ಉಡುಪಿ, ದ.ಕ. ಜಿಲ್ಲೆಯ ಐದು ಟೋಲ್ ಗೇಟ್ ಗಳಲ್ಲಿ ಹಗಲು ದರೋಡೆ: ಯೋಗೀಶ್ ಶೆಟ್ಟಿ
ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೇವಲ 93 ಕಿ.ಮೀ. ಅಂತರದಲ್ಲಿ ಇರುವ ಐದು ಟೋಲ್ ಗಳಲ್ಲಿ ಪ್ರತಿದಿನ ಹಗಲು ದರೋಡೆ ನಡೆಯುತ್ತಿದೆ ಎಂದು ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಆರೋಪಿಸಿದ್ದಾರೆ. ಕಾನೂನು ಪ್ರಕಾರ ರಸ್ತೆ ನಿರ್ವಹಣಾ ಶುಲ್ಕ ಸಂಗ್ರಹಿಸುವ ಟೋಲ್ ಗೇಟ್ ಗಳು ಕನಿಷ್ಠ 60 ಕಿ.ಮೀ. ಅಂತರದಲ್ಲಿ ಇರಬೇಕು. ಆದರೆ ಉಭಯ ಜಿಲ್ಲೆಗಳಲ್ಲಿ ಕೇವಲ 93 ಕಿ.ಮೀ. ಅಂತರದಲ್ಲಿ ಐದು ಟೋಲ್ ಗಳಿವೆ. ಇದರ ಮೂಲಕ ವಾಹನ ಚಾಲಕರನ್ನು ಲೂಟಿ ಮಾಡುವ […]