ನಾಳೆ ನಾಗರಿಕ ಸಮಿತಿಯಿಂದ ಮಾಸ್ಕ್ ಡೇ ಕಾರ್ಯಕ್ರಮ: ಬೃಹತ್ ಮಾಸ್ಕ್ ಪ್ರದರ್ಶನ

ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ “ಮಾಸ್ಕ್ ಡೇ” ಕಾರ್ಯಕ್ರಮವನ್ನು ಜೂ. 18ರಂದು ಬೆಳಿಗ್ಗೆ 10.30ಕ್ಕೆ ನಗರದ ಚಿತ್ತರಂಜನ್ ಸರ್ಕಲ್ ಸಮೀಪ ಆಯೋಜಿಸಲಾಗಿದೆ.
ಇದೇ ವೇಳೆ ಕ್ಲಾಸಿಕ್ ಟಚ್ ಇವರು ನಿರ್ಮಿಸಿದ ಬೃಹತ್ ಗಾತ್ರದ ಮಾಸ್ಕ್ (ಮುಖ  ಕವಚ) ಪ್ರದರ್ಶನ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ.