ಚುನಾವಣೆಗೆ ಸಂಬಂದಿಸಿದಂತೆ ಹೆಚ್ಚುವರಿ ಮತಯಂತ್ರಗಳ ಹಂಚಿಕೆ

ಉಡುಪಿ – ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಸಂಬಂದಿಸಿದಂತೆ , ಅಗತ್ಯವಿರುವ ಹೆಚ್ಚುವರಿ ಮತಯಂತ್ರಗಳನ್ನು ವಿಧಾನಸಭಾ ಕ್ಷೇತ್ರವಾರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ಅಧ್ಯಕ್ಷತೆಯಲ್ಲಿ ಇಂದು ಹಂಚಿಕೆ ಮಾಡಲಾಯಿತು.

ಕುಂದಾಪುರ ವಿಧಾನ ಸಭಾ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 25 ಬ್ಯಾಲೆಟ್ ಯುನಿಟ್, 8 ಕಂಟ್ರೋಲ್ ಯುನಿಟ್, 5 ವಿವಿ ಪ್ಯಾಟ್ ಗಳನ್ನು ಹಂಚಿಕೆ ಮಾಡಲಾಯಿತು.

ಉಡುಪಿ  ವಿಧಾನ ಸಭಾ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 30 ಬ್ಯಾಲೆಟ್ ಯುನಿಟ್, 12 ಕಂಟ್ರೋಲ್ ಯುನಿಟ್, 12 ವಿವಿ ಪ್ಯಾಟ್ ಗಳನ್ನು ಹಂಚಿಕೆ ಮಾಡಲಾಯಿತು.

ಕಾಪು ಸಭಾ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 26 ಬ್ಯಾಲೆಟ್ ಯುನಿಟ್, 9 ಕಂಟ್ರೋಲ್ ಯುನಿಟ್, 12 ವಿವಿ ಪ್ಯಾಟ್ ಗಳನ್ನು ಹಂಚಿಕೆ ಮಾಡಲಾಯಿತು.

ಕಾರ್ಕಳ ವಿಧಾನ ಸಭಾ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 26 ಬ್ಯಾಲೆಟ್ ಯುನಿಟ್, 9 ಕಂಟ್ರೋಲ್ ಯುನಿಟ್, 5 ವಿವಿ ಪ್ಯಾಟ್ ಗಳನ್ನು ಹಂಚಿಕೆ ಮಾಡಲಾಯಿತು.

ಎಲ್ಲಾ ಮತಯಂತ್ರ ಮತ್ತು ವಿವಿ ಪ್ಯಾಟ್  ಯಂತ್ರಗಳನ್ನು ಮತ್ತೊಮ್ಮೆ ಕೂಲಂಕುಷವಾಗಿ ಪರೀಕ್ಷಿಸಿ, ಸಂಬಂದಪಟ್ಟ ವಿಧಾನಸಭಾ ಕ್ಷೇತ್ರಗಳಿಗೆ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಉಪಸ್ಥಿತರಿದ್ದರು.