udupixpress
Home Trending ಉಡುಪಿ ನಾಗರಿಕ‌ ಸಮಿತಿಯಿಂದ ಮಾಸ್ಕ್ ದಿನಾಚರಣೆ: ಬಹೃತ್ ಗಾತ್ರದ ಮಾಸ್ಕ್ ಪ್ರದರ್ಶನ

ಉಡುಪಿ ನಾಗರಿಕ‌ ಸಮಿತಿಯಿಂದ ಮಾಸ್ಕ್ ದಿನಾಚರಣೆ: ಬಹೃತ್ ಗಾತ್ರದ ಮಾಸ್ಕ್ ಪ್ರದರ್ಶನ

ಉಡುಪಿ: ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ಅಭಿಯಾನ ‘ಮಾಸ್ಕ್ ದಿನಾಚರಣೆ’ ಕಾರ್ಯಕ್ರಮ ನಗರದ ಮಾರುಥಿ ವಿಥೀಕಾದಲ್ಲಿ ಗುರುವಾರ ನಡೆಯಿತು.
ಸಾಯಿರಾಂ ಬಟ್ಟೆ ಮಳಿಗೆಯವರು ಉಚಿತವಾಗಿ ಒದಗಿಸಿದ ಹತ್ತಿಬಟ್ಟೆ ಬಳಸಿಕೊಂಡು ಕ್ಲಾಸಿಕ್ ಟಚ್ ಟೈಲರ್ಸ್ ತಂಡದವರು ತಯಾರಿಸಿದ, 6 ಅಡಿ ಉದ್ದ, 5 ಅಡಿ ಅಗಲದ ಬೃಹತ್ ಗಾತ್ರದ ಮಾಸ್ಕ್ ನ ಪ್ರದರ್ಶನ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ಅವರು, ಕೊರೊನಾ ಸೋಂಕು ಸಮುದಾಯಕ್ಕೆ ಹರಡದಂತೆ ನಿಯಂತ್ರಿಸುವ ಮುನ್ನೆಚ್ಚರಿಕೆಯ ಅಗತ್ಯ ಕ್ರಮಗಳನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಕೊರೊನಾ ನೊಡಲ್ ಅಧಿಕಾರಿ ಡಾ. ಪ್ರಶಾಂತ್ ಭಟ್, ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಕ್ತಿವೇಲು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಪ್ರಾಸ್ತಾವಿಕ ಮಾತನಾಡಿದರು. ಸಹಸಂಚಾಲಕ ತಾರಾನಾಥ್ ಮೇಸ್ತ ಶಿರೂರು ವಂದಿಸಿದರು.  ರಾಜೇಶ್ ಶೆಟ್ಟಿ, ರಾಘವೇಂದ್ರ ಕರ್ವಾಲು, ಸಮಿತಿಯ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.
error: Content is protected !!