ಉಡುಪಿ: ಇಂದು ಪರಿವರ್ತನಾ ಸಮಾವೇಶ
ಉಡುಪಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆಶ್ರಯ, ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಮಾ. 10ರ ಮಧ್ಯಾಹ್ನ 2.30ಕ್ಕೆ ಕಲ್ಸಂಕ ರಾಯಲ್ಗಾರ್ಡನ್‌ನಲ್ಲಿ ‘ಜಿಲ್ಲಾ ಮಟ್ಟದ ಪರಿವರ್ತನಾ ಸಮಾವೇಶ’ ನಡೆಯಲಿದೆ. ಲೋಕಸಭೆ ಚುನಾವಣೆಯ ಪೂರ್ವಭಾವಿಯಾಗಿ ಕಾರ್ಯಕರ್ತರಿಗೆ ಸಿದ್ಧತೆ ಮತ್ತು ಪಕ್ಷದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಯಪಡಿಸುವ ಉದ್ದೇಶದಿಂದ ಈ ಸಮಾವೇಶ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಕೆ. […]
ಉಡುಪಿ: ಗಮನ ಸೆಳೆದ ರೋಮಾಂಚಕ ಕೆಟಿಎಂ ಬೈಕ್ ಸಾಹಸ

ಉಡುಪಿ: ಮುಂಚೂಣಿಯ ರೇಸಿಂಗ್ ಬೈಕುಗಳ ಬ್ರಾಂಡ್ ಕೆಟಿಎಂ ನಗರದಲ್ಲಿ ಶನಿವಾರ ರೋಮಾಂಚಕ ಬೈಕ್ ಸಾಹಸ ಪ್ರದರ್ಶನವನ್ನು ಆಯೋಜಿಸಿತ್ತು. ವೃತ್ತಿಪರ ಸಾಹಸಿ ಬೈಕ್ ಚಾಲಕರು ಮೈನವಿರೇಳಿಸುವಂತೆ ಬೈಕ್ ಸಾಹಸ ಮತ್ತು ಟ್ರಿಕ್‌ಗಳನ್ನು ಪ್ರದರ್ಶಿಸಿದರು. ನಗರದ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದ ಆವರಣದಲ್ಲಿ ನಡೆದ ಈ ಸಾಹಸ ಪ್ರದರ್ಶನಕ್ಕೆ ನೂರಾರು ಜನರು ಸಾಕ್ಷಿಯಾದರು. ಪ್ರೇಕ್ಷಕರು ಉಸಿರು ಬಿಗಿಹಿಡಿಯುವಂತ ಕೆಟಿಎಂ ಡ್ಯೂಕ್ ಬೈಕ್‌ಗಳಲ್ಲಿ ಚಾಲಕರು ಸಾಹಸಗಳನ್ನು ಸಾದರಪಡಿಸಿದರು. ಕೆಟಿಎಂ ಬೈಕ್ ಸಾಹಸ ನೋಡಲು ಸಾರ್ವಜನಿಕರಿಗೆ ಉಚಿತ ಪ್ರವೇಶವಿತ್ತು. “ಕೆಟಿಎಂ ಬ್ರಾಂಡ್ ಅಧಿಕ […]
ಉಡುಪಿ: ವಾಹನ ಅಪಘಾತ ಅಪರಿಚಿತ, ಮೃತ ವ್ಯಕ್ತಿಯ ಬಗ್ಗೆ ಮಾಹಿತಿ

ಉಡುಪಿ: ಉಡುಪಿ ಪುತ್ತೂರು ಗ್ರಾಮದ ಹನುಮಂತನಗರ ಪ್ರಾಥಮಿಕ ಶಾಲೆಯ ಎದುರು ರಾಷ್ಟ್ರೀಯ ಹೆದ್ದಾರಿ 66 ರ ಸಾರ್ವಜನಿಕ ರಸ್ತೆಯಲ್ಲಿ ಮಾ.8 ರಂದು ಬೆಳಗ್ಗೆ 6.30 ಕ್ಕೆ ಸುಮಾರು ಸುಮಾರು 35 ವರ್ಷ, 5.4 ಅಡಿ ಎತ್ತರದ, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿರುವ ಅಪರಿಚಿತ ವ್ಯಕ್ತಿಯೋರ್ವನಿಗೆ ಯಾವುದೋ ವಾಹನ ಕರಾವಳಿ ಕಡೆಯಿಂದ ಸಂತೆಕಟ್ಟೆ ಕಡೆಗೆ ದುಡುಕುತನದಿಂದ ಮತ್ತು ಅಜಾಗರೂಕತೆಯಿಂದ ಚಲಾಯಿಸಿ, ಅಪಘಾತವೆಸಗಿ ಪರಾರಿಯಾಗಿದ್ದು, ಅಪಘಾತದ ಪರಿಣಾಮ ಅಪರಿಚಿತ ವ್ಯಕ್ತಿಯ ತಲೆಗೆ ಮತ್ತು ಮುಖಕ್ಕೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ […]
ಮಾ.10: ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ

ಉಡುಪಿ: ಉಡುಪಿ ಜಿಲ್ಲೆಯಲ್ಲಿ 0-5 ವರ್ಷದೊಳಗಿನ ಒಟ್ಟು ಅರ್ಹ ಮಕ್ಕಳ ಸಂಖ್ಯೆ 77740 ( ಗ್ರಾಮೀಣ ಪ್ರದೇಶ 63630, ನಗರ ಪ್ರದೇಶ 14110) ಇದ್ದು, ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಒಟ್ಟು ಲಸಿಕಾ ಕೇಂದ್ರಗಳು 657 (ಗ್ರಾಮೀಣ ಪ್ರದೇಶ 569, ನಗರ ಪ್ರದೇಶ 88). ಇದಲ್ಲದೆ 9 ಮೊಬೈಲ್ ಟೀಮ್ ಮತ್ತು 32 ಟ್ರಾನ್ಸಿಟ್ ಬೂತ್‍ಗಳನ್ನು ತೆರೆದು 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ನೀಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಲಸಿಕಾ ಸ್ವಯಂ ಸೇವಕರ ಸಂಖ್ಯೆ […]
ಮಾ.13ರಿಂದ ಶ್ರೀಕೃಷ್ಣಮಠದ ಗರ್ಭಗುಡಿ ಮೇಲ್ಛಾವಣಿಗೆ ಚಿನ್ನದ ತಗಡು ಅಳವಡಿಕೆ ಕಾರ್ಯ ಆರಂಭ

ಉಡುಪಿ: ಇಲ್ಲಿನ ಶ್ರೀಕೃಷ್ಣಮಠದ ಗರ್ಭಗುಡಿಯ ಮೇಲ್ಛಾವಣಿಗೆ ಬಂಗಾರದ ಹೊದಿಕೆ ಅಳವಡಿಸುವ ಕಾರ್ಯ ಮಾ. 13ರಿಂದ ಆರಂಭಗೊಳ್ಳಲಿದೆ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ ಉಡುಪಿ ಶ್ರೀಕೃಷ್ಣಮಠದ ಕನಕ ಮಂಟಪದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಗರ್ಭಗುಡಿಯ ಮೇಲ್ಛಾವಣಿ ನವೀಕರಣ ಕಾರ್ಯಕ್ಕೂ ಮುಂಚೆ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಆ ಬಳಿಕ ಗರ್ಭಗುಡಿಯ ಶಿಖರ ಕಲಶವನ್ನು ಕೆಳಗಿಳಿಸಿ ಚಿನ್ನ ಲೆಪಿತ ತಗಡು ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಈ ನವೀಕರಣ ಕಾರ್ಯಕ್ಕೂ […]