ಕೊರೊನಾ ಭೀತಿ, ಕಾರ್ಮಿಕರ ಅಲಭ್ಯತೆ: ಉಡುಪಿ ಜಿಲ್ಲೆಯಲ್ಲಿ ಆರಂಭಗೊಳ್ಳದ ಯಾಂತ್ರೀಕೃತ ಮೀನುಗಾರಿಕೆ

ಉಡುಪಿ: ಜಿಲ್ಲೆಯಲ್ಲಿ ಆಗಸ್ಟ್ 1ರಿಂದ ಯಾಂತ್ರೀಕೃತ ಮೀನುಗಾರಿಕೆ ಆರಂಭವಾಗಬೇಕಿತ್ತು. ಆದರೆ ಕೊರೊನಾ ಸೋಂಕು ಇದಕ್ಕೆ ತಡೆಯೊಡ್ಡಿದ್ದು, ಮೀನುಗಾರರು ಸೋಂಕಿಗೆ ಭಯಗೊಂಡು ಕಡಲಿಗೆ ಇಳಿಯಲು ಹಿಂದೇಟು ಹಾಕುತ್ತಿದ್ದಾರೆ. ಮೀನುಗಾರರು ಅಥವಾ ಬಂದರಿನಲ್ಲಿ ದುಡಿಯುವ ಕಾರ್ಮಿಕರಿಗೆ ಒಂದು ವೇಳೆ ಕೊರೊನಾ ಸೋಂಕು ತಗುಲಿದರೆ, ಇಡೀ ಮೀನುಗಾರಿಕಾ ಬಂದರನ್ನು ಸೀಲ್ ಡೌನ್ ಮಾಡಬೇಕಾದ ಪ್ರಮೇಯ ಎದುರಾಗಬಹುದು ಎಂದು ಮೀನುಗಾರರು ಮೀನುಗಾರಿಕೆ ಹೋಗಲು ಹಿಂಜರಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮಲ್ಪೆ ಬಂದರಿನಲ್ಲಿ 1500ಕ್ಕೂ ಹೆಚ್ಚಿನ ಯಾಂತ್ರೀಕೃತ ಬೋಟಗಳು ಮೀನುಗಾರಿಕೆ ನಡೆಸುತ್ತಿವೆ. ಕರಾವಳಿ ತೀರದ ಜನರು […]