ಉಡುಪಿ ನಾಗರಿಕ‌ ಸಮಿತಿಯಿಂದ ಮಾಸ್ಕ್ ದಿನಾಚರಣೆ: ಬಹೃತ್ ಗಾತ್ರದ ಮಾಸ್ಕ್ ಪ್ರದರ್ಶನ

ಉಡುಪಿ: ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ಅಭಿಯಾನ ‘ಮಾಸ್ಕ್ ದಿನಾಚರಣೆ’ ಕಾರ್ಯಕ್ರಮ ನಗರದ ಮಾರುಥಿ ವಿಥೀಕಾದಲ್ಲಿ ಗುರುವಾರ ನಡೆಯಿತು. ಸಾಯಿರಾಂ ಬಟ್ಟೆ ಮಳಿಗೆಯವರು ಉಚಿತವಾಗಿ ಒದಗಿಸಿದ ಹತ್ತಿಬಟ್ಟೆ ಬಳಸಿಕೊಂಡು ಕ್ಲಾಸಿಕ್ ಟಚ್ ಟೈಲರ್ಸ್ ತಂಡದವರು ತಯಾರಿಸಿದ, 6 ಅಡಿ ಉದ್ದ, 5 ಅಡಿ ಅಗಲದ ಬೃಹತ್ ಗಾತ್ರದ ಮಾಸ್ಕ್ ನ ಪ್ರದರ್ಶನ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ಅವರು, […]

ನಾಳೆ ನಾಗರಿಕ ಸಮಿತಿಯಿಂದ ಮಾಸ್ಕ್ ಡೇ ಕಾರ್ಯಕ್ರಮ: ಬೃಹತ್ ಮಾಸ್ಕ್ ಪ್ರದರ್ಶನ

ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ “ಮಾಸ್ಕ್ ಡೇ” ಕಾರ್ಯಕ್ರಮವನ್ನು ಜೂ. 18ರಂದು ಬೆಳಿಗ್ಗೆ 10.30ಕ್ಕೆ ನಗರದ ಚಿತ್ತರಂಜನ್ ಸರ್ಕಲ್ ಸಮೀಪ ಆಯೋಜಿಸಲಾಗಿದೆ. ಇದೇ ವೇಳೆ ಕ್ಲಾಸಿಕ್ ಟಚ್ ಇವರು ನಿರ್ಮಿಸಿದ ಬೃಹತ್ ಗಾತ್ರದ ಮಾಸ್ಕ್ (ಮುಖ  ಕವಚ) ಪ್ರದರ್ಶನ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ.