ್‌ನ IC3401 (ATRTurboprop AT7) ವಿಮಾನವು ಮಧ್ಯ ಗಗನದಲ್ಲೇ ತಾಂತ್ರಿಕ ದೋಷಕ್ಕೆ ಒಳಗಾಗಿ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮವಾಗಿ ವಿಮಾನವು ಗಗನದಲ್ಲೇ ಸುಮಾರು 4 ಗಂಟೆಗಳ ಕಾಲ ಸುತ್ತಾಡಿ, ಪ್ರಯಾಣಿಕರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಯಿತು. ಮಧ್ಯಾಹ್ನ 4 ಗಂಟೆಗೆ […]

ಸದ್ದು ಮಾಡುತ್ತಲೇ ಇದೆ ಯಕ್ಷಗಾನದ ಸಿಳ್ಳೆ ಪ್ರಕರಣ: ಕಲಾವಿದನ ನಡೆಗೆ ಹೆಚ್ಚಿದ ಆಕ್ರೋಶ, ಯಕ್ಷಪ್ರಿಯರು ಮತ್ತಷ್ಟು ಗರಂ

ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡತೊಡಗಿದ ಯಕ್ಷಗಾನ ಸಿಳ್ಳೆ ಪ್ರಕರಣ, ಈಗಲೂ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೀಡಾಗುತ್ತಿರುವ ಹಾಟ್ ಟಾಪಿಕ್ ಆಗಿದೆ. ಯಕ್ಷಗಾನ ಬಯಲಾಟದಲ್ಲಿ ಕೆಲವರು ಪ್ರೇಕ್ಷಕರು ಶಿಳ್ಳೆ ಹೊಡೆದಾಗ ಕೃಷ್ಣ ಪಾತ್ರಧಾರಿಯಾಗಿದ್ದ ಹಿರಿಯ ಕಲಾವಿದ ಉಜಿರೆ ಅಶೋಕ್ ಭಟ್ ಕೋಪಗೊಂಡು ರಂಗಸ್ಥಳದಿಂದಲೇ ತರಾಟೆಗೆ ತೆಗೆದುಕೊಂಡು ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗ್ತೇನೆ, ದೊಂಬರಾಟ ಅಲ್ಲ ಇದು. ನನಗೆ ದಾಕ್ಷಿಣ್ಯ ಇಲ್ಲ, ಇದು ಯಕ್ಷಗಾನವೊ? ಕೋಳಿ ಕಟ್ಟವೋ? ಕಂಬಳವೋ ನಿಮಗೆ ನೋಡಲಾಗದಿದ್ದರೆ ಬನ್ಸ್ ತಿಂದು ಹೋಗಿ […]

ಆಕಾಶಕ್ಕೇರಿದ ಗ್ಯಾಸ್ ಸಿಲಿಂಡರ್ ಬೆಲೆ: ನಿಮ್ಮ ಜಿಲ್ಲೆಗಳಲ್ಲಿ ಗ್ಯಾಸ್ ಬೆಲೆ ಎಷ್ಟಿದೆ?ಇಲ್ಲಿದೆ ನೋಡಿ ಲಿಸ್ಟ್

ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ನಡುವೆ ಉಂಟಾದ ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಇಂಧನ ಮತ್ತು ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ದರಗಳು ಏರಿಕೆಯಾಗಿವೆ. ಇದರ ಪ್ರಭಾವ ಭಾರತದಲ್ಲಿಯೂ ಸ್ಪಷ್ಟವಾಗಿ ಕಂಡುಬಂದಿದ್ದು, ತೈಲ ಕಂಪನಿಗಳು LPG ದರದಲ್ಲಿ ಹೆಚ್ಚಳ ಘೋಷಿಸಿವೆ.ದೇಶೀಯ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಸುಮಾರು ₹60 ಹೆಚ್ಚಳವಾಗಿದ್ದರೆ, ವಾಣಿಜ್ಯ LPG ಸಿಲಿಂಡರ್ ದರದಲ್ಲಿ ₹114.5 ರಷ್ಟು ಏರಿಕೆಯಾಗಿದೆ. ಈ ಬೆಲೆ ಏರಿಕೆಯಿಂದ ಹೊಟೇಲ್ ಮತ್ತು ಉಪಹಾರ ಗೃಹಗಳ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. […]

ಬದುಕಿನ ಕಷ್ಟಗಳನ್ನು ಮೆಟ್ಟಿ ಸಾವಯವ ಕೃಷಿಯಲ್ಲಿ ಗೆದ್ದ ಮಹಿಳೆಯ ಸಕ್ಸಸ್ ಸ್ಟೋರಿಯಿದು :ಮಹಿಳಾ ದಿನದ ವಿಶೇಷ ಕೃಷಿಗಾಥೆ

2014ರ ಆಗಸ್ಟ್ ತಿಂಗಳಲ್ಲಿ ಕೇರಳದ ಕೆ.ಎಸ್. ಶೀಜ ಅವರ ಜೀವನದಲ್ಲಿ ಅನಿರೀಕ್ಷಿತ ಸಂಕಷ್ಟ ಎದುರಾಯಿತು. ಮೆಕಾನಿಕಲ್ ಇಂಜಿನಿಯರ್ ಆಗಿದ್ದ ಅವರ ಮಗ ಕೊಯಂಬತ್ತೂರಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕಾಲಿಗೆ ದೊಡ್ಡ ಹಾನಿಯಾಯಿತು. ಮಗನ ಚಿಕಿತ್ಸೆಗಾಗಿ ಶೀಜ ಮತ್ತು ಅವರ ಕುಟುಂಬ ತಮಿಳುನಾಡಿಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಂಡು, ಆಸ್ಪತ್ರೆಯ ಸಮೀಪದಲ್ಲಿರುವ ಮನೆವೊಂದರಲ್ಲಿ ಸುಮಾರು ಒಂದೂವರೆ ವರ್ಷ ವಾಸವಿದ್ದರು. ಆ ಅವಧಿಯಲ್ಲಿ ಆಸ್ಪತ್ರೆ ಓಡಾಟ ಹಾಗೂ ನಿರಂತರ ಚಿಕಿತ್ಸೆಯಿಂದ ಶೀಜ ಮಾನಸಿಕವಾಗಿ ಬಹಳ ಒತ್ತಡ ಅನುಭವಿಸಿದರು. ಈ ಸಮಯದಲ್ಲಿ […]