udupixpress
Home Trending ಉಡುಪಿ: ಹೊಸ ಸ್ವರೂಪದೊಂದಿಗೆ ತನಿಷ್ಕ್ ಚಿನ್ನಾಭರಣ ಮಳಿಗೆ ಪುನಾರಂಭ

ಉಡುಪಿ: ಹೊಸ ಸ್ವರೂಪದೊಂದಿಗೆ ತನಿಷ್ಕ್ ಚಿನ್ನಾಭರಣ ಮಳಿಗೆ ಪುನಾರಂಭ

ಉಡುಪಿ: ಇಲ್ಲಿನ ಗೀತಾಂಜಲಿ ಥಿಯೇಟರ್ ರಸ್ತೆಯ ರಾಮಕೃಷ್ಣ ಹೋಟೆಲ್ ಮುಂಭಾಗದ ಕಟ್ಟಡದಲ್ಲಿರುವ ತನಿಷ್ಕ್ ಚಿನ್ನಾಭರಣ ಮಳಿಗೆ ವಿನೂತನ ಸ್ವರೂಪದೊಂದಿಗೆ ಶನಿವಾರ ಪುನಾರಂಭಗೊಂಡಿತು.

ಟಾಟಾ ಸನ್ಸ್ ಪ್ರೈವೇಟ್ ಲಿಮೆಟೆಡ್‍ನ ನಿರ್ದೇಶಕ ಭಾಸ್ಕರ್ ಭಟ್, ಟೈಟನ್ ಕಂಪನಿ ಲಿಮಿಟೆಡ್‍ನ ದಕ್ಷಿಣದ ಪ್ರಾದೇಶಿಕ ವಹಿವಾಟು ಮುಖ್ಯಸ್ಥ ಶರದ್ ಮಳಿಗೆಯನ್ನು ಉದ್ಘಾಟಿಸಿದರು.

ಆಶೀರ್ವಚನ ನೀಡಿದ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಗ್ರಾಹಕರ ವಿಶ್ವಾಸ, ನಂಬಿಕೆಗೆ ಟಾಟಾ ಸಂಸ್ಥೆ ಪಾತ್ರವಾಗಿದ್ದು, ಉತ್ತಮ ಗುಣಮಟ್ಟ, ಪ್ರಾಮಾಣಿಕತೆಗೆ ಈ ಸಂಸ್ಥೆ ಹೆಸರುವಾಸಿಯಾಗಿದೆ. ಈ ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಹೊಂದಲಿ. ಜನಸಾಮಾನ್ಯರಿಗೆ ಕೈ ಗೆಟುಕುವ ದರದಲ್ಲಿ ಬಂಗಾರ ಸಿಗುವಂತಾಗಲಿ ಎಂದು ಶುಭಹಾರೈಸಿದರು.

ಬಿಲ್ಡರ್ ಆಸೋಸಿಯೇಶನ್‍ನ ಅಧ್ಯಕ್ಷ ಜೆರ್ರಿ ವಿನ್ಸೆಂಟ್ ಡಯಾಸ್, ದೊಡ್ಡಣಗುಡ್ಡೆ ರೆಹಮಾನಿ ಮಸೀದಿಯ ಧರ್ಮಗುರು ನಾಜೀರ್ ಅಹಮ್ಮದ್ ಶಾದಿ, ಮದರ್ ಆಫ್ ಸಾರೋಸ್ ಚರ್ಚ್‍ನ ಧರ್ಮಗುರು ಚಾಲ್ರ್ಸ್ ಮಿನೇಜಸ್, ಸಹಾಯಕ ಧರ್ಮಗುರು ರೋಮಿಯೋ ಲೂಯಿಸ್ ಶುಭ ಹಾರೈಸಿದರು.

ತನಿಷ್ಕ್ ರೀಜನಲ್ ಮ್ಯಾನೇಜರ್ ರಾಜೀವ್ ಮೆನನ್, ಉದ್ಯಮಿ ಮನೋಹರ್ ಎಸ್. ಶೆಟ್ಟಿ, ಉಡುಪಿ ತನಿಷ್ಕ್ ಶಾಖೆಯ ವ್ಯವಹಾರಿಕ ಪಾಲುದಾರ ಮ್ಯಾಕ್ಸಿಮ್ ಸಲ್ದಾನಾ ಉಪಸ್ಥಿತರಿದ್ದರು.

ಪ್ರತಿ ಖರೀದಿಗೆ ಚಿನ್ನದ ನಾಣ್ಯ:
ಮಳಿಗೆಯ ಉದ್ಘಾಟನೆ ಅಂಗವಾಗಿ ಬ್ರ್ಯಾಂಡ್, ಪ್ರತಿಯೊಂದು ಚಿನ್ನಾಭರಣ ಖರೀದಿಗೆ ಉಚಿತ ಚಿನ್ನದ ನಾಣ್ಯಗಳನ್ನು ಕೊಡುಗೆಯಾಗಿ ನೀಡಲಿದೆ. ಈ ಕೊಡುಗೆ ಜ. 23 ರಿಂದ ಜ. 25 ರ ವರೆಗೆ ಲಭ್ಯವಿದೆ. ಮಳಿಗೆ ಪುನರಾರಂಭದ ಸಂಭ್ರಮಾಚರಣೆ ಅಂಗವಾಗಿ ತನಿಷ್ಕದ ಗರಿಷ್ಠ ಮೌಲ್ಯದ ಮೂಡ್ಸ್ ಆಫ್ ದಿ ಅರ್ಥ್ ಹೆಸರಿನ ವಜ್ರಾಭರಣಗಳ ಸಂಗ್ರಹದ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಹೊಸ ಸ್ವರೂಪದೊಂದಿಗೆ ಶುಭಾರಂಭಗೊಂಡಿರುವ ಉಡುಪಿಯ ತನಿಷ್ಕ್ ಮಳಿಗೆ 3000 ಚದರ ಅಡಿಗಳಷ್ಟು ವಿಸ್ತೀರ್ಣ ಹೊಂದಿದೆ. ವ್ಯಾಪಾಕ ಶ್ರೇಣಿಯ ಚಿನ್ನ, ವಧುವಿನ ಮತ್ತು ವಜ್ರ ಆಭರಣಗಳ ಬೃಹತ್ ಸಂಗ್ರಹವಿದೆ. ಸಾಂಪ್ರದಾಯಿಕ ವಿನ್ಯಾಸಗಳಾದ ಪಲಕ್ಕಾ ಮಾಲಾ, ಮುಳ್ಳಾ ಮೊತ್ತು ಮಾಲಾ, ಕಸುಮಾಲಾ, ಜುಮ್ಕಿಗಳನ್ನು ಒಳಗೊಂಡಿದೆ. ಅತ್ಯಂತ ಶುದ್ಧ ಸ್ವರೂಪದ ಚಿನ್ನಾಭರಣಗಳನ್ನು ನೀಡಲು ಬದ್ಧವಾಗಿರುವ ತನಿಷ್ಕ್ ತನ್ನೆಲ್ಲ ಮಳಿಗೆಗಳಲ್ಲಿ ಕ್ಯಾರೆಟ್ ಮೀಟರ್ ಅಳವಡಿಸಿದೆ. ಇದರಿಂದ ಗ್ರಾಹಕರಿಗೆ ಚಿನ್ನದ ಶುದ್ಧತೆಯನ್ನು ಅತ್ಯಂತ ದಕ್ಷ ವಿಧಾನದಲ್ಲಿ ಪರೀಕ್ಷಿಸಲು ನೆರವಾಗಿದೆ ಎಂದು ತನಿಷ್ಕ್ ರೀಜನಲ್ ಮ್ಯಾನೇಜರ್ ರಾಜೀವ್ ಮೆನನ್ ತಿಳಿಸಿದರು.

error: Content is protected !!