udupixpress
Home Trending ಉಡುಪಿಯಲ್ಲಿ ಶೂನ್ಯಕ್ಕೆ ಇಳಿದ ಕೊರೊನಾ: ಇನ್ನೂ 712 ಮಂದಿ ಸೋಂಕಿತರು ಸಕ್ರಿಯ 

ಉಡುಪಿಯಲ್ಲಿ ಶೂನ್ಯಕ್ಕೆ ಇಳಿದ ಕೊರೊನಾ: ಇನ್ನೂ 712 ಮಂದಿ ಸೋಂಕಿತರು ಸಕ್ರಿಯ 

ಉಡುಪಿ: ಜಿಲ್ಲೆಯಲ್ಲಿ ಇಂದು ಯಾವುದೇ ಕೊರೊನಾ ಸೋಂಕಿತರು ಪತ್ತೆಯಾಗಿಲ್ಲ. ಇದರಿಂದ ಜಿಲ್ಲೆಯ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯದಿಂದ ಜಿಲ್ಲೆಗೆ ಬಂದಿರುವವರ ಕೊರೊನಾ ಪರೀಕ್ಷೆ ನಿನ್ನೆಗೆ ಮುಗಿದಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇಂದು ಯಾವುದೇ ಸೋಂಕಿತರು ಕಂಡುಬಂದಿಲ್ಲ. ಈವರೆಗೆ ಜಿಲ್ಲೆಯಲ್ಲಿ 947 ಮಂದಿ ಸೋಂಕಿತರು ಪತ್ತೆಯಾಗಿದ್ದು, ಅದರಲ್ಲಿ 234 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನು ಜಿಲ್ಲೆಯಲ್ಲಿ 712 ಸಕ್ರಿಯ ಪ್ರಕರಣಗಳಿವೆ. ಒಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
error: Content is protected !!