ಉಡುಪಿ: ತಪ್ಪು ಮಾಹಿತಿ ನೀಡಿದ ಇಬ್ಬರು ಕೊರೊನಾ ಸೋಂಕಿತರ ವಿರುದ್ಧ ಪ್ರಕರಣ ದಾಖಲು

ಉಡುಪಿ: ಪ್ರಾಥಮಿಕ ಸಂಪರ್ಕ ಹಾಗೂ ಟ್ರಾವೆಲ್ ಹಿಸ್ಟರಿಯ ಬಗ್ಗೆ ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ನೀಡಿದ ಇಬ್ಬರು ಕೊರೊನಾ ಸೋಂಕಿತರ ವಿರುದ್ಧ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಕೋವಿಡ್ 19 ಸೋಂಕಿತ ರೋಗಿಗಳಾದ 10186 ಮತ್ತು 10187 ತಮ್ಮ ಟ್ರಾವೆಲ್ ಹಿಸ್ಟರಿ ಮತ್ತು ಪ್ರಾಥಮಿಕ ಸಂಪರ್ಕದ ಬಗ್ಗೆ ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ನೀಡಿದ್ದರು. ಅವರು ತಪ್ಪು ಮಾಹಿತಿ ನೀಡಿದ್ದರಿಂದ ಸಂಪರ್ಕಿತರನ್ನು ಶೀಘ್ರವಾಗಿ ಪತ್ತೆಹಚ್ಚಲು ತೊಂದರೆ ಆಗಿದೆ. ಅಲ್ಲದೆ ಈ ರೀತಿ ಮಾಹಿತಿ ಮುಚ್ಚಿಡುವುದು ಅಪರಾಧವಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ವಿರುದ್ಧ […]
ಉಡುಪಿಯಲ್ಲಿ ಶೂನ್ಯಕ್ಕೆ ಇಳಿದ ಕೊರೊನಾ: ಇನ್ನೂ 712 ಮಂದಿ ಸೋಂಕಿತರು ಸಕ್ರಿಯ

ಉಡುಪಿ: ಜಿಲ್ಲೆಯಲ್ಲಿ ಇಂದು ಯಾವುದೇ ಕೊರೊನಾ ಸೋಂಕಿತರು ಪತ್ತೆಯಾಗಿಲ್ಲ. ಇದರಿಂದ ಜಿಲ್ಲೆಯ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯದಿಂದ ಜಿಲ್ಲೆಗೆ ಬಂದಿರುವವರ ಕೊರೊನಾ ಪರೀಕ್ಷೆ ನಿನ್ನೆಗೆ ಮುಗಿದಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇಂದು ಯಾವುದೇ ಸೋಂಕಿತರು ಕಂಡುಬಂದಿಲ್ಲ. ಈವರೆಗೆ ಜಿಲ್ಲೆಯಲ್ಲಿ 947 ಮಂದಿ ಸೋಂಕಿತರು ಪತ್ತೆಯಾಗಿದ್ದು, ಅದರಲ್ಲಿ 234 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನು ಜಿಲ್ಲೆಯಲ್ಲಿ 712 ಸಕ್ರಿಯ ಪ್ರಕರಣಗಳಿವೆ. ಒಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಉಡುಪಿ: ಮುಂಬೈನಿಂದ ಬಂದ 45 ಮಂದಿ, ಸ್ಥಳೀಯ ಲ್ಯಾಬ್ ಟೆಕ್ನಿಷನ್ ಮಗುವಿಗೆ ಕೊರೊನಾ ಪಾಸಿಟಿವ್

ಉಡುಪಿ: ಮುಂಬೈಯಿಂದ ಉಡುಪಿ ಜಿಲ್ಲೆಗೆ ಬಂದ 44 ಮಂದಿ ಹಾಗೂ ಸ್ಥಳೀಯ ಲ್ಯಾಬ್ ಟೆಕ್ನಿಷನ್ ಮಗುವಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. 45 ಸೋಂಕಿತರ ಪೈಕಿ 30 ಪುರುಷರು, 11 ಮಹಿಳೆಯರು ಹಾಗೂ 4 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಉಡುಪಿ ತಾಲ್ಲೂಕಿನ 9, ಕುಂದಾಪುರ ತಾಲ್ಲೂಕಿನ 34 ಹಾಗೂ ಕಾರ್ಕಳ ತಾಲ್ಲೂಕಿನ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಹೊರರಾಜ್ಯದಿಂದ ಬಂದವರ ಪರೀಕ್ಷೆ ಪೂರ್ಣ: ಹೊರರಾಜ್ಯದಿಂದ ಜಿಲ್ಲೆಗೆ […]
ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಕೊರೊನಾ ನೆಗೆಟಿವ್ ಯುವಕ ಅಸ್ವಸ್ಥ: ಮತ್ತೊಮ್ಮೆ ಕೋವಿಡ್ ಟೆಸ್ಟ್ ನಡೆಸುವಂತೆ ಜನರ ಆಗ್ರಹ
ಉಡುಪಿ: ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ವಲಸೆ ಕಾರ್ಮಿಕರಿಗೆ ಊಟವನ್ನು ಉಡುಪಿಯಲ್ಲಿ ನಿತ್ಯವು ಸಂಘ ಸಂಸ್ಥೆಗಳು, ಸಮಾಜಸೇವಕರು ವಿತರಿಸುತ್ತಿದ್ದಾರೆ. ಸಿಟಿ ಬಸ್ಸು ನಿಲ್ದಾಣದಲ್ಲಿ ವಲಸೆ ಕಾರ್ಮಿಕರಿಗೆ ಉಚಿತ ಆಹಾರದ ಪೊಟ್ಟಣಗಳನ್ನು ವಿತರಿಸಲಾಗುತ್ತದೆ. ಮಂಗಳವಾರ ಮಧ್ಯಾಹ್ನ ಅಲ್ಲಿಗೆ ಊಟ ಸ್ವೀಕರಿಸಲು ಬಂದಿರುವ ಅಪರಿಚಿತ ವಲಸೆ ಕಾರ್ಮಿಕ ಅಸ್ವಸ್ಥಗೊಂಡು ಬಿದ್ದ ಘಟನೆ ನಡೆದಿದೆ. ಊಟ ವಿತರಕ ಮಹಮ್ಮದ್ ಶ್ರೀಶ್ ಅವರು ತಕ್ಷಣ ಆತನಿಗೆ ಪ್ರಾಥಮಿಕವಾಗಿ ಉಪಚರಿಸಿ, ನಂತರ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ನಿತ್ಯಾನಂದ ಒಳಕಾಡು ಅವರು […]