ಉಡುಪಿ: ಹೊಸ ಸ್ವರೂಪದೊಂದಿಗೆ ತನಿಷ್ಕ್ ಚಿನ್ನಾಭರಣ ಮಳಿಗೆ ಪುನಾರಂಭ
ಉಡುಪಿ: ಇಲ್ಲಿನ ಗೀತಾಂಜಲಿ ಥಿಯೇಟರ್ ರಸ್ತೆಯ ರಾಮಕೃಷ್ಣ ಹೋಟೆಲ್ ಮುಂಭಾಗದ ಕಟ್ಟಡದಲ್ಲಿರುವ ತನಿಷ್ಕ್ ಚಿನ್ನಾಭರಣ ಮಳಿಗೆ ವಿನೂತನ ಸ್ವರೂಪದೊಂದಿಗೆ ಶನಿವಾರ ಪುನಾರಂಭಗೊಂಡಿತು. ಟಾಟಾ ಸನ್ಸ್ ಪ್ರೈವೇಟ್ ಲಿಮೆಟೆಡ್‍ನ ನಿರ್ದೇಶಕ ಭಾಸ್ಕರ್ ಭಟ್, ಟೈಟನ್ ಕಂಪನಿ ಲಿಮಿಟೆಡ್‍ನ ದಕ್ಷಿಣದ ಪ್ರಾದೇಶಿಕ ವಹಿವಾಟು ಮುಖ್ಯಸ್ಥ ಶರದ್ ಮಳಿಗೆಯನ್ನು ಉದ್ಘಾಟಿಸಿದರು. ಆಶೀರ್ವಚನ ನೀಡಿದ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಗ್ರಾಹಕರ ವಿಶ್ವಾಸ, ನಂಬಿಕೆಗೆ ಟಾಟಾ ಸಂಸ್ಥೆ ಪಾತ್ರವಾಗಿದ್ದು, ಉತ್ತಮ ಗುಣಮಟ್ಟ, ಪ್ರಾಮಾಣಿಕತೆಗೆ ಈ ಸಂಸ್ಥೆ ಹೆಸರುವಾಸಿಯಾಗಿದೆ. ಈ ಸಂಸ್ಥೆ ಇನ್ನಷ್ಟು […]