ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಕೊರೊನಾ ನೆಗೆಟಿವ್ ಯುವಕ ಅಸ್ವಸ್ಥ: ಮತ್ತೊಮ್ಮೆ ಕೋವಿಡ್ ಟೆಸ್ಟ್ ನಡೆಸುವಂತೆ ಜನರ ಆಗ್ರಹ

ಉಡುಪಿ: ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ವಲಸೆ ಕಾರ್ಮಿಕರಿಗೆ ಊಟವನ್ನು ಉಡುಪಿಯಲ್ಲಿ ನಿತ್ಯವು ಸಂಘ ಸಂಸ್ಥೆಗಳು, ಸಮಾಜಸೇವಕರು ವಿತರಿಸುತ್ತಿದ್ದಾರೆ. ಸಿಟಿ ಬಸ್ಸು ನಿಲ್ದಾಣದಲ್ಲಿ ವಲಸೆ ಕಾರ್ಮಿಕರಿಗೆ ಉಚಿತ ಆಹಾರದ ಪೊಟ್ಟಣಗಳನ್ನು ವಿತರಿಸಲಾಗುತ್ತದೆ. ಮಂಗಳವಾರ ಮಧ್ಯಾಹ್ನ ಅಲ್ಲಿಗೆ ಊಟ ಸ್ವೀಕರಿಸಲು ಬಂದಿರುವ ಅಪರಿಚಿತ ವಲಸೆ ಕಾರ್ಮಿಕ ಅಸ್ವಸ್ಥಗೊಂಡು ಬಿದ್ದ ಘಟನೆ ನಡೆದಿದೆ. ಊಟ ವಿತರಕ ಮಹಮ್ಮದ್ ಶ್ರೀಶ್ ಅವರು ತಕ್ಷಣ ಆತನಿಗೆ ಪ್ರಾಥಮಿಕವಾಗಿ ಉಪಚರಿಸಿ, ನಂತರ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ನಿತ್ಯಾನಂದ ಒಳಕಾಡು ಅವರು ರೋಗಿಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲು ಪಡಿಸಿದ್ದಾರೆ.

ಅಸ್ವಸ್ಥ ಯುವಕ, ಸಿರಾಜ್ (29 ವ) ತಂದೆ ಜಲಾಲ್- ತಿರುಚ್ಚಿ, ತಂಜಾವೂರು ಇಲ್ಲಿಯ ನಿವಾಸಿ, ಎರುಡು ಬಾರಿ ಕೊರೊನಾ ಕೊವಿಡ್-19 ಶಂಕಿತ ರೋಗಿಯಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದೆ. ವೈದ್ಯಕೀಯ ತಪಾಸಣಾ ವರದಿ ನೆಗೆಟಿಯು ಬಂದಿತು. ಹಾಗಾಗಿ ನನ್ನ ಆಸ್ಪತ್ರೆಯಿಂದ ಬಿಡುಗಡೆ ಮಾಡಿದರು. ಈಗ ನನ್ನ ಆರೋಗ್ಯವು ಪುನಃ ಹದಗೆಟ್ಟಿದೆ, ರಕ್ತಹೀನತೆಯಿಂದ ದೇಹದಲ್ಲಿ ಬಲ ಇಲ್ಲದಂತಾಗಿದೆ ಎಂದು ರೋಗಿ ಹೇಳಿಕೊಂಡಿದ್ದಾನೆ. ರೋಗಿ ಬಾಯ್ಬಿಟ್ಟಿರುವ ವಿಚಾರವು ಕೇಳಿ ಸ್ಥಳದಲ್ಲಿ ಆತಂಕ ಪಡುವಂತ ವಾತಾವರಣ ನಿರ್ಮಾಣವಾಯಿತು.

ಮುನ್ನೇಚ್ಚರಿಕೆಯ ಕ್ರಮವಾಗಿ ರಕ್ಷಣಾ ಕಾರ್ಯಚರಣೆಗೆ ಬಳಿಸಿದ ಅಂಬುಲೇನ್ಸ್ ವಾಹನವನ್ನು ಕ್ರೀಮಿನಾಶಕ ಸಿಂಪಡಿಸಿ ನಿತ್ಯಾನಂದ ಒಳಕಾಡು ಅವರು ಶುಚಿಗೊಳಿಸಿದ್ದಾರೆ. ಆರೋಗ್ಯ ಇಲಾಖೆ ಈ ಯುವಕನಿಗೆ ಮಗದೂಮ್ಮೆ ಕೊವಿಡ್-19 ತಪಾಸಣೆ ನಡೆಸಬೇಕೆಂದು ಸಾರ್ವಜನಿಕ ವಲಯದಲ್ಲಿ ಆಗ್ರಹವು ವ್ಯಕ್ತವಾಗಿದೆ.