ಅಮ್ಮ ವಿದ್ ಕಂದಮ್ಮ3-ನಿಮ್ಮ ಮುದ್ದಾದ ಕಂದಮ್ಮನ ಜೊತೆ ನಿಮ್ಮ ಭಾವಚಿತ್ರವನ್ನು ನಮ್ಮ ಜೊತೆ ಹಂಚಿಕೊಳ್ಳಿ: ಆಕರ್ಷಕ ಬಹುಮಾನಗಳನ್ನು ಗೆಲ್ಲಿ

ಅಮ್ಮ ಮತ್ತು ಮಗುವಿನ ಭಾವನಾತ್ಮಕ ಸಂಬಂಧವನ್ನು ಕ್ಯಾಮರಾ ಕಣ್ಣುಗಳಲ್ಲಿ ಸೆರೆಹಿಡಿದು ಮಕ್ಕಳ ದಿನಾಚರಣೆಯನ್ನು ಅವಿಸ್ಮರಣೀಯಗೊಳಿಸುವ ಜೊತೆಗೆ ನಿಮ್ಮ ಮುದ್ದಾದ ಭಾವಚಿತ್ರಕ್ಕೆ ಆಕರ್ಷಕ ಬಹುಮಾನವನ್ನು ಗೆಲ್ಲುವ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ!! ತಮ್ಮ ಮಕ್ಕಳ ಜೊತೆ ಅಮ್ಮಂದಿರಿಗೂ ಮಿಂಚಲು ಇರುವ ಸದವಕಾಶವನ್ನು ಉಪಯೋಗಿಸಿಕೊಳ್ಳಿ. ನಿಮ್ಮ ಜೊತೆ ಇರುವ 6 ವರ್ಷದೊಳಗಿನ ನಿಮ್ಮ ಮುದ್ದು ಕಂದಮ್ಮನ ಫೋಟೋವನ್ನು UDUPIXPRESS.COM ಜೊತೆ ಹಂಚಿಕೊಳ್ಳಿ. ಅಮ್ಮ- ಮಗುವಿನ ಉತ್ತಮ ಗುಣಮಟ್ಟದ ಫೋಟೋಗಳನ್ನು photoudupixpress@gmail.com ಗೆ ಇ-ಮೇಲ್ ಮಾಡಿ. ಆಯ್ದ 25 ಫೋಟೋಗಳನ್ನು ನಾವು ನಮ್ಮ‌ udupixpress.com […]

ಕ್ರೀಡಾಲೋಕದ ನಕ್ಷತ್ರ, ಯುವ ಕ್ರೀಡಾಳುಗಳ ಅಪ್ರತಿಮ ಗುರು: ಉಡುಪಿಯ ಶಾಲಿನಿ ಶೆಟ್ಟಿ ಯಶೋಗಾಥೆ ಇದು!

ನಮ್ಮ ದೇಶದಲ್ಲಿ ಕ್ರಿಕೆಟ್ ಮತ್ತು ಇನ್ನಿತರ ಕ್ರೀಡೆಗಳಿಗೆ ಇರುವ ತರತಮ ವ್ಯವಸ್ಥೆಯಿಂದಾಗಿ ಸಾವಿರಾರು ಕ್ರೀಡಾಳುಗಳ ಪ್ರತಿಭೆಗಳು ಬೆಳಕಿಗೆ ಬಾರದೇ ಕರುಟಿ, ಮುರುಟಿ, ಮುದುರಿ ಹೋಗುತ್ತಿರುವುದಂತು ಸತ್ಯ. ಆದರೂ ಕೆಲವೊಮ್ಮೆ ಕೆಲವು ಕ್ರೀಡಾಪಟುಗಳು ತಮ್ಮ ಅದ್ವಿತೀಯ ಸಾಧನೆ, ಪ್ರತಿಭೆ, ಪ್ರಬಲವಾದ ಇಚ್ಛಾಶಕ್ತಿಯಿಂದ ಕ್ರೀಡಾಂಬರದಲ್ಲಿ ನಕ್ಷತ್ರಗಳಂತೆ ಮಿಂಚಿ ಪ್ರಜ್ವಲಿಸುತ್ತಾರೆ. ಇನ್ನೂ ಕೆಲವರು ವನಸುಮಗಳಂತೆ ಜಗದ ಪೊಗಳಿಕೆಗೆ ಬಾಯಿ ಬಿಡದೆ ಎಲೆಯ ಮರೆಯ ಪಿಂತಿರ್ದು ತಾನಾಯಿತು ತನ್ನ ಸಾಧನೆಯಾಯ್ತು ಎಂದು ಸದ್ದಿಲ್ಲದೆ ತಮ್ಮಷ್ಟಕ್ಕೆ ತಾವೇ ಸಾಧಿಸಿಕೊಂಡು ಮುಂದುವರಿಯುತ್ತಾರೆ. ಹೀಗೆ ಪ್ರಚಾರಕ್ಕೆ ಹಾತೊರೆಯದೆ […]

ನಾಳೆಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಎಸೆಸ್ಸೆಲ್ಸಿ,ಪ್ರಥಮ ಪಿಯು ಅಂಕಗಳನ್ನು ಆನ್ಲೈನ್ ನಲ್ಲೇ ನೋಡಬಹುದು

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಅಂಕಗಳನ್ನು ವೀಕ್ಷಿಸುವ ಅವಕಾಶವನ್ನು ನೀಡಿದ್ದು, ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆಯ ಪೋರ್ಟಲ್(SATS) ನಲ್ಲಿ ವೀಕ್ಷಿಸಬಹುದು. ಪೋರ್ಟಲ್ ಲಿಂಕ್ ನಾಳೆಯಿಂದ ಸಕ್ರಿಯವಾಗಲಿದ್ದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು https://sts.karnataka.gov.in/SATSPU/ ಈ ಲಿಂಕ್ ಮೂಲಕ ನೋಡಬಹುದು. ಅಂಕಗಳನ್ನು ವೀಕ್ಷಿಸಿದ ನಂತರ ವಿದ್ಯಾರ್ಥಿಗಳಿಗೆ ತಮ್ಮ ಅಂಕಗಳಲ್ಲಿ ಸಂದೇಹ ಕಂಡುಬಂದರೆ ಅಥವಾ ಯಾವುದೇ ಲೋಪದೋಷ ಕಂಡುಬಂದರೆ ಆಯಾ ಕಾಲೇಜು ಪ್ರಾಂಶುಪಾಲರಿಗೆ ಇದೇ ತಿಂಗಳ 12ರೊಳಗೆ ಮಾಹಿತಿ ನೀಡಿ […]

ಭಾರತದಲ್ಲಿ 5 ಜಿ ಜಾರಿ ವಿರೋಧಿಸಿ ಕೋರ್ಟ್ ಮೊರೆ ಹೋದ ನಟಿ ಜೂಹಿ ಚಾವ್ಲ: ಕಾರಣವೇನು ಗೊತ್ತಾ?

ನವದೆಹಲಿ:5 ಜಿ ತರಂಗಾಂತರಗಳಿಂದ ಮನುಷ್ಯನ ಆರೋಗ್ಯದ ಮೇಲೆಯೂ ಸೇರಿದಂತೆ ಇಡೀ ದೇಶದ ಪ್ರಾಕೃತಿಕ ಸಂಪನ್ಮೂಲಗಳ ಮೇಲೆಯೂ ಹಾನಿಯಾಗಲಿದೆ. ಜೀವ ವೈವಿದ್ಯಗಳಿಗೂ 5 ಜಿ ಮಾರಕ ಎನ್ನುವ ಮಾಹಿತಿಗಳು ತಜ್ಞರುಗಳಿಂದ ಕೇಳೀ ಬರುತ್ತಿರುವ ಬೆನ್ನಲ್ಲೇ ಇದೀಗ ರೇಡಿಯೊಫ್ರೀಕ್ವೆನ್ಸಿ (ಆರ್ ಎಫ್) ವಿಕಿರಣಗಳ ಕುರಿತು ನಿರಂತರ ಜಾಗೃತಿ ಮೂಡಿಸುತ್ತಿರುವ ಬಾಲಿವುಡ್ ನಟಿ ಜೂಹಿ ಚಾವ್ಲ ಭಾರತದಲ್ಲಿ 5 ಜಿ ಜಾರಿ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ.  5 ಜಿ ತಂತ್ರಜ್ಞಾನ ಜಾರಿಯಾದಲ್ಲಿ ಅದರಿಂದ ಈಗಿರುವ ವಿಕರಣಗಳಿಗಿಂತ 10-100 ಪಟ್ಟು ಹೆಚ್ಚಿನ ಆರ್ […]

ಕೋವಿಡ್ -19 ಮಾರ್ಗಸೂಚಿ ಪಾಲಿಸದ ಸಂಸ್ಥೆಗಳ ನೋಂದಣಿ ರದ್ದು

ಉಡುಪಿ : ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿ ಕೆ.ಪಿ.ಎಂ.ಇ ನವೀಕರಣ ಮಾಡದ ಹಾಗೂ ಕೋವಿಡ್-19 ಮಾರ್ಗಸೂಚಿ ಪಾಲಿಸದ ಉಡುಪಿ ತಾಲೂಕಿನ 16, ಕುಂದಾಪುರ ತಾಲೂಕಿನ 3 ಹಾಗೂ ಕಾರ್ಕಳ ತಾಲೂಕಿನ 7 ಸಂಸ್ಥೆಗಳ ನೋಂದಣಿಯನ್ನು ಕೆ.ಪಿ.ಎಮ್.ಇ ಹಾಗೂ ಎಪಿಡೆಮಿಕ್ ಕಾಯ್ದೆ ಅನ್ವಯ ರದ್ದುಪಡಿಸಲಾಗಿದೆ ಎಂದು ಜಿಲ್ಲಾ ಕೆ.ಪಿ.ಎಮ್.ಇ ಕಮಿಟಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.