ಸ್ವಬಂಧನದಿಂದ ಬಿಡುಗಡೆಯಾಗದಿದ್ದರೆ ಹೆಣ್ಣು ಮಹಾ ಇಳೆಯಾಗಲು ಸಾಧ್ಯವಿಲ್ಲ: ಆಶಾದೇವಿ 

ಉಡುಪಿ: ಮಹಿಳೆಯರು ಎಲ್ಲಿಯವರೆಗೆ ತಮಗೆ ತಾವೇ ಹಾಕಿಕೊಂಡಿರುವ ಕೆಲವೊಂದು ಸ್ವಬಂಧನದಿಂದ ಬಿಡುಗಡೆ ಹೊಂದುದಿಲ್ಲವೋ ಅಲ್ಲಿಯವರೆಗೆ ಅವರು ಮಹಾ ಇಳೆಯಾಗಲು ಸಾಧ್ಯವಿಲ್ಲ ಎಂದು ವಿಮರ್ಶಕಿ, ಸ್ತ್ರೀವಾದಿ ಚಿಂತಕಿ ಡಾ. ಎಂ.ಎಸ್‌. ಆಶಾದೇವಿ ಹೇಳಿದರು. ಉಡುಪಿ ಎಂಜಿಎಂ ಕಾಲೇಜಿನ ಎನ್‌ಎಸ್‌ಎಸ್‌ ಘಟಕ 1 ಮತ್ತು 2ರ ವತಿಯಿಂದ ವಿಶ್ವಮಹಿಳಾ ದಿನಾಚರಣೆ ಪ್ರಯುಕ್ತ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಮಹಾ ಇಳೆ—ಮಹಿಳೆ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ನಮ್ಮ ಘನತೆಯನ್ನು ಕಳೆದುಕೊಳ್ಳದೆ ಬಹಳ ಮೌನವಾಗಿ ಸ್ತ್ರೀವಾದ ಅತ್ಯಂತ […]

ಸಿಂಹದ ಮರಿ  ಅಭಿನಂದನ್ ವರ್ಧಮಾನ್ ರವರಿಗೆ ಅಭಿನಂದನೆ

ಶ್ರೀ ರಾಮಸೇನೆ ಉಡುಪಿ ಜಿಲ್ಲೆ ಮತ್ತು ಶ್ರೀ ರಾಮಸೇನೆ ಮಣಿಪಾಲ ಘಟಕ ವತಿಯಿಂದ. ಇಂದು ಸಂಜೆ  5:00ಗಂಟೆಗೆ ಮಣಿಪಾಲದ ಸಿಂಡಿಕೇಟ್ ಸರ್ಕಲ್ ನಿಂದ  ಮೆರವಣಿಗೆ ಮೂಲಕ ಸಾಗಿ ಬಂದು ಟೈಗರ್  ಸರ್ಕಲ್ ನಲ್ಲಿ, ಭಾರತದ ವಾಯುಪುತ್ರ ಸಿಂಹದ ಮರಿ  ಅಭಿನಂದನ್ ವರ್ಧಮಾನ್ ರವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ ರಾಮಸೇನೆಯ ಜಿಲ್ಲಾಧ್ಯಕ್ಷರಾದ ಜಯರಾಂ ಅಂಬೆಕಲ್ಲು, ಮಧುಕರ ಮುದ್ರಾಡಿ,  ನವೀನ್ ರಾವ್ ಮಾತನಾಡಿದ್ದರು.  ಈ ಸಂದರ್ಭದಲ್ಲಿ  ಮಣಿಪಾಲಘಟಕಾಧ್ಯಕ್ಷರಾದ ಹರೀಶ್ ಪೂಜಾರಿ,ಶ್ರೀ ರಾಮಸೇನೆಯ ಮುಖಂಡರಾದ ಶರತ್ […]

ಅಭಿನಂದನ್ ತೋರಿದ ಸಾಹಸದಿಂದ ದೇಶದ ಗೌರವ ಹೆಚ್ಚಿದೆ: ಪೇಜಾವರ ಶ್ರೀ

ಉಡುಪಿ: ಭಾರತದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ತೋರಿದ ಧೈರ್ಯ ಮೆಚ್ಚುವಂತದ್ದು, ಶತ್ರು (ಪಾಕಿಸ್ತಾನ) ದೇಶದಲ್ಲಿ ಆತ ವರ್ತಿಸಿದ ರೀತಿ ದೇಶದ ಗೌರವವನ್ನು ಹೆಚ್ಚಿಸಿದೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಉಡುಪಿಯಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಭಿನಂದನ್ ಜೇಬಲ್ಲಿದ್ದ ಭದ್ರತೆಗೆ ಸಂಬಂಧಿಸಿದ ಕಾಗದ ಪತ್ರ ನುಂಗಿ ದೇಶದ ಕಾಳಜಿ ತೋರಿದ್ದಾರೆ. ಅವರು ಸಾಹಸಕ್ಕೆ ಪ್ರತಿಯೊಬ್ಬ ಭಾರತೀಯರು ಸೆಲ್ಯೂಟ್ ಹೊಡೆಯಬೇಕು. ಅವರಿಗೆ ಸಾವಿರ ಸಾವಿರ ಅಭಿನಂದನೆಗಳು ಎಂದರು. ಯುದ್ಧ ಬೇಡ: ಪಾಕಿಸ್ತಾನದ ಜೊತೆ ಯುದ್ಧ ಬೇಡ, ಯುದ್ಧದಿಂದ […]

ಯೋಧರಿಗೆ ಬೆಂಬಲ ನೀಡಲು ಚಿತ್ರ ವೀಕ್ಷಣೆ: ಪೇಜಾವರ ಶ್ರೀ

ಉಡುಪಿ: ಪೇಜಾವರದ ಮಠದ ವಿಶ್ವೇಶತೀರ್ಥರು, ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥರು ಮತ್ತು ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಗುರುವಾರ ರಾತ್ರಿ ಮಣಿಪಾಲದ ಚಿತ್ರಮಂದಿರದಲ್ಲಿ ” ಉರಿ ” ಚಿತ್ರವನ್ನು ವೀಕ್ಷಿಸಿದರು. ಸ್ವಾಮೀಜಿಗಳಿಗಾಗಿ ಚಿತ್ರ ವೀಕ್ಷಣೆಗೆಂದು ವಿಶೇಷವಾಗಿ ವ್ಯವಸ್ಥೆ ಮಾಡಲಾಗಿತ್ತು. ಸಿನಿಮಾ ವೀಕ್ಷಿಸಿ ಮಾತನಾಡಿದ ಶ್ರೀಗಳು, ಸೈನಿಕರ ವೀರಗಾಥೆಯನ್ನು ಬಿಂಬಿಸುವ ದೇಶಪ್ರೇಮದ ಕಥಾನಕ ಈ ಚಿತ್ರ ಎಂದು ಹೇಳಿದರು. ಸೈನಿಕ ಮತ್ತು ಸಂತನ ಬದುಕು ಸಮಾಜಕ್ಕೆ ಮುಡಿಪಾಗಿರುತ್ತದೆ. ಸೈನಿಕರ ವೀರತ್ವಕ್ಕೆ ನೈತಿಕ ಬೆಂಬಲ ಕೊಡುವುದು ಕರ್ತವ್ಯ ಆಗಬೇಕೆಂಬ ಆಶಯದಿಂದ […]

ಪತ್ರಕರ್ತರು ಸಮಾಜದಲ್ಲಿನ ಸಮಸ್ಯೆಗಳಿಗೆ ತಮ್ಮ ಹರಿತವಾದ ಲೇಖನಿಗಳ ಮೂಲಕ ಜಾಗೃತಿ ಮೂಡಿಸುತ್ತಾರೆ: ಯಶ್‍ಪಾಲ್

ಪತ್ರಕರ್ತರು ಸಮಾಜದಲ್ಲಿನ ಸಮಸ್ಯೆಗಳಿಗೆ ತಮ್ಮ ಹರಿತವಾದ ಲೇಖನಿಗಳ ಮೂಲಕ ಜಾಗೃತಿ ಮೂಡಿಸುತ್ತಾರೆ. ದಿನದ ಇಪ್ಪತ್ತನಾಲ್ಕು ಗಂಟೆಯೂ ದಣಿವರಿಯದೇ ಸೇವೆ ಸಲ್ಲಿಸುವ ಜಿಲ್ಲೆಯ ಪತ್ರಕರ್ತರು ಕ್ರೀಡಾಕೂಟ ಏರ್ಪಡಿಸುವ ಮೂಲಕ ಕೀಡಾ ಸ್ಪೂರ್ತಿ ಮೆರೆದಿರುವುದು ಶ್ಲಾಘನೀಯ ಎಂದು ಮೀನುಗಾರಿಕ ಮಂಡಳಿ ಅಧ್ಯಕ್ಷ ಯಶ್‍ಪಾಲ್ ಸುವರ್ಣ ಹೇಳಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪ್ರೆಸ್ ಕ್ಲಬ್ ಸಹಯೋಗದಲ್ಲಿ ಮಂಗಳವಾರ ಅಜ್ಜರಕಾಡು ಕ್ರೀಡಾಂಗದಲ್ಲಿ ನಡೆದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟವನ್ನುದ್ದೇಶಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾದ ಬಡಗಬೆಟ್ಟು ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ […]