ಚುನಾವಣ ಕರ್ತವ್ಯ ನಿರತ ಸಿಬ್ಬಂದಿ ಮತದಾನದಿಂದ ವಂಚಿತರಾಗಬಾರದು: ಅಪರ ಜಿಲ್ಲಾಧಿಕಾರಿ

ಏಪ್ರಿಲ್ 18 ರಂದು ನಡೆಯುವ ಉಡುಪಿ -ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಕರ್ತವ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗಳು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಅವರಿಗೆ ಅಂಚೆಮತ ಪತ್ರ ಮತ್ತು ಇಡಿಸಿ ವಿತರಿಸುವಲ್ಲಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವಂತೆ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಸೂಚಿಸಿದ್ದಾರೆ. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದ ವಿಧಾನಸಭಾ ಕ್ಷೇತ್ರವಾರು ನಿಯೋಜಿಸರುವ ಅಂಚೆ ಮತಪತ್ರ ನಿರ್ವಹಣೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಚುನಾವಣೆಯಲ್ಲಿ ಪ್ರತಿ ಮತವೂ ಅಮೂಲ್ಯವಾಗಿದೆ, ಅದರಲ್ಲೂ ಚುನಾವಣಾ […]
ಚುನಾವಣೆಗೆ ಸಂಬಂದಿಸಿದಂತೆ ಹೆಚ್ಚುವರಿ ಮತಯಂತ್ರಗಳ ಹಂಚಿಕೆ
ಉಡುಪಿ – ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಸಂಬಂದಿಸಿದಂತೆ , ಅಗತ್ಯವಿರುವ ಹೆಚ್ಚುವರಿ ಮತಯಂತ್ರಗಳನ್ನು ವಿಧಾನಸಭಾ ಕ್ಷೇತ್ರವಾರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ಅಧ್ಯಕ್ಷತೆಯಲ್ಲಿ ಇಂದು ಹಂಚಿಕೆ ಮಾಡಲಾಯಿತು. ಕುಂದಾಪುರ ವಿಧಾನ ಸಭಾ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 25 ಬ್ಯಾಲೆಟ್ ಯುನಿಟ್, 8 ಕಂಟ್ರೋಲ್ ಯುನಿಟ್, 5 ವಿವಿ ಪ್ಯಾಟ್ ಗಳನ್ನು ಹಂಚಿಕೆ ಮಾಡಲಾಯಿತು. ಉಡುಪಿ ವಿಧಾನ ಸಭಾ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 30 ಬ್ಯಾಲೆಟ್ ಯುನಿಟ್, 12 ಕಂಟ್ರೋಲ್ ಯುನಿಟ್, 12 ವಿವಿ ಪ್ಯಾಟ್ […]